ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » 'ಶ್ರೀಲಂಕಾ ಬಂಧನದಲ್ಲಿರುವ ತಮಿಳರನ್ನು ಬಿಡುಗಡೆ ಮಾಡಬೇಕು' (Sri Lanka | Tamil | legal limbo | Tamil Tigers)
Bookmark and Share Feedback Print
 
ತಮಿಳು ಹುಲಿಗಳ ಜತೆ ಸಂಬಂಧ ಹೊಂದಿದ್ದಾರೆ ಎಂಬ ಆರೋಪದ ಮೇಲೆ ಅನಿರ್ದಿಷ್ಟಾವಧಿ ವಶದಲ್ಲಿರುವ 11,000 ತಮಿಳರನ್ನು ಶ್ರೀಲಂಕಾ ಬಿಡುಗಡೆ ಮಾಡಬೇಕು ಎಂದು ಜಾಗತಿಕ ಮಾನವ ಹಕ್ಕುಗಳ ಸಂಘಟನೆಯೊಂದು ಆಗ್ರಹಿಸಿದ್ದು, ಕಸ್ಟಡಿಯಲ್ಲಿನ ಪಾರದರ್ಶಕತೆ ಕೊರತೆಯಿಂದಾಗಿ ಸಂಭಾವ್ಯ ಕಿರುಕುಳದ ಕುರಿತು ಇದು ಕಳವಳ ವ್ಯಕ್ತಪಡಿಸಿದೆ.

ಸರಕಾರವು ಸುಮಾರು 11,000 ತಮಿಳರನ್ನು ಕಳೆದ ಹಲವು ತಿಂಗಳುಗಳಿಂದ ಕಾನೂನು ಬಂಧನಕ್ಕೊಳಪಡಿಸಿದೆ ಎಂದು ಅಮೆರಿಕಾ ಮೂಲದ ಮಾನವ ಹಕ್ಕುಗಳ ವಿಚಕ್ಷಣ ಸಂಘಟನೆಯ ಏಷಿಯಾ ನಿರ್ದೇಶಕ ಬ್ರಾಡ್ ಆಡಮ್ಸ್ ತಿಳಿಸಿದ್ದಾರೆ.

ಅವರಲ್ಲಿ ದೇಶದ ಭದ್ರತೆಗೆ ಬೆದರಿಕೆಯಾಗಿರುವವರು ಯಾರು ಎಂಬುದನ್ನು ಗುರುತಿಸಲು ಇದು ಸಕಾಲವಾಗಿದ್ದು, ಉಳಿದವರನ್ನು ಬಿಡುಗಡೆ ಮಾಡಬೇಕು ಎಂದು ಶ್ರೀಲಂಕಾ ವಶದಲ್ಲಿರುವ ಶಂಕಿತ ಎಲ್‌ಟಿಟಿಇ ಬೆಂಬಲಿಗರ ಬಂಧನದ ಕುರಿತ 30 ಪುಟಗಳ ವರದಿಯನ್ನು ಬಿಡುಗಡೆ ಮಾಡಿದ ನಂತರ ಆಡಮ್ಸ್ ಒತ್ತಾಯಿಸಿದ್ದಾರೆ.

ಶ್ರೀಲಂಕಾ ವಶದಲ್ಲಿರುವ ತಮಿಳರ ಸಂಬಂಧಿಕರು, ಮಾನವತಾ ವಾದಿ ಕಾರ್ಯಕರ್ತರು ಮತ್ತು ಮಾನವ ಹಕ್ಕುಗಳ ಸಂಘಟನೆಗಳ ವಕೀಲರು ಮತ್ತಿತರರನ್ನು ಸಂದರ್ಶನ ನಡೆಸಿದ ನಂತರ ಈ ವರದಿಯನ್ನು ತಯಾರಿಸಲಾಗಿದೆ.

ಶ್ರೀಲಂಕಾ ಸರಕಾರವು ಬಂಧಿತರ ಮೂಲಭೂತ ಹಕ್ಕುಗಳನ್ನು ಸತತವಾಗಿ ಉಲ್ಲಂಘಿಸುತ್ತಿದೆ ಎಂದು ಇದೇ ಸಂದರ್ಭದಲ್ಲಿ ಮಾನವ ಹಕ್ಕುಗಳ ವಿಚಕ್ಷಣಾ ಸಂಘಟನೆ ಆರೋಪಿಸಿದೆ.

ಸುಮಾರು 11,000ದಷ್ಟು ಎಲ್‌ಟಿಟಿಇ ಬೆಂಬಲಿಗರು ಅಥವಾ ಮಾಜಿ ಹೋರಾಟಗಾರರನ್ನು ಸರಕಾರವು ವಶದಲ್ಲಿಟ್ಟುಕೊಂಡಿದೆ. ಅವರಿಗೆ ಕಸ್ಟಡಿಯಲ್ಲಿ ಕಿರುಕುಳ ನೀಡಲಾಗುತ್ತಿದೆ ಎಂಬ ವರದಿಗಳೂ ಬಂದಿವೆ ಎಂದು ಸಂಘಟನೆ ತಿಳಿಸಿದೆ.

ಬಂಧಿತರನ್ನು ಎಲ್ಲಿಡಲಾಗಿದೆ ಮತ್ತು ಅವರ ಸ್ಥಿತಿ-ಗತಿಯ ಬಗ್ಗೆ ಪಾರದರ್ಶಕತೆ ಕಾಪಾಡಿಕೊಳ್ಳದೇ ಇರುವುದರಿಂದ ಅವರಿಗೆ ನಡೆದಿರಬಹುದಾದ ಸಂಭಾವ್ಯ ಕಿರುಕುಳ ಅಥವಾ ಕಸ್ಟಡಿಯಲ್ಲಿ ಅನುಚಿತವಾಗಿ ನಡೆಸಿಕೊಂಡಿರುವ ಸಾಧ್ಯತೆಗಳಿವೆ. ಅಲ್ಲದೆ ಹಲವು ಮಂದಿ ಬಲವಂತವಾಗಿ ಕಾಣೆಯಾಗಿರುವ ಸಾಧ್ಯತೆಗಳೂ ಇವೆ ಎಂದು ಮಾನವ ಹಕ್ಕುಗಳ ಸಂಘಟನೆ ವಾದಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ