ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಮೆರಿಕದ ಮೇಲೆ ಅಲ್ ಖಾಯಿದಾ ದಾಳಿ ಸಾಧ್ಯತೆ: ಸಿಐಎ (America | Al-Qaida | intelligence | CIA)
Bookmark and Share Feedback Print
 
ಮುಂದಿನ ಮೂರು ಅಥವಾ ಆರು ತಿಂಗಳೊಳಗೆ ಅಲ್ ಖಾಯಿದಾ ಉಗ್ರಗಾಮಿ ಸಂಘಟನೆ ಅಮೆರಿಕದ ಮೇಲೆ ಮತ್ತೆ ದಾಳಿ ನಡೆಸುವ ಸಾಧ್ಯತೆ ಇರುವುದಾಗಿ ಗುಪ್ತಚರ ಇಲಾಖೆಯ ಹಿರಿಯ ಅಧಿಕಾರಿಗಳು ಕಾಂಗ್ರೆಸ್‌ಗೆ ಮುನ್ನೆಚ್ಚರಿಕೆ ನೀಡಿದ್ದಾರೆ.

ಅಮೆರಿಕದ ಮೇಲೆ ಮತ್ತೆ ಹೊಸ ದಾಳಿ ನಡೆಸುವ ನಿಟ್ಟಿನಲ್ಲಿ ಉಗ್ರಗಾಮಿ ಸಂಘಟನೆ ಪಡೆಯನ್ನು ರಚಿಸಿರುವುದಾಗಿ ಸಿಐಎ ನಿರ್ದೇಶಕ ಲಿಯೋನ್ ಪನೆಟ್ಟಾ ತಿಳಿಸಿದ್ದಾರೆ.

ಡಿಸೆಂಬರ್ 25ರಂದು ನೈಜೀರಿಯಾದ ವ್ಯಕ್ತಿ ಉಮರ್ ಫಾರೂಕ್ ಅಬ್ದುಲ್‌ಮುತುಲ್ಲಾಬ್ ಅಮೆರಿಕದ ವಿಮಾನವನ್ನು ಸ್ಫೋಟಿಸಲು ವಿಫಲ ಯತ್ನ ನಡೆಸಿ ಪೊಲೀಸರ ಅತಿಥಿಯಾಗಿರುವ ಆತ ವಿಚಾರಣೆಯ ವೇಳೆ ಈ ಮಾಹಿತಿಯನ್ನು ಹೊರಗೆಡವಿದ್ದಾನೆ ಎಂದು ಅವರು ವಿವರಿಸಿದ್ದಾರೆ.

ಆ ನೆಲೆಯಲ್ಲಿ ಅಲ್ ಖಾಯಿದಾ ಮತ್ತು ಅದರ ಸಹಚರ ಸಂಘಟನೆಗಳು ಅಮೆರಿದೊಳಗೆ ಮತ್ತೆ ಸ್ಫೋಟ ನಡೆಸುವ ಬಲವಾದ ಇಚ್ಛೆ ಹೊಂದಿರುವುದಾಗಿ ಅಮೆರಿಕದ ಗುಪ್ತಚರ ಇಲಾಖೆಯ ಅಧಿಕಾರಿ ಡೆನ್ನಿಸ್ ಬ್ಲೇರ್ ಕೂಡ ಖಚಿತಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ