ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕಿಸ್ತಾನ: ಎಫ್‌ಐಆರ್‌ನಲ್ಲಿ ಸರಬ್‌ಜಿತ್ ಹೆಸರೇ ಇಲ್ಲ! (FIR | Sarabajit Singh | Lahore | India | Pakistan)
Bookmark and Share Feedback Print
 
PTI
ಬಾಂಬ್ ಸ್ಫೋಟ ಪ್ರಕರಣದ ಭಾಗಿಯಾಗಿರುವ ಆರೋಪ ಹೊತ್ತು ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೆ ಒಳಗಾಗಿರುವ ಭಾರತದ ಸರಬ್‌ಜಿತ್ ಸಿಂಗ್ ಹೆಸರು ಎಫ್‌ಐಆರ್‌ನಲ್ಲಿ ದಾಖಲಾಗಿಯೇ ಇಲ್ಲ ಎಂದು ಆತನ ಪರ ವಕೀಲರು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್‌ನಲ್ಲಿ ಸರಬ್‌ಜಿತ್ ಬದಲು ಮನ್‌ಜಿತ್ ಸಿಂಗ್ ಹೆಸರು ನಮೂದಾಗಿರುವುದಾಗಿ ಸರಬ್ ಪರ ವಕೀಲರಾದ ಅವೈಸ್ ಶೇಕ್ ಪಿಟಿಐಗೆ ತಿಳಿಸಿದ್ದಾರೆ.

ಪಾಕಿಸ್ತಾನದಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಸರಬ್‌ಜಿತ್‌ನನ್ನು ಬಲಿಪಶುವನ್ನಾಗಿ ಮಾಡಲಾಗಿದೆ. ಆ ನಿಟ್ಟಿನಲ್ಲಿ ತನ್ನ ಕಕ್ಷಿದಾರರನನ್ನು ರಕ್ಷಿಸುವಲ್ಲಿ ಶ್ರಮವಹಿಸುವುದಾಗಿ ಅವರು ಈ ಸಂದರ್ಭದಲ್ಲಿ ಹೇಳಿದರು.

'ಈ ಬಗ್ಗೆ ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದ ಮಂಡಿಸುವುದಾಗಿ ಹೇಳಿರುವ ಶೇರ್, ತನ್ನ ಕಕ್ಷಿದಾರನ(ಸರಬ್‌ಜಿತ್) ಹೆಸರೇ ಎಫ್‌ಐಆರ್‌ನಲ್ಲಿ ದಾಖಲಾಗಿಲ್ಲ ಎಂಬುದು ಪ್ರಮುಖ ಅಂಶವಾಗಿದೆ. ಇದು ಭಾರತ ಮತ್ತು ಪಾಕಿಸ್ತಾನದ ನಡುವಿನ ತಪ್ಪು ತಿಳಿವಳಿಕೆಯಿಂದಾದ ಪ್ರಮಾದ' ಎಂದು ಅಭಿಪ್ರಾಯವ್ಯಕ್ತಪಡಿಸಿದರು.

ಆ ಕಾರಣದಿಂದಾಗಿ ಎಫ್‌ಐಆರ್‌ನಲ್ಲಿ ಸರಬ್‌ಜಿತ್ ಸಿಂಗ್ ಹೆಸರೂ ಇಲ್ಲ, ಏಕಾಏಕಿ ಆರೋಪ ಹೊರಿಸಿ ಗಲ್ಲಿಗೇರಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ