ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕಾಲೇಜು ಫೀಸಿಗಾಗಿ ಕನ್ನೆತನವನ್ನೇ ಮಾರಿದಳು ಬಡ ಹುಡುಗಿ..! (New Zealand | virginity | student | Unigirl)
Bookmark and Share Feedback Print
 
ಕಾಲೇಜಿನ ಶುಲ್ಕ ಪಾವತಿಸುವ ಕಾರಣ ಮುಂದಿಟ್ಟಿರುವ ನ್ಯೂಜಿಲೆಂಡ್‌ನ 19ರ ಹರೆಯದ ಕೋಮಲೆಯೊಬ್ಬಳು ತನ್ನ ಕನ್ಯತ್ವವನ್ನು ಬರೋಬ್ಬರಿ 15 ಲಕ್ಷ ರೂಪಾಯಿಗಳಿಗೆ ಹರಾಜೊಂದರಲ್ಲಿ ಮಾರಿದ್ದಾಳೆ.

ಜಾಹೀರಾತುಗಳನ್ನೇ ಪ್ರಕಟಿಸುವ ವೆಬ್‌ಸೈಟ್‌ವೊಂದರಲ್ಲಿ (ineed.co.nz) ತನ್ನ ಕನ್ಯತ್ವವನ್ನು ಹರಾಜು ಹಾಕಿದ್ದ ಅನಾಮಿಕ ಹುಡುಗಿ ತನ್ನನ್ನು 'ಯುನಿಗರ್ಲ್' ಎಂದು ಹೆಸರಿಸಿಕೊಂಡಿದ್ದು, 45,000 ನ್ಯೂಜಿಲೆಂಡ್ ಡಾಲರುಗಳಿಗೂ ಹೆಚ್ಚು ಮೊತ್ತಕ್ಕೆ ತನ್ನ ಕನ್ನೆತನವನ್ನು ಮಾರಿದ್ದೇನೆ ಎಂದು ತಿಳಿಸಿದ್ದಾಳೆ.
ಆಕೆ ಪ್ರಕಟಿಸಿರುವ ಜಾಹೀರಾತಿದು...
PR


ಸುಮಾರು 30,000ಕ್ಕೂ ಹೆಚ್ಚು ಮಂದಿ ಈಕೆಯ ಜಾಹೀರಾತನ್ನು ವೆಬ್‌ಸೈಟಿನಲ್ಲಿ ನೋಡಿದ್ದಾರೆ. 1,200ಕ್ಕೂ ಹೆಚ್ಚು ಆಸಕ್ತರು ಬಿಡ್ ಮಾಡಿದ್ದಾರೆ. ಅವರೆಲ್ಲರಿಗೂ 'ಯುನಿಗರ್ಲ್' ಈಗ ಕೃತಜ್ಞತೆ ಸಲ್ಲಿಸಿದ್ದು, ಹರಾಜು ಮುಕ್ತಾಯಗೊಂಡಿದೆ ಎಂದು ಪ್ರಕಟಿಸಿದ್ದಾಳೆ. ಆದರೆ ತನ್ನ ಕನ್ಯತ್ವವನ್ನು ಹರಾಜಿನಲ್ಲಿ ಗೆದ್ದವರು ಯಾರು ಮತ್ತು ತನ್ನ ಕುರಿತ ವಿವರಣೆಗಳನ್ನು ಬಿಟ್ಟುಕೊಟ್ಟಿಲ್ಲ.

ತಾನು ನಾರ್ತ್ಲೆಂಡ್ ನಿವಾಸಿ ಎಂದು ಹೇಳಿಕೊಂಡಿರುವ ಹುಡುಗಿ ತನ್ನ ಪೂರ್ವಾಪರಗಳನ್ನು ಸಂಪೂರ್ಣವಾಗಿ ಬಿಚ್ಚಿಡಲು ನಿರಾಕರಿಸಿದ್ದಾಳೆ. ಆದರೆ, ತಾನು ಆಕರ್ಷಕ ಮೈಕಟ್ಟು ಹೊಂದಿದ್ದೇನೆಂದೂ, ಸುಂದರಿಯೆಂದೂ, ಆರೋಗ್ಯವಂತೆಯೆಂದೂ ಮತ್ತು ಅದಕ್ಕಿಂತಲೂ ಮುಖ್ಯವಾಗಿ ಇದುವರೆಗೂ ಯಾವುದೇ ಪುರುಷನ ಜತೆ ದೈಹಿಕ ಸಂಪರ್ಕ ನಡೆಸಿಲ್ಲವೆಂದೂ ಸ್ಪಷ್ಟಪಡಿಸಿದ್ದಾಳೆ.

ನಾನು ಅಂದುಕೊಂಡ ಬೆಲೆ ಹರಾಜಿನಲ್ಲಿ ನನಗೆ ದೊರೆತಿದೆ. ನಿಯಮದಂತೆ 'ಕನ್ಯತ್ವ' ಬಿಡ್ ಗೆದ್ದ 'ವ್ಯಕ್ತಿ'ಗೆ ತನ್ನ ದೇಹವನ್ನು ನಿರ್ದಿಷ್ಟ ದಿನದಂದು ಒಪ್ಪಿಸಲಿದ್ದೇನೆ. ಆದರೆ 'ಆ' ಸಂದರ್ಭದಲ್ಲಿ ಅಗತ್ಯ ಆರೋಗ್ಯ ಮುನ್ನೆಚ್ಚೆರಿಕಾ ಕ್ರಮಗಳನ್ನು ತಾನು ತೆಗೆದುಕೊಳ್ಳುತ್ತೇನೆ. ಇದರ ದುಷ್ಪರಿಣಾಮಗಳ ಕುರಿತು ನನಗೆ ಅರಿವಿದೆ ಎಂದು 'ಯುನಿಗರ್ಲ್' ತಿಳಿಸಿದ್ದಾಳೆ.

ನ್ಯೂಜಿಲೆಂಡ್‌ನಲ್ಲಿ ವೇಶ್ಯಾವಾಟಿಕೆ ಅಧಿಕೃತ ಮತ್ತು ವಾಣಿಜ್ಯ ಚಟುವಟಿಕೆ. ಅಲ್ಲದೆ ಪತ್ರಿಕೆಗಳಲ್ಲಿ ಸೆಕ್ಸ್ ಜಾಹೀರಾತುಗಳನ್ನು ನೀಡಲು ಕೂಡ ಕಾನೂನಿನಲ್ಲಿ ಅವಕಾಶಗಳಿವೆ. ಹಾಗಾಗಿ ಈಕೆಯ ಕನ್ಯತ್ವ ಮಾರಾಟವನ್ನು ಕಾನೂನಿನ ಪ್ರಕಾರ ತಡೆಯುವಂತಿಲ್ಲ ಎಂದು ಅಲ್ಲಿನ ಪೊಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ.

ಆದರೆ ಕೆಲವು ಮಹಿಳಾ ಪರ ಸಂಘಟನೆಗಳು ವಿದ್ಯಾರ್ಥಿನಿಯ ನಿರ್ಧಾರವನ್ನು ತೀವ್ರವಾಗಿ ಖಂಡಿಸಿವೆ. ಆಕೆ ಕನ್ಯತ್ವವನ್ನು ಮಾರಿಕೊಳ್ಳುತ್ತಿಲ್ಲ, ಬದಲಿಗೆ ತನ್ನತನವನ್ನೇ ಮಾರುತ್ತಿದ್ದಾಳೆ. ಇದು ಸಲ್ಲದು, ಆಕೆ ಇನ್ನೂ ತನ್ನ ತೀರ್ಮಾನವನ್ನು ಬದಲಾಯಿಸಬಹುದಾಗಿದೆ ಎಂದು ಹೇಳಿಕೊಂಡಿವೆ.
ಸಂಬಂಧಿತ ಮಾಹಿತಿ ಹುಡುಕಿ