ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಫ್ಘಾನ್ ನಾಯಿ ಕಾಳಗದಲ್ಲಿ ಬಾಂಬ್ ಸ್ಫೋಟ, ಮೂವರ ಸಾವು (Afghan dog fight | Kandahar | dog fight | Afghanistan)
Bookmark and Share Feedback Print
 
ಅಫಘಾನಿಸ್ತಾನದಲ್ಲಿ ಜನಪ್ರಿಯವಾಗಿರುವ ನಾಯಿ ಕಾಳಗವೊಂದರಲ್ಲಿ ದುಷ್ಕರ್ಮಿಗಳು ರಿಮೋಟ್ ಕಂಟ್ರೋಲ್ ಮೂಲಕ ಬಾಂಬ್ ಸ್ಫೋಟಿಸಿದ ಪರಿಣಾಮ ಮೂವರು ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ತಾಲಿಬಾನ್ ಆಡಳಿತದಲ್ಲಿದ್ದಾಗ ಅಫಘಾನಿಸ್ತಾನದಲ್ಲಿ ನಾಯಿ ಕಾಳಗವನ್ನು ನಿಷೇಧಿಸಲಾಗಿತ್ತು. ಆದರೆ ತಾಲಿಬಾನ್ ಪತನದ ಬಳಿಕ ನಾಯಿ ಕಾಳಗವನ್ನು ಕಾನೂನು ಬದ್ಧವಾಗಿ ನಡೆಸಲಾಗುತ್ತಿದೆ. ಇದನ್ನು ತಾಲಿಬಾನ್ ತೀವ್ರವಾಗಿ ವಿರೋಧಿಸುತ್ತಿದ್ದು, ಈ ಸ್ಪರ್ಧೆ ನಡೆಯುವಲ್ಲಿ ಆಗಾಗ ದಾಳಿಗಳನ್ನು ನಡೆಸುತ್ತಿರುತ್ತದೆ.

ಹೆಲ್ಮಂಡ್ ಪ್ರಾಂತ್ಯದ ರಾಜಧಾನಿ ಲಷ್ಕರ್ ಗಾಹ್ ಎಂಬಲ್ಲಿ ನಾಯಿ ಕಾಳಗ ನಡೆಯುತ್ತಿದ್ದ ಅಂಗಣದ ಪಕ್ಕದಲ್ಲೇ ನಿಲ್ಲಿಸಿದ್ದ ಬೈಕಿನಲ್ಲಿ ಬಾಂಬ್ ಇಡಲಾಗಿತ್ತು. ಕಾಳಗವನ್ನು ವೀಕ್ಷಿಸಲು ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದ ಸಂದರ್ಭದಲ್ಲಿ ರಿಮೋಟ್ ಕಂಟ್ರೋಲ್ ಮೂಲಕ ಬಾಂಬ್ ಸ್ಫೋಟ ನಡೆಸಲಾಗಿದೆ ಎಂದು ಈ ಪ್ರಾಂತ್ಯದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಘಟನೆಯಲ್ಲಿ ಕನಿಷ್ಠ ಮೂವರು ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ 18ಕ್ಕೂ ಹೆಚ್ಚು ಮಕ್ಕಳು ಸೇರಿದ್ದಾರೆ ಎಂದು ಪೊಲೀಸ್ ಅಧಿಕಾರಿ ಕಮಲುದ್ದೀನ್ ಖಾನ್ ವಿವರಣೆ ನೀಡಿದ್ದಾರೆ.

ಈ ಪ್ರದೇಶದಲ್ಲಿ ತಾಲಿಬಾನ್ ಪ್ರಾಬಲ್ಯವಿದ್ದು, ಅಮೆರಿಕಾ ಮತ್ತು ಅಫ್ಘಾನ್ ಪಡೆಗಳ ವಿರುದ್ಧ ಹೋರಾಟಕ್ಕೆ ಸಿದ್ಧತೆ ನಡೆಸುತ್ತಿವೆ. ಆದರೆ ಯಾವಾಗ ಇದನ್ನು ಆರಂಭಿಸಲಿದೆ ಎಂಬ ದಿನಾಂಕಗಳನ್ನು ಭಯೋತ್ಪಾದನಾ ಸಂಘಟನೆ ಇದುವರೆಗೆ ಪ್ರಕಟಿಸಿಲ್ಲ.

ಕಳೆದೆರಡು ವರ್ಷಗಳ ಹಿಂದೆ ಕಂದಹಾರ್‌ನಲ್ಲಿ ನಾಯಿ ಕಾಳಗ ನಡೆಯುತ್ತಿದ್ದ ಸಂದರ್ಭದಲ್ಲಿ ಭಾರೀ ಬಾಂಬ್ ಸ್ಫೋಟಗೊಂಡಿದ್ದ ಪರಿಣಾಮ 80ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು.
ಸಂಬಂಧಿತ ಮಾಹಿತಿ ಹುಡುಕಿ