ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ದಾಳಿಯಲ್ಲಿ ಸತ್ತಿದ್ದು ಮೆಹ್ಸೂದ್ ನಿಕಟವರ್ತಿ ಹುಸೈನ್: ವರದಿ (Mehsud | drone attack | Taliban | Pakistan | Peshawar)
Bookmark and Share Feedback Print
 
ಅಮೆರಿಕ ನಡೆಸಿದ ಡ್ರೋನ್ ದಾಳಿಯಲ್ಲಿ ಪಾಕಿಸ್ತಾನ್ ತಾಲಿಬಾನ್ ವರಿಷ್ಠ ಹಕಿಮುಲ್ಲಾ ಮೆಹ್ಸೂದ್ ನಿಕಟವರ್ತಿ, ಆತ್ಮಹತ್ಯಾ ಬಾಂಬರ್ ತರಬೇತುದಾರ ಖ್ವಾರಿ ಹುಸೈನ್ ಸಾವನ್ನಪ್ಪಿರುವುದಾಗಿ ಮೂಲವೊಂದು ಸ್ಪಷ್ಟಪಡಿಸಿದೆ.

ಔರಾಕಾಜೈ ಬುಡಕಟ್ಟು ಪ್ರದೇಶದ ಮೂಲವೊಂದು ಈ ಅಂಶವನ್ನು ಬಹಿರಂಗಗೊಳಿಸಿದ್ದು, ಭದ್ರತೆಯ ಕಾರಣದಿಂದಾಗಿ ಆ ವ್ಯಕ್ತಿ ತನ್ನ ಪರಿಚಯ ಹೇಳಿಕೊಳ್ಳದೆ ಪಿಟಿಐಗೆ ವಿವರ ನೀಡಿದ್ದಾನೆ. ಜನವರಿ 14ರಂದು ಉತ್ತರ ವಜೀರಿಸ್ತಾನದಲ್ಲಿ ಅಮೆರಿಕ ನಡೆಸಿದ ಡ್ರೋನ್ ದಾಳಿಯಲ್ಲಿ ಹುಸೈನ್ ಬಲಿಯಾಗಿದ್ದಾನೆ ಎಂದು ತಿಳಿಸಿದ್ದಾನೆ.

ಅಮೆರಿಕ ನಡೆಸಿದ ಡ್ರೋನ್ ದಾಳಿಯಲ್ಲಿ ಮೆಹ್ಸೂದ್ ಸಾವನ್ನಪ್ಪಿರುವುದಾಗಿ ಪಾಕ್ ಸ್ವಾಮಿತ್ವದ ಪಿಟಿವಿ ಭಾನುವಾರ ಸುದ್ದಿಯನ್ನು ಪ್ರಸಾರ ಮಾಡಿತ್ತು. ಆದರೆ ಈ ವಿಷಯವನ್ನು ಸರ್ಕಾರವಾಗಲಿ ಅಥವಾ ಮಿಲಿಟರಿ ಅಧಿಕಾರಿಗಳು ಖಚಿತಪಡಿಸಿಲ್ಲವಾಗಿತ್ತು. ತಾಲಿಬಾನ್ ಮಾತ್ರ ಮೆಹ್ಸೂದ್ ಸಾವಿನ ಸುದ್ದಿಯನ್ನು ಸಾರಸಗಟಾಗಿ ತಳ್ಳಿಹಾಕಿತ್ತು.
ಸಂಬಂಧಿತ ಮಾಹಿತಿ ಹುಡುಕಿ