ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಲಾಮಾರನ್ನು ಭೇಟಿ ಮಾಡ್ತೇನೆ: ಬರಾಕ್ ಒಬಾಮ (China | Obama | Dalai Lama | White House | Tibet,)
Bookmark and Share Feedback Print
 
ಟಿಬೆಟ್‌ನ ಬೌದ್ಧ ಗುರು ದಲೈಲಾಮಾ ಅವರನ್ನು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಭೇಟಿ ಮಾಡಬಾರದು ಎಂಬ ಚೀನಾದ ಎಚ್ಚರಿಕೆಯ ನಡುವೆಯೇ, ಲಾಮಾ ಅವರೊಂದಿಗೆ ಒಬಾಮ ಮಾತುಕತೆ ನಡೆಸಲಿದ್ದಾರೆಂದು ಶ್ವೇತಭವನ ಸ್ಪಷ್ಟಪಡಿಸಿದೆ.

ಲಾಮಾ ಅವರೊಂದಿಗೆ ಮಾತುಕತೆ ನಡೆಸಿದ್ದಲ್ಲಿ ಎರಡೂ ದೇಶಗಳ ನಡುವಿನ ಬಾಂಧವ್ಯಕ್ಕೆ ಧಕ್ಕೆ ಬರಲಿದೆ ಎಂಬ ಚೀನಾದ ಬೆದರಿಕೆಯನ್ನು ಅಮೆರಿಕ ತಿರಸ್ಕರಿಸಿದೆ.

ದಲೈಲಾಮಾ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೌರವಿಸುವ ಧಾರ್ಮಿಕ ಮತ್ತು ಸಾಂಸ್ಕೃತಿಕ ಮುಖಂಡ ಎಂದಿರುವ ಶ್ವೇತಭವನದ ವಕ್ತಾರ ಬಿಲ್ ಬರ್ಟನ್, ಬರಾಕ್ ಒಬಾಮ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.

ಆದರೆ ಲಾಮಾ ಅವರ ಭೇಟಿಗೆ ದಿನಾಂಕವನ್ನು ಇನ್ನೂ ನೀಡಿಲ್ಲ. ಫೆಬ್ರುವರಿ ತಿಂಗಳಾಂತ್ಯದಲ್ಲಿ ದಲೈಲಾಮಾ ಅವರು ಅಮೆರಿಕಕ್ಕೆ ಭೇಟಿ ನೀಡಲಿದ್ದಾರೆ ಎಂದರು. ಶೀಘ್ರದಲ್ಲೇ ಬರಾಕ್ ಅವರು ದಿನಾಂಕವನ್ನು ಘೋಷಿಸಲಿದ್ದಾರೆ ಎಂದು ಹೇಳಿದರು.

ಬೌದ್ಧ ಗುರು ದಲೈ ಲಾಮಾ ಅವರೊಂದಿಗೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಮಾತುಕತೆ ನಡೆಸಬಾರದು ಎಂದು ಚೀನಾ ಮಂಗಳವಾರ ಎಚ್ಚರಿಕೆ ನೀಡಿದ್ದು, ಈ ವಿಷಯನ್ನು ಗಂಭೀರವಾಗಿ ಪರಿಗಣಿಸಿರುವುದಾಗಿ ಹೇಳಿರುವ ಚೀನಾ ನಮ್ಮ ಎಚ್ಚರಿಕೆಯನ್ನು ಕಡೆಗಣಿಸಿ ಚರ್ಚೆಗೆ ಮುಂದಾದಲ್ಲಿ ಎರಡೂ ದೇಶಗಳ ಸಂಬಂಧಕ್ಕೆ ಧಕ್ಕೆ ಬರಬಹುದಾಗಿ ಹೇಳಿತ್ತು.
ಸಂಬಂಧಿತ ಮಾಹಿತಿ ಹುಡುಕಿ