ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಮೆರಿಕ ಡ್ರೋನ್ ದಾಳಿಯಲ್ಲಿ ಮೆಹ್ಸೂದ್ ಸತ್ತಿಲ್ಲ: ಪಾಕ್ (North Waziristan | Hakimullah Mehsud | Pakistan | Islamabad)
Bookmark and Share Feedback Print
 
ಕಳೆದ ತಿಂಗಳು ಅಮೆರಿಕ ನಡೆಸಿದ ಡ್ರೋನ್ ದಾಳಿಯಲ್ಲಿ ಪಾಕಿಸ್ತಾನ್ ತಾಲಿಬಾನ್ ಮುಖ್ಯಸ್ಥ ಹಕಿಮುಲ್ಲಾ ಬದುಕುಳಿದಿರುವ ಸಾಧ್ಯತೆ ಇರುವುದಾಗಿ ಪಾಕಿಸ್ತಾನದ ಅಧಿಕಾರಿಗಳು ತಿಳಿಸಿದ್ದಾರೆ.

ಅಮೆರಿಕ ನಡೆಸಿದ ದಾಳಿಯಲ್ಲಿ ತಾಲಿಬಾನ್ ಆತ್ಮಹತ್ಯಾ ಬಾಂಬರ್ ಜನಕ, ಮೆಹ್ಸೂದ್ ನಿಕಟವರ್ತಿ ಖ್ವಾರಿ ಹುಸೈನ್ ಸಾವನ್ನಪ್ಪಿದ್ದು, ಮೆಹ್ಸೂದ್ ಬಹುತೇಕ ಜೀವಂತವಾಗಿರುವ ಸಾಧ್ಯತೆ ಇರುವುದಾಗಿ ಪಾಕಿಸ್ತಾನದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಜನವರಿ 26ರಂದು ಉತ್ತರ ವಜೀರಿಸ್ತಾನದಲ್ಲಿ ಅಮೆರಿಕ ನಡೆಸಿದ ಡ್ರೋನ್ ದಾಳಿಯಲ್ಲಿ ಮೆಹ್ಸೂದ್ ಸಾವನ್ನಪ್ಪಿರುವುದಾಗಿ ಮಾಧ್ಯಮಗಳ ವರದಿ ತಿಳಿಸಿರುವ ಹಿನ್ನೆಲೆಯಲ್ಲಿ, ಮೆಹ್ಸೂದ್ ಸಾವು ನಿಗೂಢವಾಗುತ್ತಿದೆ.

ಆದರೆ ಪಾಕಿಸ್ತಾನದ ತೆಹ್ರೀಕ್ ಇ ತಾಲಿಬಾನ್(ಟಿಟಿಪಿ) ಮಾತ್ರ ದಾಳಿಯಲ್ಲಿ ಮೆಹ್ಸೂದ್ ಸಾವನ್ನಪ್ಪಿಲ್ಲ ಎಂದು ಹೇಳಿದೆ. ಮಾಧ್ಯಮಗಳ ವರದಿ ಸುಳ್ಳು ಎಂದು ತಿಳಿಸಿದೆ. ಮೆಹ್ಸೂದ್ ಸಾವಿನ ಕುರಿತು ಊಹಾಪೋಹ ಎದ್ದಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನ್ ಆರ್ಮಿ ತನಿಖೆ ನಡೆಸುತ್ತಿರುವುದಾಗಿ ಪಾಕಿಸ್ತಾನ ವಿವರಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ