ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಮೆರಿಕಾ ಅಂಚೆ ಚೀಟಿಗೆ ಹಿಂದೂ ದೇವರುಗಳ ಚಿತ್ರ (Hindu Gods | US | Indian American | postage stamps)
Bookmark and Share Feedback Print
 
ಅಮೆರಿಕಾದ ಅಂಚೆ ಚೀಟಿ ಚಿತ್ರಗಳ ಸಾಲಿಗೆ ಇದೀಗ ಹಿಂದೂ ದೇವರುಗಳನ್ನೂ ಸೇರಿಸಲಾಗಿದೆ. ಆದರೆ ಇದನ್ನು ಅಮೆರಿಕಾ ಅಂಚೆ ಇಲಾಖೆ ಬಿಡುಗಡೆ ಮಾಡಿಲ್ಲ. ಭಾರತೀಯ ಮೂಲದ ಅಮೆರಿಕನ್ ಕಂಪನಿಯೊಂದು ಕಾನೂನು ಸಮ್ಮತವಾಗಿರುವ ರೂಢಿಗತ ಅಂಚೆ ಚೀಟಿಗಳನ್ನು ಪ್ರಕಟಿಸಿದೆ.

ಶ್ರೀಕೃಷ್ಣ, ಶಿವ-ಪಾರ್ವತಿ, ಲಕ್ಷ್ಮಿ, ವೆಂಕಟೇಶ್ವರ, ಮುರುಗನ್, ವಿನಾಯಕ ಮತ್ತು ಸಾಯಿಬಾಬಾ ಸೇರಿದಂತೆ ಹತ್ತುಹಲವು ಅಂಚೆ ಚೀಟಿಗಳನ್ನು ಕಳೆದ ತಿಂಗಳು ಬಿಡುಗಡೆ ಮಾಡಲಾಗಿದೆ.

ಯುಎಸ್‌ಎ-ಪೋಸ್ಟೇಜ್.ಕಾಮ್ ಎಂಬ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಈ ಸ್ಟ್ಯಾಂಪುಗಳನ್ನು ಯಾರು ಬೇಕಾದರೂ ಖರೀದಿಸಬಹುದು. ಅಲ್ಲದೆ ತಮಗೆ ಬೇಕಾದ ಚಿತ್ರಗಳನ್ನು ಹಾಕಿಸಿಕೊಂಡು ಸ್ಟ್ಯಾಂಪುಗಳನ್ನು ತಯಾರಿಸಲು ಸಾಧ್ಯ ಎಂದು ವೆಬ್‌ಸೈಟ್ ಮಾಹಿತಿ ನೀಡಿದೆ.

ಅಮೆರಿಕಾ ಅಂಚೆ ಸೇವಾ ವಿಭಾಗದ ಆರು ವರ್ಷಗಳ ಹಳೆಯ ನಿಯಮವೊಂದನ್ನು ಬಳಸಿಕೊಂಡಿರುವ ಭಾರತೀಯ ಮುಖ್ಯಸ್ಥನಾಗಿರುವ ಅಟ್ಲಾಂಟಾದಲ್ಲಿನ ಅಮೆರಿಕನ್ ಕಂಪನಿಯು ರೂಢಿಗತವಾದ ಪೋಸ್ಟೇಜ್ ಸ್ಟ್ಯಾಂಪ್‌ಗಳನ್ನು ಬಿಡುಗಡೆ ಮಾಡಿತ್ತು.

ರೂಢಿಗತ ಪೋಸ್ಟೇಜ್ ಶೀಟ್‌ಗಳನ್ನು ಕೊಡುಗೆಗಳಾಗಿ ನೀಡಬಹುದು. ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯ ಸಮುದಾಯ ಇಂತಹ ಗಿಫ್ಟ್‌ಗಳಿಗಾಗಿ ಆನ್‌ಲೈನ್ ಮೂಲಕ ಸೂಚನೆ ನೀಡಬಹುದು ಎಂದು ಕಂಪನಿಯ ಉಪಾಧ್ಯಕ್ಷ ಎನ್ನಾರ್ ಚಿಲಕಪತಿ ತಿಳಿಸಿದ್ದಾರೆ.

ಈ ಪೋಸ್ಟೇಜ್‌ಗಳನ್ನು ಅಮೆರಿಕಾದ ಅಂಚೆ ಚೀಟಿ ಇಲಾಖೆಯು ಬಿಡುಗಡೆ ಮಾಡಿಲ್ಲ. ಆದರೆ ಇವುಗಳು ಅತ್ಯುತ್ತಮ ಸ್ಟ್ಯಾಂಪುಗಳಾಗಿದ್ದು, ಕಾನೂನು ಮಾನ್ಯತೆಯಿದೆ. ನಾವಿದನ್ನು ಸ್ಟ್ಯಾಂಪುಗಳು ಎಂದು ಕರೆಯುವ ಬದಲು ಪೋಸ್ಟೇಜ್‌ಗಳು ಎನ್ನುತ್ತೇವೆ. ಆದರೆ ಇದನ್ನು ಸಾಮಾನ್ಯ ಅಂಚೆ ಚೀಟಿ ಬಳಸುವಂತೆ ಬಳಸಬಹುದಾಗಿದೆ ಎಂದು ಅಮೆರಿಕಾ ಅಂಚೆ ಚೀಟಿ ಇಲಾಖೆಯ ವಕ್ತಾರರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ