ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸಮೀಕ್ಷೆ ಪ್ರಕಾರ ಬ್ರಿಟನ್‌ನಲ್ಲೂ ಬುರ್ಖಾ ನಿಷೇಧಕ್ಕೆ ಭಾರೀ ಬೆಂಬಲ (ban on burqa | burqa | Muslim women | Britain)
Bookmark and Share Feedback Print
 
ಫ್ರಾನ್ಸ್‌ನಲ್ಲಿ ಬುರ್ಖಾದ ಮೇಲೆ ನಿಷೇಧ ಹೇರುವ ಸಿದ್ಧತೆಗಳು ನಡೆಯುತ್ತಿದ್ದಂತೆಯೇ ಬ್ರಿಟನ್‌ನಲ್ಲೂ ಇದಕ್ಕೆ ಪರವಾದ ಮಾತುಗಳು ಕೇಳಿ ಬರುತ್ತಿವೆ. ಸಮೀಕ್ಷೆಯೊಂದರ ಪ್ರಕಾರ ಮೂರನೇ ಎರಡಷ್ಟು ಇಂಗ್ಲೆಂಡ್ ಜನತೆ ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಧರಿಸಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಬ್ರಿಟನ್‌ನಲ್ಲಿ ಅಷ್ಟೇನೂ ಜನಪ್ರಿಯವಲ್ಲದ ಮುಸ್ಲಿಂ ಮಹಿಳೆಯರು ಧರಿಸುವ ಬುರ್ಖಾ ಅಥವಾ ಮುಖ ಮುಚ್ಚುವ ಶಾಲಿನ ಬಗ್ಗೆ ಸಮೀಕ್ಷೆ ನಡೆಸಲಾಗಿತ್ತು. ಅದರ ಪ್ರಕಾರ ಶೇ.64ರಷ್ಟು ಮಂದಿ ಬ್ಯಾಂಕುಗಳು, ವಿಮಾನ ನಿಲ್ದಾಣಗಳು ಮತ್ತಿತರ ಸಾರ್ವಜನಿಕ ಸ್ಥಳದಲ್ಲಿ ಬುರ್ಖಾ ಧರಿಸುವುದು ಕಾನೂನು ಬಾಹಿರ ಎಂದು ಘೋಷಿಸಬೇಕು ಎಂದು ತಮ್ಮ ವಾದ ಮಂಡಿಸಿದ್ದಾರೆ.

ಆದರೆ ಇದನ್ನು ಶೇ.33 ಮಂದಿ ಇದನ್ನು ವಿರೋಧಿಸಿದ್ದರೆ, ಶೇ.4ರಷ್ಟು ಪ್ರಜೆಗಳು ಯಾವ ಉತ್ತರವನ್ನೂ ನೀಡಿಲ್ಲ.

ಶಾಲೆಗಳಲ್ಲಿ ಶಿಕ್ಷಕಿಯರು ಬುರ್ಖಾ ಧರಿಸದಂತೆ ನಿಯಮಗಳನ್ನು ತರಬೇಕು ಎಂಬುದಕ್ಕೆ ಶೇ.61ರಷ್ಟು ಮಂದಿ ಬೆಂಬಲ ಸೂಚಿಸಿದ್ದಾರೆ, ಶೇ.35ರಷ್ಟು ಮಂದಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರೆ, ಶೇ.4ರಷ್ಟು ಜನತೆ ಯಾವ ಉತ್ತರವನ್ನೂ ನೀಡಿಲ್ಲ ಎಂದು ಆಂಗ್ಲ ಪತ್ರಿಕೆ 'ಡೈಲೀ ಎಕ್ಸ್‌ಪ್ರೆಸ್' ವರದಿ ಮಾಡಿದೆ.

ಫ್ರಾನ್ಸ್ ಮತ್ತು ಇಟಲಿಗಳು ಬುರ್ಖಾ ಮೇಲೆ ನಿಷೇಧ ಹೇರುವ ಸಿದ್ಧತೆಯು ವಿಶ್ವದ ಗಮನ ಸೆಳೆಯುತ್ತಿರುವುದರಿಂದ 'ಕಾಮ್‌ರೆಸ್' ಎಂಬ ಸಮೀಕ್ಷೆ ನಡೆಸುವ ಸಂಸ್ಥೆ ಸಾರ್ವಜನಿಕರನ್ನು ಮಾತನಾಡಿಸಿ ಅಭಿಪ್ರಾಯ ಸಂಗ್ರಹಿಸಿತ್ತು.

ಬ್ರಿಟನ್‌ನ ಬಹುತೇಕ ಅಂಗಡಿ-ಮಳಿಗೆಗಳು ಮುಖ ಮುಚ್ಚುವ ದಿರಿಸಿನೊಂದಿಗೆ ಬರುವ ಗ್ರಾಹಕರ ಮೇಲೆ ನಿಷೇಧ ಹೇರಿದೆ. ಮುಸ್ಲಿಮರ ಬುರ್ಖಾ ಕೂಡ ಇದರಿಂದ ಭಿನ್ನವೇನಲ್ಲ ಎಂದು ಇಂಡಿಪೆಂಡೆನ್ಸ್ ಪಾರ್ಟಿ ಎಂಇಪಿ ನೈಜೆಲ್ ಫರಾಗೆ ಅಭಿಪ್ರಾಯಪಟ್ಟಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ