ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಆಸೀಸ್ ಹುಡುಗಿಯರಿಗೆ ಭಾರತೀಯನಿಂದ ಲೈಂಗಿಕ ಕಿರುಕುಳ (Indian student | sexual assault | western Victoria | Joginder Singh)
Bookmark and Share Feedback Print
 
ಆಸ್ಟ್ರೇಲಿಯಾದ ಪಶ್ಚಿಮ ವಿಕ್ಟೋರಿಯಾ ನ್ಯಾಯಾಲಯವೊಂದರಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬನ ಮೇಲೆ ಇಬ್ಬರು ಅಪ್ರಾಪ್ತ ಹುಡುಗಿಯರಿಗೆ ಲೈಂಗಿಕ ಹಿಂಸೆ ನೀಡಿದ ಆರೋಪವನ್ನು ಹೊರಿಸಲಾಗಿದೆ.

ಕಳೆದ ತಿಂಗಳಿನಲ್ಲಿ 23ರ ಹರೆಯದ ಜೋಗಿಂದರ್ ಸಿಂಗ್ ಎಂಬಾತ ಇಲ್ಲಿನ ಹಾರ್ಷಮ್ ಎಂಬಲ್ಲಿ ಇಬ್ಬರು ಹುಡುಗಿಯರಿಗೆ ಮಾದಕ ಪೇಯ ಕುಡಿಸಿದ ನಂತರ ಕಾರಿನಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪ ಹೊರಿಸಲಾಗಿದ್ದು, ಸೆರೆಮನೆಗೆ ಕಳುಹಿಸಲಾಗಿದೆ.

ಆತನ ಮೇಲೆ 16ರೊಳಗಿನ ಮಕ್ಕಳಿಗೆ ಲೈಂಗಿಕ ಕಿರುಕುಳ ಮತ್ತು ಅಸಭ್ಯ ವರ್ತನೆ ಕಾಯ್ದೆಯಡಿಯಲ್ಲಿ ಆರೋಪ ಹೊರಿಸಲಾಗಿದ್ದು, ಮ್ಯಾಜಿಸ್ಟ್ರೇಟ್ ರಿಚರ್ಡ್ ಪಿತೌಸ್ ಅವರು ಪೊಲೀಸ್ ವಶಕ್ಕೆ ಒಪ್ಪಿಸಿದ್ದಾರೆ ಎಂದು ಎಬಿಸಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

ವಿದ್ಯಾರ್ಥಿ ವೀಸಾದಲ್ಲಿ ಆಸ್ಟ್ರೇಲಿಯಾದಲ್ಲಿದ್ದ ಸಿಂಗ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಎರಡು ಬಾರಿ ಜಾಮೀನಿಗಾಗಿ ಮನವಿ ಸಲ್ಲಿಸಿದ್ದ. ತಾನು ಪಾಸ್‌ಪೋರ್ಟನ್ನು ಈಗಾಗಲೇ ನ್ಯಾಯಾಲಯಕ್ಕೆ ಒಪ್ಪಿಸಿದ್ದೇನೆ, ನನಗೆ ವಿದ್ಯಾಭ್ಯಾಸ ಮುಂದುವರಿಸಲು ಮೆಲ್ಬೋರ್ನ್‌ಗೆ ತೆರಳುವ ಅಗತ್ಯವಿದೆ ಎಂಬ ಕಾರಣ ನೀಡಿ ಜಾಮೀನಿಗಾಗಿ ಕೋರಿದ್ದ.

ಆದರೆ ಸಿಂಗ್ ಮತ್ತೆ ಅಂತಹ ಅಪರಾಧಗಳನ್ನು ಮಾಡಬಹುದು ಎಂದಿರುವ ಮ್ಯಾಜಿಸ್ಟ್ರೇಟ್ ಪಿತೌಸ್, ಜಾಮೀನು ನೀಡಲು ನಿರಾಕರಿಸಿದ್ದಾರೆ. ಈ ಹಿಂದೆ ಜಾಮೀನು ನೀಡಿದ್ದಾಗ ಸಿಂಗ್ ನಿಯಮಗಳನ್ನು ಉಲ್ಲಂಘಿಸಿದ್ದ.
ಸಂಬಂಧಿತ ಮಾಹಿತಿ ಹುಡುಕಿ