ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಉತ್ತರ ಕೊರಿಯಾ ಭಯೋತ್ಪಾದಕ ರಾಷ್ಟ್ರ: ಅಮೆರಿಕ (North Korea | Barack Obama | US terror list | Washington)
Bookmark and Share Feedback Print
 
ಉತ್ತರ ಕೊರಿಯಾ ಮತ್ತೆ ಅಮೆರಿಕದ ಭಯೋತ್ಪಾದಕ ರಾಷ್ಟ್ರ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಅಂಕಿತ ಹಾಕುವ ಮೂಲಕ, ಉತ್ತರ ಕೊರಿಯಾ ಮರಳಿ ಸ್ಟಾಲಿನಿಸಂ ತತ್ವಕ್ಕೆ ಅಂಟಿಕೊಂಡಂತಾಗಿದೆ.

ನ್ಯೂಕ್ಲಿಯರ್ ಚಟುವಟಿಕೆಯನ್ನು ನಿರಾತಂಕವಾಗಿ ಮುಂದುವರಿಸಿದ್ದ ಹಿನ್ನೆಲೆಯಲ್ಲಿ ರಾಷ್ಟ್ರ ಪೋಷಿತ ಭಯೋತ್ಪಾದಕನೆಯಲ್ಲಿ ತೊಡಗಿದೆ ಎಂಬ ಹಣೆಪಟ್ಟಿಯೊಂದಿಗೆ ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್ ಕೂಡ ಉತ್ತರ ಕೊರಿಯಾವನ್ನು ಅಮೆರಿಕದ ಪಟ್ಟಿಯಲ್ಲಿ ಸೇರಿಸಿದ್ದರು.

ನ್ಯೂಕ್ಲಿಯರ್ ಚಟುವಟಿಕೆಯನ್ನು ನಡೆಸಬಾರದು ಎಂಬ ಎಚ್ಚರಿಕೆಯ ನಡುವೆಯೂ ಉತ್ತರ ಕೊರಿಯಾ ಮಿಸೈಲ್ ಪರೀಕ್ಷೆ. ಅಟೋಮಿಕ್ ಪರೀಕ್ಷೆಯನ್ನು ರಹಸ್ಯವಾಗಿ ನಡೆಸುತ್ತಿರುವುದನ್ನು ಮುಂದುವರಿಸಿರುವ ಹಿನ್ನೆಲೆಯಲ್ಲಿ ಉತ್ತರ ಕೊರಿಯಾವನ್ನು ಭಯೋತ್ಪಾದಕ ಪಟ್ಟಿಯಲ್ಲಿ ಮತ್ತೆ ಸೇರಿಸಲು ಬರಾಕ್ ಒಬಾಮ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್‌ನ ಪ್ರಮುಖ ಸದಸ್ಯರು ಬೇಡಿಕೆ ಇಟ್ಟಿದ್ದರು.

ಆದರೂ ಏಕಾಏಕಿ ಕ್ರಮ ಕೈಗೊಳ್ಳದ ಬರಾಕ್ ಅವರು, ಉತ್ತರ ಕೊರಿಯಾಕ್ಕೆ ಸಾಕಷ್ಟು ಬಾರಿ ನ್ಯೂಕ್ಲಿಯರ್ ಪರೀಕ್ಷೆ, ಮಿಸೈಲ್ ಪರೀಕ್ಷೆ ನಡೆಸಬಾರದೆಂದು ತಾಕೀತು ಮಾಡಿದ್ದರು ಕೂಡ, ಉ.ಕೊರಿಯಾ ರಾಷ್ಟ್ರ ಕೃಪಾಪೋಷಿತ ಭಯೋತ್ಪಾದನೆಯನ್ನು ಮುಂದುವರಿಸಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿರುವುದಾಗಿ ವಾಷಿಂಗ್ಟನ್ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ