ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಹೈಟಿ: ಅಪಹರಣ ಯತ್ನ-10ಮಂದಿ ವಿರುದ್ಧ ಆರೋಪಪಟ್ಟಿ (Caribbean nation | kidnapping | American | Haiti)
Bookmark and Share Feedback Print
 
ಕೆರೆಬಿಯನ್ ರಾಷ್ಟ್ರವಾದ ಹೈಟಿ ಭಾರೀ ಭೂಕಂಪದಿಂದ ತತ್ತರಿಸಿದ ನಂತರ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ಸಂದರ್ಭ ಮಕ್ಕಳನ್ನು ಅಪಹರಿಸಲು ಯತ್ನಿಸಿದ ಆರೋಪದ ವಿರುದ್ಧ ಹತ್ತು ಮಂದಿ ಅಮೆರಿಕನ್‌ರ ಮೇಲೆ ದೂರು ದಾಖಲಿಸಿರುವುದಾಗಿ ನ್ಯೂಯಾರ್ಕ್ ಟೈಮ್ಸ್ ವರದಿ ತಿಳಿಸಿದೆ.

ಕಳೆದ ವಾರ ಸುಮಾರು 33ಮಕ್ಕಳನ್ನು ಬಸ್‌ ಮೂಲಕ ಅಪಹರಿಸಲು ಯತ್ನಿಸುತ್ತಿದ್ದ ಸಂದರ್ಭದಲ್ಲಿ ಅವರನ್ನು ರಕ್ಷಿಸಲಾಗಿತ್ತು. ಈ ಸಂದರ್ಭದಲ್ಲಿ ಅಮೆರಿಕದ ಐದು ಮಂದಿ ಪುರುಷರು ಮತ್ತು ಐದು ಮಂದಿ ಮಹಿಳೆಯರು ಈ ಕೃತ್ಯದಲ್ಲಿ ತೊಡಗಿದ್ದರು ಎಂದು ಹೈಟಿ ಆರೋಪಿಸಿತ್ತು.

ಹತ್ತು ಮಂದಿಯೂ ಇದಾಹೋ ಚರ್ಚ್ ಸಂಘಟನೆಯ ಕಾರ್ಯಕರ್ತರಾಗಿದ್ದರೆಂದು ದೂರಲಾಗಿದೆ.ಹೈಟಿ ಭೂಕಂಪದ ಅವಶೇಷಗಳಡಿಯಿಂದ ರಕ್ಷಿಸಿದ್ದ ಮಕ್ಕಳನ್ನು ನೆರೆಯ ದೇಶದ ಅನಾಥಾಶ್ರಮಕ್ಕೆ ಸೇರಿಸಲು ಕರೆದೊಯ್ಯುತ್ತಿದ್ದ ಸಂದರ್ಭ ಅವರೆಲ್ಲ ಸಿಕ್ಕಿಬಿದ್ದಿರುವುದಾಗಿ ಅಧಿಕಾರಿಗಳು ವಿವರಿಸಿದ್ದಾರೆ.

ಕೆಲವು ಮಕ್ಕಳಿಗೆ ಪೋಷಕರಿದ್ದಾರೆ ಎಂಬ ಅಂಶ ವಿಚಾರಣೆ ವೇಳೆ ತಿಳಿದುಬಂದಿದೆ. ಇದೀಗ ಹತ್ತು ಮಂದಿ ಅಮೆರಿಕನ್‌ರ ವಿರುದ್ದ ಆರೋಪ ಪಟ್ಟಿ ದಾಖಲಿಸಲಾಗಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ