ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಡ್ರೋನ್ ದಾಳಿಯಿಂದ ಪಾರಾದ ತಾಲಿಬಾನ್ ಕಮಾಂಡರ್ ಹಖಾನಿ (Pakistan | Afghan Taliban | Sirajuddin Haqqani | US drone strike)
Bookmark and Share Feedback Print
 
ಪಾಕಿಸ್ತಾನದ ಹಿಡಿತದಲ್ಲಿಲ್ಲದ ಪ್ರದೇಶವೊಂದರ ಮೇಲೆ ಅಫ್ಘಾನ್ ತಾಲಿಬಾನ್ ಕಮಾಂಡರ್ ಸಿರಾಜುದ್ದೀನ್ ಹಖಾನಿಯನ್ನು ಗುರಿಯಾಗಿರಿಸಿಕೊಂಡು ಅಮೆರಿಕಾ ನಡೆಸಿದ ಡ್ರೋನ್ ದಾಳಿ ನಡೆಸಿತ್ತಾದರೂ, ಕೂದಲೆಳೆ ಅಂತರದಿಂದ ಆತ ತಪ್ಪಿಸಿಕೊಂಡಿದ್ದಾನೆ ಎಂದು ಅಮೆರಿಕಾ ಅಧಿಕಾರಿಗಳು ಹೇಳಿದ್ದಾರೆ.

ಅಮೆರಿಕಾ ಡ್ರೋನ್ ದಾಳಿ ನಡೆಸಿದ ಪ್ರದೇಶದಲ್ಲಿ ಸಿರಾಜುದ್ದೀನ್ ಇದ್ದದ್ದು ಹೌದು, ಆದರೆ ದಾಳಿಗೆ ಮುಂಚೆಯೇ ಆತ ಅಲ್ಲಿಂದ ದೂರ ಹೋಗಿದ್ದ ಎಂದು ಹಖಾನಿ ಗುಂಪಿನ ಕಮಾಂಡರ್ ಓರ್ವ 'ಸಿಎನ್ಎನ್'ಗೆ ತಿಳಿಸಿದ್ದಾನೆ.

ಮಂಗಳವಾರ ರಾತ್ರಿ ಎಂದಿಗಿಂತ ಹೆಚ್ಚೇ ಅಂದರೆ ಸುಮಾರು 19ರಷ್ಟು ಸಿಡಿತಲೆಗಳನ್ನು ಹಾರಿಸಲಾಗಿತ್ತು ಮತ್ತು ಇದರಿಂದ ಸಾವಿನ ಸಂಖ್ಯೆಯೂ ಅಪಾರವಾಗಿತ್ತು ಎಂದು ಮತ್ತೊಂದು ಟೀವಿ ಚಾನೆಲ್ ವರದಿ ಮಾಡಿತ್ತು.

ಅದೇ ಹೊತ್ತಿಗೆ ಪಾಕಿಸ್ತಾನಿ ತಾಲಿಬಾನ್ ಮುಖ್ಯಸ್ಥ ಹಕೀಮುಲ್ಲಾ ಮೆಹ್ಸೂದ್ ಸತ್ತಿದ್ದಾನೆ ಎಂಬುದನ್ನು ಅಮೆರಿಕಾ ಅಧಿಕಾರಿಗಳು ಪುನರುಚ್ಛರಿಸಿದ್ದು, ಈ ಬಗ್ಗೆ ಖಚಿತತೆಯನ್ನು ವ್ಯಕ್ತಪಡಿಸಿದ್ದಾರೆ.

ಕನಿಷ್ಠ ಎಂಟು ಡ್ರೋನ್ ದಾಳಿಗಳು ಇಲ್ಲಿನ ಮನೆಗಳು, ಕಾರುಗಳು ಮತ್ತು ಬಂಕರುಗಳನ್ನು ಧ್ವಂಸ ಮಾಡಿದ್ದವು. ಇದರಿಂದಾಗಿ ಇಬ್ಬರು ಪಾಕಿಸ್ತಾನಿ ತಾಲಿಬಾನ್ ಕಮಾಂಡರುಗಳು ಮತ್ತು ಆರು ವಿದೇಶಿ ಉಗ್ರರು ಸೇರಿದಂತೆ 31ಕ್ಕೂ ಹೆಚ್ಚು ಭಯೋತ್ಪಾದಕರು ಸಾವನ್ನಪ್ಪಿದ್ದರು.

ಹಖಾನಿ ತನ್ನ ಪ್ರಾಬಲ್ಯವನ್ನು ಹೊಂದಿದ್ದ ದೈಗಾನ್, ಮುಹಮ್ಮದ್ ಖೇಲ್, ಪೈ ಖೇಲ್ ಮತ್ತು ತೂರ್ ನರಾಯ್ ಎಂಬ ನಾಲ್ಕು ಗ್ರಾಮಗಳಿಗೆ ಕ್ಷಿಪಣಿಗಳು ದಾಳಿ ನಡೆಸಿದ್ದವು.

ಸಿರಾಜುದ್ದೀನ್ ಹಖಾನಿ ಅಥವಾ ಸಿರಾಜ್ ಎಂಬಾತನು ತಾಲಿಬಾನ್ ಅಗ್ರ ನಾಯಕನಾಗಿದ್ದು, ಆತನ ತಂದೆ ಜಲಾಲುದ್ದೀನ್ ಹಖಾನಿ ಸ್ಥಾಪಿಸಿದ ಹಖಾನಿ ಸಂಘಟನೆಯ ಮುಖ್ಯಸ್ಥನೂ ಹೌದು. ಈ ಹಖಾನಿ ಸಂಘಟನೆಯು ಅಲ್‌ಖೈದಾ ಜತೆ ಸುದೀರ್ಘ ಸಮಯಗಳಿಂದ ಜತೆಯಾಗಿ ಹೋರಾಟ ನಡೆಸುತ್ತಿದೆ. ಈ ಗುಂಪು ಅಫಘಾನಿಸ್ತಾನ ಮತ್ತು ಪಾಕಿಸ್ತಾನಗಳಲ್ಲಿ ಸಕ್ರಿಯವಾಗಿರುವುದರಿಂದ ಅಮೆರಿಕಾಕ್ಕೆ ಇದರ ಒಳಹೊರಗಿನ ಕುರಿತು ತಿಳುವಳಿಕೆಯಿದೆ.
ಸಂಬಂಧಿತ ಮಾಹಿತಿ ಹುಡುಕಿ