ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ದಲೈಲಾಮಾ ಜೊತೆ ಮಾತುಕತೆ ಬೇಡ: ಒಬಾಮಗೆ ಚೀನಾ (Dalai Lama | China | Buddhist monk | Washington | Obama)
Bookmark and Share Feedback Print
 
ಬೌದ್ಧ ಗುರು ದಲೈ ಲಾಮಾ ಅವರೊಂದಿಗೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಮಾತುಕತೆ ನಡೆಸಬಾರದು ಎಂದು ಚೀನಾ ಮಂಗಳವಾರ ಎಚ್ಚರಿಕೆ ನೀಡಿದ್ದು, ಈ ವಿಷಯನ್ನು ಗಂಭೀರವಾಗಿ ಪರಿಗಣಿಸಿರುವುದಾಗಿ ಹೇಳಿರುವ ಚೀನಾ ನಮ್ಮ ಎಚ್ಚರಿಕೆಯನ್ನು ಕಡೆಗಣಿಸಿ ಚರ್ಚೆಗೆ ಮುಂದಾದಲ್ಲಿ ಎರಡೂ ದೇಶಗಳ ಸಂಬಂಧಕ್ಕೆ ಧಕ್ಕೆ ಬರಬಹುದಾಗಿ ಹೇಳಿದೆ.

ಟಿಬೆಟ್ ವಿವಾದ ಕುರಿತಂತೆ ಬೌದ್ಧ ಗುರು ಲಾಮಾ ಅವರ ಪ್ರತಿನಿಧಿಗಳೊಂದಿಗೆ ಚೀನಾದ ಅಧಿಕಾರಿಗಳು ನಡೆಸಿದ ನೂತನ ಮಾತುಕತೆಯಲ್ಲಿ ಯಾವುದೇ ಪ್ರಗತಿ ಇಲ್ಲ ಎಂಬುದಾಗಿಯೂ ಹೇಳಿದ್ದು, ಮತ್ತೆ ಬಿಕ್ಕಟ್ಟು ಹಾಗೆಯೇ ಮುಂದುವರಿದಿರುವುದಾಗಿ ತಿಳಿಸಿದೆ.

ಸುಮಾರು ಒಂದು ವರ್ಷಗಳ ಬಳಿಕ ಚೀನಾ ಟಿಬೆಟ್ ಸಮಸ್ಯೆ ಕುರಿತಂತೆ ದಲೈಲಾಮಾ ಅವರೊಂದಿಗೆ ಮಾತುಕತೆ ನಡೆಸಲು ಚೀನಾ ಒಲವು ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಮತ್ತೆ ಚರ್ಚೆ ನಡೆದಿತ್ತು. ಆದರೆ ಟಿಬೆಟ್ ವಿಷಯದಲ್ಲಿ ಯಾವುದೇ ರಾಜಿಗೆ ತಾವು ಸಿದ್ದರಿಲ್ಲ ಎಂದು ಹೇಳುವ ಮೂಲಕ ಚೀನಾ ತನ್ನ ನಿಲುವನ್ನು ಸ್ಪಷ್ಟಪಡಿಸುವ ಮೂಲಕ ವಿವಾದ ಮುಂದುವರಿದಂತಾಗಿದೆ.

ಟಿಬೆಟ್‌ಗೆ ಸ್ವಾತಂತ್ರ್ಯ ನೀಡಬೇಕು ಎಂಬುದು ಬೌದ್ಧ ಗುರು ದಲೈಲಾಮಾ ಅವರ ಹೋರಾಟವಾಗಿದೆ. ಆದರೆ ಟೆಬೆಟ್ ಮೇಲಿನ ತನ್ನ ಹಿಡಿತವನ್ನು ಸಡಿಲಿಸಲಾರೆ ಎಂದು ಚೀನಾ ಪ್ರತಿಪಾದಿಸುತ್ತಲೇ ಬಂದಿದೆ. ಏತನ್ಮಧ್ಯೆ ದಲೈಲಾಮಾ ಅವರು ಅಮೆರಿಕಕ್ಕೆ ಭೇಟಿ ನೀಡಿ ಒಬಾಮ ಅವರೊಂದಿಗೆ ಮಾತುಕತೆ ನಡೆಸುವುದಾಗಿ ನಿರ್ಧರಿಸಲಾಗಿತ್ತು. ಆದರೆ ಚೀನಾದ ಆಕ್ಷೇಪದ ಪರಿಣಾಮ ಲಾಮಾ ಅವರೊಂದಿಗಿನ ಚರ್ಚೆಯ ದಿನಾಂಕವನ್ನು ಒಬಾಮಾ ಘೋಷಿಸಿಲ್ಲವಾಗಿತ್ತು. ಆ ನಿಟ್ಟಿನಲ್ಲಿ ಒಬಾಮ ಯಾವುದೇ ಕಾರಣಕ್ಕೂ ಲಾಮಾ ಅವರೊಂದಿಗೆ ಮಾತುಕತೆ ನಡೆಸಬಾರದು ಎಂದು ಚೀನಾ ಮತ್ತೆ ಒತ್ತಡ ಹೇರಿದೆ.
ಸಂಬಂಧಿತ ಮಾಹಿತಿ ಹುಡುಕಿ