ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್: ಪ್ರಬಲ ಬಾಂಬ್ ಸ್ಫೋಟಕ್ಕೆ 4ಪತ್ರಕರ್ತರು ಬಲಿ (journalists | Pak blast | Islamabad | Taliban)
Bookmark and Share Feedback Print
 
ಪಾಕಿಸ್ತಾನದ ವಾಯುವ್ಯ ಭಾಗದ ಹೊರವಲಯವಾದ ಡೀರ್ ಜಿಲ್ಲೆಯಲ್ಲಿ ಉಗ್ರರು ಭದ್ರತಾ ಪಡೆಯ ವಾಹನವನ್ನು ಗುರಿಯಾಗಿರಿಸಿಕೊಂಡ ನಡೆಸಿದ ಪ್ರಬಲ ಬಾಂಬ್ ಸ್ಫೋಟದಲ್ಲಿ ನಾಲ್ಕು ಮಂದಿ ವಿದೇಶಿ ಪತ್ರಕರ್ತರು ಬಲಿಯಾಗಿದ್ದು, ಹಲವಾರು ಮಂದಿ ಗಾಯಗೊಂಡಿರುವ ಘಟನೆ ಬುಧವಾರ ನಡೆದಿದೆ.

ಡೀರ್ ದಿಲ್ಲೆಯ ಬಾಲಂಬಟ್ ಪ್ರದೇಶದ ಸರ್ಕಾರಿ ಬಾಲಕಿಯರ ಶಿಕ್ಷಣ ಸಂಸ್ಥೆ ಸಮೀಪ ಟೈಮೆರ್‌ಗರ್‌ನಿಂದ ಮೈಡನ್ ಪ್ರದೇಶಕ್ಕೆ ಭದ್ರತಾ ಪಡೆಯ ವಾಹನ ಹೋಗುತ್ತಿದ್ದ ವೇಳೆ ಅದನ್ನು ಗುರಿಯಾಗಿರಿಸಿಕೊಂಡು ಈ ದಾಳಿ ನಡೆಸಲಾಗಿತ್ತು.

ಈ ಘಟನೆಯಲ್ಲಿ ನಾಲ್ದು ಮಂದಿ ವಿದೇಶಿ ಪತ್ರಕರ್ತರು ಸಾವನ್ನಪ್ಪಿದ್ದು, ಹಲವಾರು ಮಂದಿ ಗಾಯಗೊಂಡಿರುವುದಾಗಿ ನಿಯೋ ನ್ಯೂಸ್ ಚಾನೆಲ್ ವರದಿ ತಿಳಿಸಿದೆ. ಆದರೆ ಮೃತಪಟ್ಟ ವಿದೇಶಿ ಪತ್ರಕರ್ತರು ಯಾವ ದೇಶಕ್ಕೆ ಸೇರಿದ್ದಾರೆ ಎಂಬುದನ್ನು ತಿಳಿಸಿಲ್ಲ.

ಅಲ್ಲದೇ ಸ್ಫೋಟದಿಂದಾಗಿ ಶಾಲಾ ಕಟ್ಟಡ ಕೂಡ ಜಖಂಗೊಂಡಿರುವುದಾಗಿ ವರದಿ ಹೇಳಿದೆ. ಪತ್ರಕರ್ತರೂ ಕೂಡ ಭದ್ರತಾ ಪಡೆಯ ವಾಹನದಲ್ಲಿ ತೆರಳುತ್ತಿದ್ದಾಗ ಉಗ್ರರು ಈ ದುಷ್ಕೃತ್ಯ ಎಸಗಿದ್ದರು ಎಂದು ವರದಿ ವಿವರಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ