ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಯುವಕನ ಜತೆ ಸಲ್ಲಾಪ:ಟರ್ಕಿ ಬಾಲಕಿಯನ್ನು ಜೀವಂತ ಹೂತ ಭೂಪರು! (Turkey | Honour killing | Kahta | Guardian,)
Bookmark and Share Feedback Print
 
16ರ ಹರೆಯದ ಟರ್ಕಿ ಬಾಲಕಿಯೊಬ್ಬಳು ಯುವಕನೊಂದಿಗೆ ಮಾತನಾಡಿದ್ದೇ ದೊಡ್ಡ ಅಪರಾಧ ಎಂದು ಪರಿಗಣಿಸಿದ ಸಂಬಂಧಿಗಳು ಆಕೆಯನ್ನು ಜೀವಂತವಾಗಿಯೇ ಹೂತು ಹಾಕಿದ ಅಮಾನವೀಯ ಘಟನೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಅಲ್ಲದೇ, ಆಕೆಗೆ ಕೊಟ್ಟ ಶಿಕ್ಷೆ 'ಗೌರವಾನ್ವಿತ ಮರಣ' ಎಂಬುದು ಟರ್ಕಿಗಳ ಉಪಮೆಯಾಗಿದೆ!

ಯುವಕನೊಬ್ಬನ ಜೊತೆ ಮಾತನಾಡಿದ್ದಕ್ಕೆ ತುರ್ಕಿಗಳು ಬಾಲಕಿಗೆ ನೀಡಿದ ಶಿಕ್ಷೆ ಜೀವಂತವಾಗಿ ಹೂತು ಹಾಕಿದ್ದು. ಕಾತಾ ಪ್ರದೇಶದಲ್ಲಿನ ಆಕೆಯ ಮನೆಯಿಂದ ಹೊರವಲಯದಲ್ಲಿ ಸುಮಾರು ಎರಡು ಮೀಟರ್ ಅಡಿಯಷ್ಟು ಗುಂಡಿಯನ್ನು ತೋಡಿ ಕೈಯನ್ನು ಕಟ್ಟಿ ಜೀವಂತವಾಗಿ ಹೂತು ಹಾಕಿರುವುದನ್ನು ಪತ್ತೆಹಚ್ಚಲಾಗಿತ್ತು. ಆಕೆಯನ್ನು ಹೆಸರನ್ನು ಕೇವಲ ಎಂಎಂ ಎಂದಷ್ಟೇ ಗುರುತಿಸಲು ಸಾಧ್ಯವಾಗಿದೆ ಎಂದು ದಿ ಗಾರ್ಡಿಯನ್ ಪತ್ರಿಕಾ ವರದಿ ತಿಳಿಸಿದೆ.

ಬಾಲಕಿಯೊಬ್ಬಳನ್ನು ಕುಟುಂಬಿಕರು ಅಮಾನವೀಯವಾಗಿ ಹೂತು ಕೊಲೆಗೈದಿರುವುದಾಗಿ ಪೊಲೀಸರಿಗೆ ಮಾಹಿತಿದಾರನೊಬ್ಬ ವಿಷಯ ತಿಳಿಸಿದ ನಂತರ ಈ ಘಟನೆ ಬೆಳಕಿಗೆ ಬಂದಿರುವುದಾಗಿ ವರದಿ ಹೇಳಿದೆ.

ಬಾಲಕಿಯನ್ನು ಜೀವಂತವಾಗಿ ಹೂತ ಪರಿಣಾಮ ಆಕೆಯ ಶ್ವಾಸಕೋಶ ಮತ್ತು ಹೊಟ್ಟೆಯೊಳಗೆ ಅಪಾರ ಪ್ರಮಾಣದಲ್ಲಿ ಮಣ್ಣು ಸೇರಿಕೊಂಡು ಪ್ರಾಣ ಹೋಗಿರುವುದಾಗಿ ಪೋಸ್ಟ್ ಮಾರ್ಟಮ್ ವರದಿ ತಿಳಿಸಿದೆ. ಆದರೆ ಶವದ ಮೇಲೆ ಬೇರಾವುದೇ ಗಾಯದ ಗುರುತಿಲ್ಲ ಎಂದು ಹೇಳಿದೆ.

ಶವ ಪತ್ತೆಯಾಗುವ ಮುನ್ನ ಬಾಲಕಿ ನಾಪತ್ತೆಯಾಗಿರುವುದಾಗಿ ವರದಿಯಾಗಿತ್ತು. ಆಕೆಯ ತಂದೆ ಮತ್ತು ಅಜ್ಜನನ್ನು ಬಂಧಿಸಲಾಗಿದ್ದು, ವಿಚಾರಣೆಗಾಗಿ ಕಾಯಲಾಗುತ್ತಿದೆ. ಏತನ್ಮಧ್ಯೆ ಆಕೆಯ ತಾಯಿಯನ್ನೂ ಕೂಡ ಬಂಧಿಸಿದ್ದು, ನಂತರ ಬಿಡುಗಡೆ ಮಾಡಲಾಗಿತ್ತು.

ತನ್ನ ಒಂಬತ್ತು ಮಕ್ಕಳಲ್ಲಿ ಆಕೆಯ ಇತರರ ಜೊತೆ ಹೊಂದಾಣಿಕೆಯಿಂದ ಇರುತ್ತಿರಲಿಲ್ಲವಾಗಿತ್ತು. ಆಕೆ ಯುವಕರ ಜೊತೆಯಲ್ಲಿಯೇ ಹೆಚ್ಚು ಬೆರೆಯುತ್ತಿದ್ದಳು ಎಂದು ಆಕೆಯ ತಂದೆ ಸಂಬಂಧಿಗಳಲ್ಲಿ ದೂರಿಕೊಂಡಿದ್ದ ಎಂದು ವರದಿ ವಿವರಿಸಿದೆ. ಅಲ್ಲದೇ, ಯುವಕರೊಂದಿಗೆ ಮಾತನಾಡುತ್ತಿರುವುದನ್ನು ಆಕ್ಷೇಪಿಸಿ ಮೊಮ್ಮಗಳಿಗೆ ಹೊಡೆಯುತ್ತಿರುವುದಾಗಿ ಅಜ್ಜ ತಿಳಿಸಿದ್ದಾನೆ. ಆ ನಿಟ್ಟಿನಲ್ಲಿ ಸಣ್ಣ ತಪ್ಪುಗಳಿಗಾಗಿಯೇ ಗೌರವಾನ್ವಿತ ಹತ್ಯೆಯಂತಹ ಸೂಕ್ಷ್ಮ ವಿಚಾರದ ಕುರಿತು ಟರ್ಕಿಯಲ್ಲಿ ಮತ್ತೆ ವಾದ-ವಿವಾದಗಳು ತಲೆ ಎತ್ತಿವೆ.
ಸಂಬಂಧಿತ ಮಾಹಿತಿ ಹುಡುಕಿ