ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಫ್ಘಾನ್:ಮಿಲಿಟರಿ ದಾಳಿಗೆ 32ತಾಲಿಬಾನ್‌ ಉಗ್ರರು ಬಲಿ (Afghanistan | Taliban | NATO | Kandahar | US)
Bookmark and Share Feedback Print
 
ಉಗ್ರರ ವಿರುದ್ಧ ಹೆಲ್ಮಾಂಡ್ ಪ್ರದೇಶದಲ್ಲಿ ಅಫ್ಘಾನ್ ಮತ್ತು ನ್ಯಾಟೋ ಪಡೆ ಜಂಟಿಯಾಗಿ ಗುರುವಾರ ನಡೆಸಿದ ಕಾರ್ಯಾಚರಣೆಯಲ್ಲಿ 32 ತಾಲಿಬಾನ್ ಉಗ್ರರು ಮತ್ತು 3ಸೈನಿಕರು ಸಾವನ್ನಪ್ಪಿರುವುದಾಗಿ ಪ್ರಾಂತೀಯ ಸರ್ಕಾರ ತಿಳಿಸಿದೆ.

ಪ್ರೋವಿನ್ಸಿಯಲ್ ನಗರದ ಪೂರ್ವ ಪಶ್ಚಿಮ ಪ್ರದೇಶದ ನಾಡ್ ಅಲಿ ಜಿಲ್ಲೆಯಲ್ಲಿ ಅಫ್ಘಾನ್ ಮತ್ತು ನ್ಯಾಟೋ ಮಿಲಿಟರಿ ಪಡೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿರುವುದಾಗಿ ಪ್ರೋವಿನ್ಸಿಯಲ್ ಸರ್ಕಾರದ ವಕ್ತಾರ ದೌಡ್ ಅಹ್ಮದಿ ಸುದ್ದಿಸಂಸ್ಥೆಯೊಂದಕ್ಕೆ ಹೇಳಿದ್ದಾರೆ. ಕಳೆದ ರಾತ್ರಿಯೇ ಕಾರ್ಯಾಚರಣೆ ಆರಂಭಿಸಿರುವುದಾಗಿ ವಿವರಿಸಿದ ಅವರು, ಈ ಕಾರ್ಯಾಚರಣೆಯಲ್ಲಿ 32ತಾಲಿಬಾನ್ ಉಗ್ರರು ಹತರಾಗಿರುವುದಾಗಿ ತಿಳಿಸಿದ್ದಾರೆ.

ನಾಡ್ ಅಲಿ ಜಿಲ್ಲೆಯ ದಕ್ಷಿಣ ಭಾಗದ ಮಾರ್ಜಾ ಪ್ರದೇಶದಲ್ಲಿ ಅಮೆರಿಕದ ಪಡೆಗಳು ತೀವ್ರ ಕಾರ್ಯಾಚರಣೆ ನಡೆಸುತ್ತಿರುವುದಾಗಿ ಹೇಳಿದರು. ಅಲ್ಲದೇ, ತಾಲಿಬಾನ್ ಉಗ್ರರನ್ನು ಮಟ್ಟ ಹಾಕುವವರೆಗೆ ಕಾರ್ಯಾಚರಣೆ ಮುಂದುವರಿಯುವುದಾಗಿ ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ