ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಫೆಬ್ರುವರಿ ಅಂತ್ಯದಲ್ಲಿ ಲಾಮಾ ಶ್ವೇತಭವನಕ್ಕೆ: ಅಮೆರಿಕ (China | Barack Obama | Dalai Lama | US visit)
Bookmark and Share Feedback Print
 
ಚೀನಾದ ಬೆದರಿಕೆಗೆ ಸೊಪ್ಪು ಹಾಕದ ಅಮೆರಿಕ, ಫೆಬ್ರುವರಿ ತಿಂಗಳ ಅಂತ್ಯದಲ್ಲಿ ಟಿಬೆಟ್‌ನ ಬೌದ್ಧ ಗುರು ದಲೈಲಾಮಾ ಅವರು ಶ್ವೇತಭವನಕ್ಕೆ ಭೇಟಿ ನೀಡಲಿದ್ದಾರೆಂದು ಮತ್ತೊಮ್ಮೆ ಪುನರುಚ್ಚರಿಸಿದೆ.

ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಟಿಬೆಟ್ ಧಾರ್ಮಿಕ ಮುಖಂಡ ದಲೈ ಲಾಮಾ ಅವರನ್ನು ಸ್ವಾಗತಿಸಲು ಸಜ್ಜಾಗಿರುವ ಯೋಜನೆ ಹಮ್ಮಿಕೊಳ್ಳುತ್ತಿರುವ ನಡುವೆಯೇ ಚೀನಾ ಮತ್ತು ಅಮೆರಿಕ ನಡುವೆ ಅಸಮಾಧಾನ ಭುಗಿಲೇಳತೊಡಗಿದೆ.

ಶ್ವೇತಭವನಕ್ಕೆ ಯಾವ ದಿನಾಂಕದಂದು ಲಾಮಾ ಅವರು ಭೇಟಿ ನೀಡಲಿದ್ದಾರೆಂಬುದನ್ನು ಶ್ವೇತಭವನದ ವಕ್ತಾರ ರೋಬೆರ್ಟ್ ಗಿಬ್ಸ್ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.

ಲಾಮಾ ಅವರು ತಿಂಗಳಾಂತ್ಯದಲ್ಲಿ ಅಮೆರಿಕ್ಕೆ ಆಗಮಿಸಲಿದ್ದಾರೆ ಎಂದರು. ಏತನ್ಮಧ್ಯೆ ಬರಾಕ್ ಒಬಾಮ ಅವರು ಯಾವುದೇ ಕಾರಣಕ್ಕೂ ಲಾಮಾ ಅವರನ್ನು ಭೇಟಿ ಮಾಡಬಾರದೆಂದು ಎಚ್ಚರಿಸಿತ್ತು. ಒಂದು ವೇಳೆ ಮಾತುಕತೆ ನಡೆಸಿದ್ದೇ ಆದಲ್ಲಿ ಎರಡೂ ದೇಶಗಳ ನಡುವಿನ ಸಂಬಂಧಕ್ಕೆ ಧಕ್ಕೆ ಉಂಟಾಗಬಹುದೆಂದು ಹೇಳಿತ್ತು.
ಸಂಬಂಧಿತ ಮಾಹಿತಿ ಹುಡುಕಿ