ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮತ್ತೆ ಕಾರ್ಯಾಚರಣೆ ನಡೆಸಿದ್ರೆ ಪಾಕ್ ವಿರುದ್ಧ ಸಮರ: ತಾಲಿಬಾನ್ (Pakistan | N Waziristan | Taliban | Afghan | Hamid Karzai)
Bookmark and Share Feedback Print
 
ಉತ್ತರ ವಜೀರಿಸ್ತಾನ ಪ್ರದೇಶದಲ್ಲಿ ಮಿಲಿಟರಿ ಕಾರ್ಯಾಚರಣೆ ನಡೆಸಿದಲ್ಲಿ ಪಾಕ್ ಮಿಲಿಟರಿ ವಿರುದ್ಧ ದೊಡ್ಡ ಸಮರವನ್ನೇ ಸಾರುವುದಾಗಿ ತಾಲಿಬಾನ್ ಉಗ್ರಗಾಮಿ ಸಂಘಟನೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

ಅಫ್ಘಾನಿಸ್ತಾನದ ಅಧ್ಯಕ್ಷ ಹಮೀದ್ ಕರ್ಜೈಯ್ ಶಾಂತಿ ಮಾತುಕತೆ ನಡೆಸುವ ಕುರಿತು ಒಲವು ತೋರಿದ್ದರೆ, ಪಾಕಿಸ್ತಾನ ಸರ್ಕಾರ ಶಾಂತಿ ಮಾತುಕತೆ ಪ್ರಕ್ರಿಯೆಯನ್ನು ಹಾಳುಗೆಡುವಲು ಯತ್ನಿಸುತ್ತಿದೆ ಎಂದು ತಾಲಿಬಾನ್ ಶೂರಾ ಇಟ್ಟಿಹಾದ್ ಮುಜಾಹಿದ್ದೀನ್ ಆರೋಪಿಸಿದೆ.

ಒಂದು ವೇಳೆ ಪಾಕ್ ಸರ್ಕಾರ ಈ ಪ್ರದೇಶದಲ್ಲಿ ಮತ್ತೆ ಕಾರ್ಯಾಚರಣೆ ಆರಂಭಿಸಿದರೆ, ಸ್ಥಳೀಯ ಜನರೊಂದಿಗೆ ಕೂಡಿಕೊಂಡು ದೊಡ್ಡ ಸಮರವನ್ನೇ ನಡೆಸುವುದಾಗಿ ಮುಜಾಹಿದ್ದೀನ್ ಎಚ್ಚರಿಸಿದೆ. ಅಲ್ಲದೇ, ಸಂಘಟನೆಯ ಪ್ರಮುಖರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿ ಹಮೀದ್ ಕರ್ಜೈಯ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸುವುದಾಗಿ ತಿಳಿಸಿದೆ.

ಕರ್ಜೈಯ್ ಧೋರಣೆ ಸ್ವತ ಕಾಫಿರ್ ತರಹ ಇದೆ ಎಂದು ಲೇವಡಿ ಮಾಡಿರುವ ತಾಲಿಬಾನ್, ಆದರೂ ಶಾಂತಿ ಮಾತುಕತೆ ನಡೆಸುವುದಾಗಿ ಹೇಳುವ ಮೂಲಕ ಅವರು ಪಾಕಿಸ್ತಾನ್‌ಕ್ಕಿಂತ ಉತ್ತಮ ಎಂದು ಕರಪತ್ರದಲ್ಲಿ ವಿವರಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ