ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಪ್ ಸ್ಟಾರ್ ಮೈಕೆಲ್ ಜಾಕ್ಸನ್ ವೈದ್ಯರ ಶರಣಾಗತಿ ರದ್ದು (Michael Jackson | TMZ | Conrad Murray | Pop star)
Bookmark and Share Feedback Print
 
ಮೈಕೆಲ್ ಜಾಕ್ಸನ್ ಅವರ ಖಾಸಗಿ ವೈದ್ಯರು ಪೊಲೀಸರಿಗೆ ಶರಣಾಗಲಿದ್ದಾರೆ ಎಂಬ ವರದಿಗಳ ನಡುವೆಯೇ ಆರೋಪ ಒಪ್ಪಿಕೊಳ್ಳುವ ಅವಕಾಶವನ್ನು ನಿರಾಕರಿಸಲಾಗಿದೆ ಎಂದು ಸೆಲೆಬ್ರಿಟಿ ವೆಬ್‌ಸೈಟ್‌ವೊಂದು ವರದಿ ಮಾಡಿದೆ.

ಪಾಪ್ ಸ್ಟಾರ್ ಸಾವಿನ ಸಂಬಂಧ ಇಂದು ವೈದ್ಯ ಕಾನ್ರಾಡ್ ಮುರ್ರೆಯವರು ಶರಣಾಗಲಿದ್ದಾರೆ ಎಂದು ದಿನ ನಿಗದಿಪಡಿಸಲಾಗಿತ್ತು. ಆದರೆ ಲಾಸ್ ಎಂಜಲೀಸ್ ಕೌಂಟಿ ಜಿಲ್ಲಾ ಅಟಾರ್ನಿ ಮತ್ತು ಲಾಸ್ ಎಂಜಲೀಸ್ ಪೊಲೀಸ್ ಇಲಾಖೆಯ ನಡುವೆ ಶರಣಾಗತಿ ವಿಚಾರದಲ್ಲಿ ಮೂಡಿದ ಭಿನ್ನಾಭಿಪ್ರಾಯದಿಂದಾಗಿ ವೈದ್ಯರಿಗೆ ಅವಕಾಶ ನಿರಾಕರಿಸಲಾಗಿದೆ ಎಂದು 'ಟಿಎಂಜೆಡ್' ವೆಬ್‌ಸೈಟ್ ತನ್ನ ವರದಿಯಲ್ಲಿ ಹೇಳಿದೆ.
PR


ಪೊಲೀಸರ ಹಕ್ಕು ಚಲಾಯಿಸುವ ಅಧಿಕಾರವನ್ನು ನಿರಾಕರಿಸಿ ಮುರ್ರೆಯವರ ವಕೀಲರೊಂದಿಗೆ ಸೇರಿಕೊಂಡು ಅವಧಿಯೊಳಗೆ ಶರಣಾಗತಿ ಮಾಡಿಸುವ ಕೆಲಸದಲ್ಲಿ ಲಾಸ್ ಎಂಜಲೀಸ್ ಕೌಂಟಿ ಜಿಲ್ಲಾ ಅಟಾರ್ನಿ ನಿರತವಾಗಿದೆ ಎಂದು ಲಾಸ್ ಎಂಜಲೀಸ್ ಪೊಲೀಸ್ ಇಲಾಖೆ ಆಕ್ರೋಶಗೊಂಡಿರುವುದೇ ವೈದ್ಯರ ಶರಣಾಗತಿ ರದ್ದಿಗೆ ಕಾರಣ ಎಂದು ಹೇಳಲಾಗಿದೆ.

ವೈದ್ಯ ಮುರ್ರೆಯವರು ಅನೈಚ್ಛಿಕ ನರಹತ್ಯೆ ಆರೋಪಗಳನ್ನು ಎದುರಿಸಬೇಕಾದ ಸಾಧ್ಯತೆಗಳಿದ್ದು, ಅವರು ಲಾಸ್ ಎಂಜಲೀಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪಕ್ಕದಲ್ಲಿನ ನ್ಯಾಯಾಲಯಕ್ಕೆ ಶರಣಾದ ನಂತರ ಪೊಲೀಸರ ಬಂಧನಕ್ಕೊಳಗಾಬೇಕು ಎಂದು ಯೋಜನೆ ರೂಪಿಸಲಾಗಿತ್ತು.

ಆದರೆ ಮುರ್ರೆಯವರನ್ನು ಬಂಧಿಸಿ ನ್ಯಾಯಾಲಯಕ್ಕೆ ತರುವ ಯೋಚನೆಯಲ್ಲಿದ್ದ ಪೊಲೀಸ್ ಇಲಾಖೆಯು ಈ ತಂತ್ರವನ್ನು ತೀವ್ರವಾಗಿ ವಿರೋಧಿಸಿತ್ತು. ಇದೇ ಹಿನ್ನೆಲೆಯಲ್ಲಿ ಅವರ ಶರಣಾಗತಿ ಅವಧಿಯನ್ನು ಮೊಟಕುಗೊಳಿಸಲಾಗಿದೆ ಎಂದು ವೆಬ್‌ಸೈಟ್ ತನ್ನ ವರದಿಯಲ್ಲಿ ವಿವರಣೆ ನೀಡಿದೆ.

ಇದಕ್ಕೂ ಮೊದಲು ವರದಿ ಮಾಡಿದ್ದ ವೆಬ್‌ಸೈಟ್, ಮುರ್ರೆಯವರು ಇಂದು ಸಂಬಂಧಪಟ್ಟವರಿಗೆ ಶರಣಾಗಲಿದ್ದಾರೆ ಎಂದಿತ್ತು. ಮುರ್ರೆಯವರ ವಕೀಲ ಎಡ್ ಚೆರ್ನಾಫ್ ಮಾತನಾಡುತ್ತಾ, ನಾವು ಜಿಲ್ಲಾ ಅಟಾರ್ನಿ ಕಚೇರಿಯ ಜತೆ ಸಮಾಲೋಚನೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದನ್ನು ಅಂತರ್ಜಾಲ ಸುದ್ದಿ ಸೈಟ್ ಪ್ರಕಟಿಸಿತ್ತು.

ಪಾಪ್ ಸ್ಟಾರ್ ಜಾಕ್ಸನ್ ಸಾವಿಗೆ ಅತಿಯಾದ ಔಷಧಿ ಸೇವೆನೆಯೇ ಕಾರಣ ಎಂಬ ವೈದ್ಯಕೀಯ ವರದಿಗಳ ಹಿನ್ನೆಲೆಯಲ್ಲಿ ವೈದ್ಯರ ಮೇಲೆ ಆರೋಪ ಹೊರಿಸಲಾಗಿದ್ದು, ಶೀಘ್ರವೇ ಅವರನ್ನು ಪೊಲೀಸರು ಬಂಧಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ