ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಾರತ ವಿರುದ್ಧ ಪಾಕ್ ಕುತಂತ್ರದಿಂದ ಅಲ್‌ಖೈದಾ ಸುರಕ್ಷಿತ (India | Al Qaeda | USA | Pakistan)
Bookmark and Share Feedback Print
 
ಭಾರತಕ್ಕೆ ಹೊಡೆತ ನೀಡುವ ನಿಟ್ಟಿನಲ್ಲಿ ಉಗ್ರ ಸಂಘಟನೆಗಳನ್ನು ಬಳಸಿಕೊಳ್ಳುವ ಪಾಕಿಸ್ತಾನದ ತಂತ್ರದಿಂದಾಗಿ ಅದರ ಭಯೋತ್ಪಾದನೆ ವಿರುದ್ಧದ ಸಮರಕ್ಕೆ ಹಿನ್ನಡೆಯುಂಟಾಗುವುದು ಮಾತ್ರವಲ್ಲ, ಅಲ್‌ಖೈದಾಕ್ಕೂ ತನ್ನ ನೆಲೆಯನ್ನು ಸುರಕ್ಷಿತಗೊಳಿಸಲು ಸಹಾಯ ಮಾಡಿದಂತಾಗುತ್ತದೆ ಎಂದು ಅಮೆರಿಕಾದ ಬೇಹುಗಾರಿಕಾ ಸಂಸ್ಥೆಯೊಂದು ಅಭಿಪ್ರಾಯಪಟ್ಟಿದೆ.

ಇಸ್ಲಾಮಾಬಾದ್‌ನ ತಂತ್ರಗಾರಿಕೆಯು ಅಲ್‌ಖೈದಾಕ್ಕೆ ನೆಮ್ಮದಿ ತರುವ ಅಪಾಯವನ್ನು ಹೊಂದಿದೆ. ಯಾಕೆಂದರೆ ಪಾಕಿಸ್ತಾನ ಬೆಂಬಲಿತ ಕೆಲವು ಗುಂಪುಗಳು ಅಲ್‌ಖೈದಾಕ್ಕೆ ಸಹಕಾರ ನೀಡುತ್ತವೆ ಎಂದು ಸೆನೆಟ್ ಬೇಹುಗಾರಿಕಾ ಸಮಿತಿಯ ರಾಷ್ಟ್ರೀಯ ಗುಪ್ತಚರ ನಿರ್ದೇಶಕ ಡೆನಿಸ್ ಬ್ಲೇರ್ ಮಂಗಳವಾರ ಹೇಳಿದ್ದಾರೆ.

ಭಾರತೀಯ ಮಿಲಿಟರಿಯ ವಿರುದ್ಧ ಪಾಕಿಸ್ತಾನದ ತಾಂತ್ರಿಕ ಸಮರಕ್ಕೆ ಭಯೋತ್ಪಾದನಾ ಗುಂಪುಗಳು ಅಗತ್ಯ ಎಂಬುದು ಇಸ್ಲಾಮಾಬಾದ್ ಅಭಿಪ್ರಾಯ. ಇದರಿಂದಾಗಿ ಭಯೋತ್ಪಾದನೆ ವಿರುದ್ಧದ ಹೋರಾಟಕ್ಕಾಗಿ ಭಾರತವು ಆರ್ಥಿಕ ಮೂಲಗಳನ್ನು ವ್ಯಯಿಸಲು ಪಾಕಿಸ್ತಾನವು ಪರೋಕ್ಷವಾಗಿ ಪ್ರೋತ್ಸಾಹಿಸುತ್ತದೆ ಎಂದು ಅವರು ವಿವರಣೆ ನೀಡಿದ್ದಾರೆ.

ಪಾಕಿಸ್ತಾನವು ಸ್ವತಃ ಭಯೋತ್ಪಾದನೆಯಿಂದ ನಲುಗುತ್ತಿದೆಯಾದರೂ ಭಾರತದ ವಿಚಾರಕ್ಕೆ ಬಂದಾಗ ಅದು ಉಗ್ರ ಸಂಘಟನೆಗಳನ್ನು ಹಲವು ಕಾಲದಿಂದ ಬೆಂಬಲಿಸುತ್ತಲೇ ಬಂದಿದೆ ಮತ್ತು ಅದನ್ನು ಮುಂದುವರಿಸಲಿದೆ. ಭಾರತದ ಅಗಾಧ ಮಿಲಿಟರಿ ಮತ್ತು ಆರ್ಥಿಕ ಸಂಪನ್ಮೂಲವನ್ನು ಕುಗ್ಗಿಸಲು ಈ ಕೌಶಲ್ಯಯುತ ಮಾರ್ಗವನ್ನು ಅದು ಮುಂದುವರಿಸಲಿದೆ ಎಂದು ಇತ್ತೀಚೆಗಷ್ಟೇ ಅಮೆರಿಕಾದ ಮತ್ತೊಂದು ಸಂಘಟನೆ ಕೂಡ ಹೇಳಿತ್ತು.

ಇದರಿಂದಾಗಿ ಅಫ್ಘಾನ್ ತಾಲಿಬಾನ್, ಅಲ್‌ಖೈದಾ ಮತ್ತು ಪಾಕಿಸ್ತಾನದಲ್ಲಿನ ಭಯೋತ್ಪದನಾ ಸಂಘಟನೆಗಳು ನೇರವಾಗಿ ಪಾಕಿಸ್ತಾನ ಸರಕಾರಕ್ಕೆ ಸವಾಲೊಡ್ಡಲಿವೆ. ಆ ಮೂಲಕ ಅವು ಅಮೆರಿಕಾ ಮತ್ತು ಅದರ ಮಿತ್ರರಾದ ಅಫಘಾನಿಸ್ತಾನ, ಭಾರತ ಮತ್ತು ಯೂರೋಪ್‌ಗಳ ಮೇಲೆ ದಾಳಿ ನಡೆಸಲು ಪಾಕಿಸ್ತಾನದಲ್ಲೇ ತರಬೇತಿ ಶಿಬಿರಗಳನ್ನು ನಡೆಸುವುದು ಮತ್ತು ದಾಳಿ ಯೋಜನೆಗಳನ್ನು ಸಂಘಟಿಸಲು ಸಾಧ್ಯವಾಗುತ್ತದೆ ಎಂದು ಬ್ಲೇರ್ ಅಭಿಪ್ರಾಯಪಟ್ಟಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ