ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ವ್ಯಕ್ತಿಯ ಬಾಯಲ್ಲೇ ಸಿಗರೇಟು ಸ್ಫೋಟ; ಆರು ಹಲ್ಲು ಬಲಿ..! (Indonesia | loses teeth | cigarette explosion | PT Nojorono Tobacco)
Bookmark and Share Feedback Print
 
ಶೀರ್ಷಿಕೆ ವಿಚಿತ್ರವಾಗಿರುವಷ್ಟೇ ವಿಚಿತ್ರ ಸುದ್ದಿಯಿದು. ಇಂಡೋನೇಷಿಯಾ ಧೂಮಪಾನಿಯೊಬ್ಬನ ಬಾಯಲ್ಲೇ ಮಾಮೂಲಿ ಸಿಗರೇಟೊಂದು ಸ್ಫೋಟಗೊಂಡಿದ್ದರಿಂದ ಆರು ಹಲ್ಲುಗಳನ್ನು ಕಳೆದುಕೊಂಡಿದ್ದಾನೆ.

ಇದಕ್ಕಾಗಿ ಮುಖದಲ್ಲೆಲ್ಲಾ 51 ಸ್ಟಿ‌ಚ್‌ಗಳನ್ನೂ ಹಾಕಿಸಿಕೊಂಡಿರುವ ಮಹಾಶಯ ಸಿಗರೇಟು ಕಂಪನಿಯನ್ನು ನೋವು ಹಾಗೂ ಅಚ್ಚರಿಯಿಂದ ಶಪಿಸುತ್ತಿದ್ದಾನೆ. ಬೈಕ್ ಓಡಿಸುತ್ತಾ ಸಿಗರೇಟು ಸೇದುತ್ತಿದ್ದಾಗ ಈ ಸ್ಫೋಟ ಸಂಭವಿಸಿದೆಯಂತೆ.

ಜಕಾರ್ತದ ಬೇಕಾಸಿ ಎಂಬಲ್ಲಿನ ನಿವಾಸಿಯಾಗಿರುವ ಆಂಡಿ ಸುಸಾಂತೋ ಎಂಬಾತನೇ ಸಿಗರೇಟಿನ ಈ ಬಲಿಪಶು. ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದಾಗಿನಿಂದ ಸಿಗರೇಟನ್ನು ಬಿಟ್ಟಿರಲಾರದೆ ಚಟವಾಗಿ ಪರಿವರ್ತಿಸಿಕೊಂಡಿದ್ದ ಸುಸಾಂತೋಗೆ ಸಿಗರೇಟೊಂದು ಸ್ಫೋಟಗೊಳ್ಳುವುದಾದರೂ ಹೇಗೆ ಎಂಬ ಅಚ್ಚರಿ ಮೂಡುತ್ತಿರುವುದರ ಜತೆಗೆ ಕಂಪನಿಯನ್ನೂ ತರಾಟೆಗೆ ತೆಗೆದುಕೊಂಡಿದ್ದಾನೆ.

ಹೀಗಾಗಿರುವುದನ್ನು ನಂಬಲು ಕಷ್ಟ ಎನ್ನುತ್ತಿರುವ 'ಪಿಟಿ ನೊಜೊರೊನೊ ಟೊಬ್ಯಾಕೋ' ಕಂಪನಿ ಸುಸಾಂತೋಗೆ ಪರಿಹಾರ ನೀಡಲು ಒಪ್ಪಿಕೊಂಡಿದೆ. ಆತ ಚಿಕಿತ್ಸೆಗಾಗಿ 535 ಡಾಲರುಗಳನ್ನು ವ್ಯಯಿಸಿದ್ದು, ಇದನ್ನು ತಾನು ನೀಡುತ್ತೇನೆ. ನ್ಯಾಯಾಲಯಕ್ಕೆ ಹೋಗುವುದು ಬೇಡ ಎಂದು ಸುಸಾಂತೋನನ್ನು ಒಪ್ಪಿಸಿದೆ.

ನಮ್ಮ ಸಿಗರೇಟುಗಳಲ್ಲಿ ಸ್ಫೋಟಕದ ಅಂಶಗಳಿಲ್ಲ. ಇದೊಂದು ವಿಚಿತ್ರ ಪ್ರಕರಣ. ನಮಗೆ ಇಂತಹ ಒಂದು ದೂರು ಬಂದಿರುವುದು ಇದೇ ಮೊದಲು. ನಾವು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಗಾಗಿ ಕಾಯುತ್ತಿದ್ದೇವೆ. ಪೊಲೀಸರೊಂದಿಗೂ ಸಮಾಲೋಚನೆ ನಡೆಸುತ್ತಿದ್ದೇವೆ. ಖಂಡಿತಾ ಮಾರುಕಟ್ಟೆಯಲ್ಲಿರುವ ಸಿಗರೇಟುಗಳನ್ನು ವಾಪಸು ಪಡೆದುಕೊಳ್ಳುವುದಿಲ್ಲ ಎಂದು ಸಿಗರೇಟ್ ಕಂಪನಿ ಹೇಳಿಕೆ ನೀಡಿದೆ.

ಸ್ಫೋಟದ ನಂತರ ಭೀತಿಗೊಳಗಾಗಿರುವ 31ರ ಹರೆಯದ ಸುಸಾಂತೋ ಸಿಗರೇಟು ಚಟವನ್ನು ಬಿಡಲು ಯತ್ನಿಸುವುದಾಗಿ ಹೇಳಿದ್ದಾನೆ.
ಸಂಬಂಧಿತ ಮಾಹಿತಿ ಹುಡುಕಿ