ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಲೈಂಗಿಕ ಹಗರಣದಲ್ಲಿ ನ್ಯೂಯಾರ್ಕ್ ಗವರ್ನರ್! (David Paterson | New York governor | extramarital affairs)
Bookmark and Share Feedback Print
 
ಅಮೆರಿಕದ ನ್ಯೂಯಾರ್ಕ್ ಹಾಲಿ ರಾಜ್ಯಪಾಲ ಡೇವಿಡ್ ಪೀಟರ್‌ಸನ್ ಲೈಂಗಿಕ ಹಗರಣದಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಪೀಟರ್‌ಸನ್ ತನ್ನ ಹೆಂಡತಿಯಲ್ಲದ ಮತ್ತೊಬ್ಬ ಕರೆವೆಣ್ಣನ್ನು ಭೇಟಿಯಾಗುವ ಸಂದರ್ಭದಲ್ಲಿಯೇ ಸಿಕ್ಕಿಬಿದ್ದಿದ್ದಾರೆ ಎಂದು ಮಾಧ್ಯಮಗಳ ವರದಿ ತಿಳಿಸಿದೆ.

ಅಮೆರಿಕದ ಈ ಮೊದಲ ಆಫ್ರಿಕನ್ ಗವರ್ನರ್ ಎಂಬ ಖ್ಯಾತಿ ಇರುವ ಪೀಟರ್ ಸನ್ ಈ ಹಿಂದೆಯೂ ಅನೇಕ ಮಹಿಳೆಯರ ಸಹವಾಸ ಮಾಡಿದ್ದರು. ಅಲ್ಲದೇ, 2008ರಲ್ಲಿ ಗವರ್ನರ್ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಪೀಟರ್ ಸನ್ ಮತ್ತು ಅವರ ಪತ್ನಿ ತಮ್ಮಿಬ್ಬರಿಗೂ ವಿವಾಹೇತರ ಸಂಬಂಧಗಳಿರುವುದಾಗಿ ಒಪ್ಪಿಕೊಂಡಿದ್ದರು.

ಕೆಲವು ತಿಂಗಳ ಹಿಂದಷ್ಟೇ ಪತ್ರಿಕೆ, ಗವರ್ನರ್ ಪೀಟರ್ ಸನ್ ಮಹಿಳೆಯ ಜೊತೆಗಿರುವ ವರದಿಯನ್ನು ಬಹಿರಂಗಗೊಳಿಸಿತ್ತು. ರಾಜ್ಯಪಾಲರ ಭದ್ರತಾ ಸಿಬ್ಬಂದಿ ಆಕಸ್ಮಿಕವಾಗಿ ಅವರ ರೂಮಿನ ಬಾಗಿಲು ತೆರೆದಾಗ ಗವರ್ನರ್ ಅವರ ರಾಸಲೀಲೆ ಬಯಲುಗೊಂಡಿರುವುದಾಗಿ ವರದಿ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ