ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಎದುರಾಳಿ ಅಧಿಕಾರಿಗಳ ವಿರುದ್ಧ ಲಂಕಾಧ್ಯಕ್ಷ ರಾಜಪಕ್ಷೆ ಕ್ರಮ (Sri Lanka | Mahinda Rajapaksa | military officers | Sarath Fonseka)
Bookmark and Share Feedback Print
 
ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲುಂಡ ಮಿಲಿಟರಿ ಮಾಜಿ ಮುಖ್ಯಸ್ಥರಿಗೆ ನಿಷ್ಠರಾಗಿರುವ ಹಲವು ಹಿರಿಯ ಮಿಲಿಟರಿ ಅಧಿಕಾರಿಗಳನ್ನು ಶ್ರೀಲಂಕಾ ಅಧ್ಯಕ್ಷ ಮಹೀಂದ್ರಾ ರಾಜಪಕ್ಷೆ ವರ್ಗಾಯಿಸಿದ್ದಾರೆ ಎಂದು ಮಿಲಿಟಲಿ ಮೂಲಗಳು ಹೇಳಿವೆ.

ಮಂಗಳವಾರ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಫೊನ್ಸೇಕಾ ಗೆಲ್ಲಲು ವಿಫಲರಾದ ನಂತರ ಅವರ ಬೆಂಬಲಿಗರನ್ನು ಸೇನೆಯ ಆಯಕಟ್ಟಿನ ಸ್ಥಾನಗಳಿಂದ ಬೇರೆಡೆಗೆ ಸ್ಥಳಾಂತರಿಸುವಂತೆ ರಾಜಪಕ್ಷೆಯವರು ಆದೇಶ ನೀಡಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜನರಲ್ ಫೊನ್ಸೇಕಾ ಅವರ ಪರವಾಗಿದ್ದ ಹಲವು ಹಿರಿಯ ಅಧಿಕಾರಿಗಳನ್ನು ಪ್ರಮುಖ ಸ್ಥಾನಗಳಿಂದ ಕಿತ್ತು ಹಾಕಲಾಗಿದೆ ಎಂದು ಹೇಳಲಾಗಿದೆ.

ವರ್ಗಾವಣೆಗಳನ್ನು ಸೇನೆಯ ವಕ್ತಾರ ಉದಯ ನಾನಯಕ್ಕರ ಖಚಿತಪಡಿಸಿದ್ದಾರೆ. ಪ್ರಧಾನ ಜನರಲ್ ಸೇರಿದಂತೆ ಹಲವರನ್ನು ಪ್ರಮುಖ ಸ್ಥಾನಗಳಿಂದ ಕೆಳಕ್ಕಿಳಿಸಿ ಆಡಳಿತಾತ್ಮಕ ಸೇವೆಗೆ ವರ್ಗಾಯಿಸಲಾಗಿದೆ ಎಂದು ಅವರು ಹೇಳಿದ್ದಾರಾದರೂ ಹೆಚ್ಚಿನ ವಿವರ ನೀಡಲು ನಿರಾಕರಿಸಿದ್ದಾರೆ.

ಚುನಾವಣೆಯಲ್ಲಿ ಸೋಲಿನ ಕ್ಷಣಗಳು ಹತ್ತಿರವಾಗುತ್ತಿದ್ದಂತೆ ಫೊನ್ಸೇಕಾ ಮಿಲಿಟರಿ ಕ್ರಾಂತಿ ನಡೆಸಲು ಯೋಜನೆ ರೂಪಿಸಿದ್ದರು ಎಂದೂ ರಾಜಪಕ್ಷೆ ಸರಕಾರ ಆರೋಪಿಸಿತ್ತು.

ಶುಕ್ರವಾರ ಫೊನ್ಸೇಕಾ ಅವರ ರಾಜಕೀಯ ಪ್ರಧಾನ ಕಚೇರಿಗೆ ದಾಳಿ ನಡೆಸಿದ್ದ ಇಲ್ಲಿನ ಪೊಲೀಸರು, ಅವರ ಪರವಾಗಿ ಕೆಲಸ ಮಾಡಿದ್ದ ಹಲವು ಮಿಲಿಟರಿ ಮಾಜಿ ಅಧಿಕಾರಿಗಳನ್ನು ಸೆರೆ ಹಿಡಿದಿದ್ದರು.

ಚುನಾವಣಾ ಫಲಿತಾಂಶದ ವಿರುದ್ಧ ತನ್ನ ಪಕ್ಷದ ಕಾನೂನು ಸಮರದಲ್ಲಿ ಹೆಚ್ಚಿನ ಪುರಾವೆಗಳು ಸಿಗಬಾರದೆಂದು ಸರಕಾರ ಪಿತೂರಿ ನಡೆಸುತ್ತಿದೆ ಎಂದು ಇದೇ ಸಂದರ್ಭದಲ್ಲಿ ಫೊನ್ಸೇಕಾ ಆರೋಪಿಸಿದ್ದಾರೆ.

ಅಧ್ಯಕ್ಷೀಯ ಚುನಾವಣೆಯಲ್ಲಿ ರಾಜಪಕ್ಷೆ ಶೇ.58ರಷ್ಟು ಮತ ಪಡೆದಿದ್ದರೆ, ಫೊನ್ಸೇಕಾ ಶೇ.40ರ ಮತ ಗಳಿಸಿದ್ದರು. ಚುನಾವಣೆ ಸಂದರ್ಭದಲ್ಲಿ ಇದಕ್ಕೂ ಹೆಚ್ಚಿನ ಕತ್ತುಕತ್ತಿನ ಹಣಾಹಣಿ ನಿರೀಕ್ಷಿಸಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ