ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಟಿಬೆಟ್ ವಿಷಯದಲ್ಲಿ ಯಾವುದೇ ರಿಯಾಯಿತಿ ಇಲ್ಲ: ಚೀನಾ (Dharamshala | China | Tibet talks | Dalai Lama | Communist)
Bookmark and Share Feedback Print
 
ಟಿಬೆಟ್ ಸಾರ್ವಭೌಮತೆಯ ವಿಷಯದಲ್ಲಿ ಯಾವುದೇ ರಿಯಾಯಿತಿ ಇಲ್ಲ ಎಂದು ಟಿಬೆಟ್ ಧಾರ್ಮಿಕ ಮುಖಂಡ ದಲೈ ಲಾಮಾ ಅವರ ವಿಶೇಷ ಪ್ರತಿನಿಧಿಗೆ ಚೀನಾ ಸ್ಪಷ್ಟಪಡಿಸಿದೆ.

ಟಿಬೆಟ್ ವಿವಾದ ಕುರಿತಂತೆ ಚೀನಾದ ಕಮ್ಯುನಿಷ್ಟ್ ಪಕ್ಷದ ಉನ್ನತ ಅಧಿಕಾರಿಗಳು ಟಿಬೆಟ್ ವಿಶೇಷ ಪ್ರತಿನಿಧಿ ಜೊತೆಗೆ 9ನೇ ಬಾರಿಗೆ ರಹಸ್ಯವಾಗಿ ನಡೆಸಿದ ಮಾತುಕತೆಯಲ್ಲಿ ಅಂತಿಮ ನಿರ್ಧಾರಕ್ಕೆ ಬಂದಿದೆ.

ಚೀನಾದ ರಾಷ್ಟ್ರೀಯ ಸಾರ್ವಭೌಮತೆಗೆ ಸಂಬಂಧಿಸಿದಂತೆ ಟಿಬೆಟ್ ವಿಷಯದಲ್ಲಿ ಯಾವುದೇ ರಿಯಾಯಿತಿ ಇಲ್ಲ ಎಂದು ಚೀನಾ ಸ್ಪಷ್ಟವಾಗಿ ಹೇಳಿರುವುದಾಗಿ ಕ್ಸಿನ್‌ಹುವಾ ನ್ಯೂಸ್ ಏಜೆನ್ಸಿ ವರದಿ ತಿಳಿಸಿದೆ.

ಟಿಬೆಟ್ ವಿಷಯ ಕುರಿತಾಗಿ ದಲೈಲಾಮಾ ಅವರ ಪ್ರತಿನಿಧಿಯಾಗಿ ಲೋದಿ ಗ್ಯಾರಿ ಮತ್ತು ಕೆಲ್ಸಾಂಗ್ ಗ್ಯಾಲ್ಟ್‌ಸೆನ್ ಅವರು ತಮ್ಮ ಅಭಿಪ್ರಾಯವನ್ನು ಯಾವುದೇ ಹೆಚ್ಚಿನ ವಿವರಣೆ ನೀಡದೆ ಮಂಡಿಸಿರುವುದಾಗಿ ವರದಿ ಹೇಳಿದೆ.
ಸಂಬಂಧಿತ ಮಾಹಿತಿ ಹುಡುಕಿ