ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಇರಾಕ್ ಬುರ್ಖಾಧಾರಿಣಿಯಿಂದ ಆತ್ಮಹತ್ಯಾ ದಾಳಿ; 41 ಬಲಿ (pilgrims | Iraq | suicide bombing | female suicide bomber)
Bookmark and Share Feedback Print
 
ಉತ್ತರ ಬಾಗ್ದಾದ್‌ನಲ್ಲಿ ಶಿಯಾ ಯಾತ್ರಾರ್ಥಿಗಳ ಜತೆ ನಡೆದುಕೊಂಡು ಹೋಗುತ್ತಿದ್ದ ಮಹಿಳಾ ಆತ್ಮಹತ್ಯಾ ಬಾಂಬರ್ ಒಬ್ಬಳು ಸೊಂಟದಲ್ಲಿ ಕಟ್ಟಿಕೊಂಡಿದ್ದ ಸ್ಫೋಟಕಗಳನ್ನು ಸಿಡಿಸಿ ಕನಿಷ್ಠ 41 ಮಂದಿಯನ್ನು ಕೊಂದು ಹಾಕಿದ್ದಾಳೆ. ಘಟನೆಯಲ್ಲಿ 100ಕ್ಕೂ ಹೆಚ್ಚು ಯಾತ್ರಾರ್ಥಿಗಳು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಿಯಾ ಮುಸ್ಲಿಮರ ಪವಿತ್ರ ದಿನಕ್ಕಾಗಿ ದಕ್ಷಿಣ ನಗರ ಕರ್ಬಾಲಕ್ಕೆ ಹೋಗುತ್ತಿದ್ದ ಯಾತ್ರಾರ್ಥಿಗಳ ಮೇಲೆ ಈ ವರ್ಷ ನಡೆದ ಬೃಹತ್ ದಾಳಿಯಿದು ಎಂದು ಹೇಳಲಾಗಿದ್ದು, ಶುಕ್ರವಾರ ಕೊನೆಗೊಳ್ಳಲಿರುವ ಯಾತ್ರೆಗೀಗ ಭೀತಿ ಆವರಿಸಿದೆ.

ಮೈ ಪೂರ್ತಿ ಕಪ್ಪು ಬುರ್ಖಾವನ್ನು ಧರಿಸಿಕೊಂಡು ಒಳಗೆ ಸ್ಫೋಟಕಗಳನ್ನು ಅಡಗಿಸಿಕೊಂಡಿದ್ದ ಮಹಿಳೆ ಶಿಯಾ ಮುಸ್ಲಿಮ್ ಪ್ರಾಬಲ್ಯ ಪ್ರದೇಶ ಶಾಬ್‌ನಲ್ಲಿ ಯಾತ್ರಾರ್ಥಿಗಳ ಜತೆ ಸೇರಿಕೊಂಡಿದ್ದಳು ಎಂದು ಬಾಗ್ದಾದ್‌ನ ಮಿಲಿಟರಿ ವಕ್ತಾರ ಜನರಲ್ ಖಾಸಿಂ ಅಲ್ ಮೌಸವಿ ತಿಳಿಸಿದ್ದಾರೆ.

ಸ್ಫೋಟದಲ್ಲಿ ಮಹಿಳೆಯರು ಮತ್ತು ಮಕ್ಕಳೂ ಸೇರಿದಂತೆ ಕನಿಷ್ಠ 41 ಮಂದಿ ಸಾವನ್ನಪ್ಪಿದ್ದಾರೆ. 106 ಮಂದಿ ಗಾಯಗೊಂಡಿದ್ದಾರೆ.

ಬಾಗ್ದಾದ್‌ನಲ್ಲಿನ ಆಸ್ಪತ್ರೆಯ ಅಧಿಕಾರಿಗಳು ಸತ್ತವರ ಸಂಖ್ಯೆಯನ್ನು ಬಹಿರಂಗಪಡಿಸಿದ್ದಾರಾದರೂ, ಅಧಿಕೃತವಾಗಿ ತಿಳಿಸಲು ನಿರಾಕರಿಸಿದ್ದಾರೆ. ತಾವು ಮಾಧ್ಯಮಗಳೊಂದಿಗೆ ಮಾಹಿತಿಗಳನ್ನು ಹಂಚಿಕೊಳ್ಳಲು ಅಧಿಕಾರ ಹೊಂದಿಲ್ಲದೇ ಇರುವುದರಿಂದ ಹೆಸರು ಹೇಳಲು ಬಯಸುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.

ಸಾವಿರಾರು ಯಾತ್ರಾರ್ಥಿಗಳು ಇಲ್ಲಿನ ಶಿಬಿರವೊಂದರಲ್ಲಿ ಆಹಾರ ಮತ್ತು ಪಾನೀಯಗಳನ್ನು ಸೇವಿಸುತ್ತಿರುವ ಹೊತ್ತಿನಲ್ಲಿ ಮಹಿಳೆ ತನ್ನನ್ನು ತಾನು ಸ್ಫೋಟಿಸಿಕೊಂಡು ಹಲವರ ಸಾವಿಗೆ ಕಾರಣಳಾಗಿದ್ದಾಳೆ ಎಂದು ಮೂಲಗಳು ಹೇಳಿವೆ.

ಸ್ಫೋಟ ನಡೆದ ಸುಮಾರು 138 ಮೀಟರ್ ದೂರದಲ್ಲಿದ್ದ ರಹೀಮ್ ಕಾಧೂಮ್ ಪ್ರಕಾರ, ಆ ಹೊತ್ತಿನಲ್ಲಿ ಯಾತ್ರಾರ್ಥಿಗಳ ನಡುವಿನಿಂದ ಭಾರೀ ಪ್ರಮಾಣದ ಬೆಂಕಿಯುಂಡೆಗಳು ಉರುಳಿದವು. ಸ್ವಲ್ಪವೇ ಹೊತ್ತಿನಲ್ಲಿ ನೆಲದಲ್ಲಿ ರಕ್ತ ತುಂಬಿಕೊಂಡಿತ್ತು ಮತ್ತು ಬ್ಯಾನರುಗಳು ನೆಲದಲ್ಲಿ ರಕ್ತಸಿಕ್ತಗೊಂಡಿದ್ದವು. ಜನ ಸಹಾಯಕ್ಕಾಗಿ ಅಂಗಲಾಚುತ್ತಿದ್ದರು ಎಂದು ಅವರು ವಿವರಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ