ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ತಾಲಿಬಾನ್ ಮೊದಲು ಶಸ್ತ್ರಾಸ್ತ್ರ ಕೆಳಗಿಡಲಿ: ಅಫ್ಘಾನ್ (Afghanistan | Hamid Karzai | Taliban | al Qaeda,)
Bookmark and Share Feedback Print
 
ತಾಲಿಬಾನ್ ಉಗ್ರರು ಮೊದಲು ಶಸ್ತ್ರಾಸ್ತ್ರವನ್ನು ಕೆಳಗಿಡಲಿ ಎಂದು ಮನವಿ ಮಾಡಿಕೊಂಡಿರುವ ಅಫ್ಘಾನಿಸ್ತಾನ್ ಅಧ್ಯಕ್ಷ, ತಾಲಿಬಾನಿಯರು ಅಫ್ಘಾನ್ ಸರ್ಕಾರದ ಕಾನೂನನ್ನು ಗೌರವಿಸಲಿ ಎಂದು ತಿಳಿಸಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ಅಟ್ಟಹಾಸಗೈದು, ತಮ್ಮ ಪ್ರಾಬಲ್ಯವನ್ನು ಸ್ಥಾಪಿಸಲು ಹೊರಟಿರುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿದೇಶಿ ರಾಷ್ಟ್ರಗಳು ಬೆಂಬಲ ನೀಡುವುದನ್ನು ಸ್ವಾಗತಿಸಿರುವ ಅಧ್ಯಕ್ಷ ಹಮೀದ್ ಕರ್ಜಾಯ್, ಅಫ್ಘಾನಿಸ್ತಾನದಲ್ಲಿ ಉಗ್ರರನ್ನು ಮಟ್ಟಹಾಕುವಲ್ಲಿ ಸರ್ಕಾರ ಬದ್ಧವಾಗಿದೆ ಎಂದು ಪುನರುಚ್ಚರಿಸಿದರು.

ಆ ನಿಟ್ಟಿನಲ್ಲಿ ತಾಲಿಬಾನ್ ಉಗ್ರರು ಮೊದಲು ಶಸ್ತ್ರಾಸ್ತ್ರವನ್ನು ತ್ಯಜಿಸಲಿ ಎಂದು ಸಲಹೆ ನೀಡಿರುವ ಅವರು, ಇದರಿಂದಾಗಿ ಯಾವುದೇ ದುರಂತ ಸಂಭವಿಸುವುದಿಲ್ಲ. ತಾಲಿಬಾನಿಗಳು ತಮ್ಮ ಹಠವನ್ನೇ ಮುಂದುವರಿಸಿದಲ್ಲಿ ಅದರ ಪರಿಣಾಮ ಎದುರಿಸಬೇಕಾದೀತು ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.

ಅಲ್ಲದೇ, ತಾಲಿಬಾನ್ ಮುಖಂಡರಿಗೆ ಸರ್ಕಾರದೊಂದಿಗೆ ಮಾತುಕತೆ ನಡೆಸುವ ಇಚ್ಛೆ ಇದ್ದಲ್ಲಿ ಅದಕ್ಕೆ ಸ್ವಾಗತವಿದೆ. ಆದರೆ ಅಲ್ ಖಾಯಿದಾ ಜೊತೆ ಮಾತುಕತೆಯಾಗಲಿ, ಎರಡೂ ಸಂಘಟನೆಗಳೊಂದಿಗೆ ಚರ್ಚೆ ನಡೆಸಬೇಕೆಂಬ ಬೇಡಿಕೆಯನ್ನು ಒಪ್ಪಲು ಸಾಧ್ಯವಿಲ್ಲ. ಯಾಕೆಂದರೆ ಉಗ್ರಗಾಮಿಗಳಿಗೆ ಅಫ್ಘಾನ್ ನೆಲದಲ್ಲಿ ಯಾವುದೇ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದರು.

ಅಫ್ಘಾನಿಸ್ತಾನದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ತರುವ ನಿಟ್ಟಿನಲ್ಲಿ ಶ್ರಮಿಸಲಾಗುತ್ತಿದೆ ಎಂದು ಲಂಡನ್‌ನಿಂದ ವಾಪಸ್ಸಾಗುತ್ತಿದ್ದ ವೇಳೆ ಪತ್ರಕರ್ತರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ