ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಶಂಕಿತ ಅಮೆರಿಕಾ ಉಗ್ರರಿಗೆ ಪಾಕಿಸ್ತಾನದಲ್ಲಿ ಕಿರುಕುಳ ಆರೋಪ (US terror suspects | Pakistan | FBI | American terrorism)
Bookmark and Share Feedback Print
 
ಇತ್ತೀಚೆಗಷ್ಟೇ ಪಾಕಿಸ್ತಾನದಲ್ಲಿ ಬಂಧಿತರಾಗಿರುವ ಅಮೆರಿಕಾ ಮೂಲದ ಐವರು ಶಂಕಿತ ಭಯೋತ್ಪಾದಕರು, ತಮಗೆ ಪಾಕಿಸ್ತಾನ ಪೊಲೀಸರು ಮತ್ತು ಅಮೆರಿಕಾದ ಎಫ್‌ಬಿಐ ಅಧಿಕಾರಿಗಳು ವಿದ್ಯುತ್ ಶಾಕ್ ಮತ್ತು ಇತರ ರೀತಿಗಳಲ್ಲಿ ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ನಮ್ಮನ್ನು ಬಂಧಿಸಿದ ನಂತರ ಅಮೆರಿಕಾದ ಎಫ್‌ಬಿಐ ಮತ್ತು ಪಾಕಿಸ್ತಾನದ ಪೊಲೀಸರು ನಮಗೆ ನಿರಂತರ ಚಿತ್ರಹಿಂಸೆ ನೀಡುತ್ತಿದ್ದಾರೆ. ಅವರು ನಮ್ಮನ್ನು ಬಲಿಪಶುಗಳನ್ನಾಗಿ ಸಿದ್ಧಪಡಿಸುತ್ತಿದ್ದಾರೆ. ನಾವು ಅಮಾಯಕರರು. ಸಾರ್ವಜನಿಕರು, ಮಾಧ್ಯಮಗಳು, ನಮ್ಮ ಕುಟುಂಬಗಳು ಮತ್ತು ವಕೀಲರುಗಳಿಂದ ನಮ್ಮನ್ನು ದೂರ ಉಳಿಸಲು ಅವರು ಯತ್ನಿಸುತ್ತಿದ್ದಾರೆ. ದಯವಿಟ್ಟು ಸಹಾಯ ಮಾಡಿ ಎಂದು ವಿಚಾರಣೆಯ ಸಂದರ್ಭದಲ್ಲಿ ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ವಿದ್ಯುತ್ ಶಾಕ್‌ಗಳನ್ನು ನೀಡಿದ ನಂತರ ಇದನ್ನು ಮಾಧ್ಯಮ ಮತ್ತು ನ್ಯಾಯಾಲಯದಲ್ಲಿ ಬಾಯ್ಬಿಡಬಾರದೆಂದು ನಮಗೆ ಎಚ್ಚರಿಕೆಯನ್ನೂ ನೀಡಲಾಗಿದೆ ಎಂದು ಶಂಕಿತರಲ್ಲೊರ್ವ ನ್ಯಾಯಾಧೀಶರಿಗೆ ತಿಳಿಸಿದ್ದಾನೆ ಎಂದು ರಕ್ಷಣಾ ವಕೀಲ ತಾರಿಖ್ ಅಸಾದ್ ತಿಳಿಸಿದ್ದಾರೆ.

ಅಲ್ಲದೆ ಪೊಲೀಸರು ತಮ್ಮನ್ನು ಮುಗಿಸುವುದಲ್ಲದೆ, ಪಾಸ್‌ಪೋರ್ಟ್‌ಗಳನ್ನು ಕೂಡ ಕಾಣೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಮತ್ತೊಬ್ಬ ಶಂಕಿತ ರಾಮಿ ಜಂಜಮ್ ವಿವರಣೆ ನೀಡಿದ್ದಾನೆ.

ಆದರೆ ಎಫ್‌ಬಿಐ ಚಿತ್ರಹಿಂಸೆ ನೀಡಿದೆ ಎಂಬ ಆರೋಪಗಳನ್ನು ಅಮೆರಿಕಾ ದೂತವಾಸದ ವಕ್ತಾರ ರಿಚರ್ಡ್ ಸ್ನೆಲ್ಸೈರ್ ತಳ್ಳಿ ಹಾಕಿದ್ದಾರೆ. ಪಾಕಿಸ್ತಾನ ಪೊಲೀಸರು ಕೂಡ ಆರೋಪಗಳನ್ನು ಈ ಹಿಂದೆ ನಿರಾಕರಿಸಿದ್ದರು.

ವಾಷಿಂಗ್ಟನ್‌ ನಿವಾಸಿಗಳಾಗಿರುವ ಈ ಶಂಕಿತ ಯುವ ಮುಸ್ಲಿಮರನ್ನು ಪಂಜಾಬ್ ರಾಜ್ಯದ ಸರ್ಗೋಧಾ ನಗರದ ಸಮೀಪ ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲಿ ಬಂಧಿಸಲಾಗಿತ್ತು. ಅವರು ಭಯೋತ್ಪಾದಕ ಸಂಘಟನೆಗಳ ಜತೆ ಸಂಪರ್ಕಿಸಲು ಯತ್ನಿಸುತ್ತಿದ್ದಾಗ ಎಫ್‌ಬಿಐ ಸೆರೆ ಹಿಡಿದಿತ್ತು.
ಸಂಬಂಧಿತ ಮಾಹಿತಿ ಹುಡುಕಿ