ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮೆಹ್ಸೂದ್ ಸಾವು ಅಲ್‌ಖೈದಾಕ್ಕೆ ಪ್ರಬಲ ಹೊಡೆತ: ಅಮೆರಿಕಾ (Al Qaeda | Tehrik-i-Taliban | Hakimullah Mehsud | Baitullah Mehsud)
Bookmark and Share Feedback Print
 
ತೆಹ್ರಿಕ್ ಇ ತಾಲಿಬಾನ್ ಮುಖ್ಯಸ್ಥ ಹಕೀಮುಲ್ಲಾ ಮೆಹ್ಸೂದ್‌ ಕೊಲ್ಲಲ್ಪಟ್ಟಿದ್ದಾನೆ ಎಂದು ಬಲವಾಗಿ ವಾದಿಸುತ್ತಿರುವ ಅಮೆರಿಕಾ ಅಧಿಕಾರಿಗಳ ಪ್ರಕಾರ ಅವನ ಸ್ಥಾನಕ್ಕೆ ಇನ್ನೊಬ್ಬ ಪ್ರಬಲ ಕಮಾಂಡರ್‌ನನ್ನು ತರುವುದು ಅಲ್‌ಖೈದಾಕ್ಕೆ ಕಷ್ಟದ ಕೆಲಸ ಎಂದು ಅಭಿಪ್ರಾಯಪಟ್ಟಿದ್ದಾರೆ.

ಬೈತುಲ್ಲಾ ಮೆಹ್ಸೂದ್ ಸತ್ತ ನಂತರ ಹಕೀಮುಲ್ಲಾ ಮೆಹ್ಸೂದ್‌ನನ್ನು ಅಲ್‌ಖೈದಾ ಆ ಹುದ್ದೆಗೇರಿಸಿತ್ತು. ಆತನೇ ಅದಕ್ಕೆ ಅರ್ಹ ಎನ್ನುವುದನ್ನು ಮನಗಂಡಿದ್ದ ಅಲ್‌ಖೈದಾ ಇಂತಹ ಖಚಿತ ನಿರ್ಧಾರಕ್ಕೆ ಬಂದಿತ್ತು. ಅಫಘಾನಿಸ್ತಾನದಲ್ಲಿನ ಅಮೆರಿಕಾ ನೆಲೆ ಮೇಲೆ ನಡೆಸಿದ ದಾಳಿಯಿಂದಲೇ ಆತನ ಪಾತ್ರದ ಮೇಲೆ ಅಲ್‌ಖೈದಾ ಎಷ್ಟು ಭರವಸೆ ಇಟ್ಟಿತ್ತು ಎಂಬುದನ್ನು ತೋರಿಸಿದೆ ಎಂದು ಅಮೆರಿಕಾ ಅಧಿಕಾರಿಗಳು ಹೇಳಿದ್ದಾರೆಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಜನವರಿ 14ರಂದು ಅಮೆರಿಕಾ ನಡೆಸಿದ ಡ್ರೋನ್ ದಾಳಿಯಲ್ಲಿ ತೀವ್ರ ಗಾಯಗೊಂಡಿದ್ದ ಮೆಹ್ಸೂದ್ ಕಳೆದ ವಾರಾಂತ್ಯದಲ್ಲಿ ಸಾವನ್ನಪ್ಪಿದ್ದಾನೆ ಎಂದು ಶೇ.90ರಷ್ಟು ಖಚಿತ ನಿರ್ಧಾರಕ್ಕೆ ಅಮೆರಿಕಾ ಗುಪ್ತಚರ ವಿಭಾಗಗಳು ಬಂದಿರುವ ವರದಿಗಳನ್ನು ನೀಡಿವೆ ಎಂದು ಬರಾಕ್ ಒಬಾಮಾ ಆಡಳಿತ ತಿಳಿಸಿದೆ.

ಆತನನ್ನು ಪಾಕಿಸ್ತಾನದ ಬುಡಕಟ್ಟು ಪ್ರದೇಶದಲ್ಲಿ ದಫನ ಮಾಡಲಾಗುತ್ತದೆ ಎಂದು ನಂಬಲಾಗಿದೆ ಎಂದೂ ಪತ್ರಿಕೆ ತಿಳಿಸಿದೆ.

ಕಳೆದ ವರ್ಷದ ಡಿಸೆಂಬರ್‌ನಲ್ಲಿ ಅಫಘಾನಿಸ್ತಾನದಲ್ಲಿನ ಸಿಐಎ ನೆಲೆ ಮೇಲೆ ಬಾಂಬ್ ದಾಳಿ ನಡೆಸಿದ ಐವರು ಅಧಿಕಾರಿಗಳು ಮತ್ತು ಇಬ್ಬರು ಖಾಸಗಿ ಗುತ್ತಿಗೆದಾರರನ್ನು ಕೊಂದು ಹಾಕಿದ್ದ ಘಟನೆಗೆ ತಾನೇ ಕಾರಣ ಎಂದು ಮೆಹ್ಸೂದ್ ಒಪ್ಪಿಕೊಂಡ ಬಳಿಕ ಅಮೆರಿಕಾ ಆತನನ್ನು ಮುಗಿಸಲು ಶತಯತ್ನ ನಡೆಸಿತ್ತು. ಅಮೆರಿಕಾ ನೆಲೆ ಮೇಲೆ ಕಳೆದ 20 ವರ್ಷಗಳಲ್ಲಿ ನಡೆದ ಅತಿ ದೊಡ್ಡ ದಾಳಿ ಎಂದೇ ಇದನ್ನು ಹೇಳಲಾಗಿತ್ತು.

ಮೆಹ್ಸೂದ್ ಸಾವು ತಾಲಿಬಾನ್ ಗುಂಪುಗಳು ಮತ್ತು ಅಲ್‌ಖೈದಾ ಸಂಘಟನೆಗಳ ವಿರುದ್ಧ ಅಂತಾರಾಷ್ಟ್ರೀಯ ಪಡೆಗಳು ಮೇಲುಗೈ ಸಾಧಿಸಿರುವುದರ ಸಂಕೇತವಾಗಿದ್ದು, ಭಯೋತ್ಪಾದಕರಿಗೆ ತೀವ್ರ ಹಿನ್ನಡೆಯಾದಂತಾಗಿದೆ. ಅವರು ಮೆಹ್ಸೂದ್ ಸ್ಥಾನಕ್ಕೆ ಮತ್ತೊಬ್ಬ ಸಮರ್ಥನನ್ನು ತರಲು ಹೆಣಗಾಡಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆದರೆ ಇದು ತಾತ್ಕಾಲಿಕ ಎಂದು ಪತ್ರಿಕೆ ಅಭಿಪ್ರಾಯಪಟ್ಟಿದೆ. ಅದರ ಪ್ರಕಾರ ಮೆಹ್ಸೂದ್ ಸ್ಥಾನಕ್ಕಾಗಿ ತಾಲಿಬಾನ್‌ನ ಮಿಲಿಟರಿ ತಂತ್ರಗಾರ ವಾಲಿ ಉರ್ ರೆಹಮಾನ್ ಮತ್ತು ಆತ್ಮಹತ್ಯಾ ಬಾಂಬರುಗಳ ಪ್ರಮುಖ ತರಬೇತುದಾರ ಖಾರಿ ಹುಸೇನ್‌ ಪರಿಗಣನೆಗೆ ಬರುವ ಸಾಧ್ಯತೆಗಳಿವೆ.
ಸಂಬಂಧಿತ ಮಾಹಿತಿ ಹುಡುಕಿ