ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಇಸ್ಲಾಂ ಧರ್ಮಕ್ಕೆ ಕಳಂಕ: ಫೇಸ್‌ಬುಕ್ ವಿರುದ್ಧ ಫತ್ವಾ! (Egypt | Egyptian cleric | Fatwa | Muslims | Cairo)
Bookmark and Share Feedback Print
 
ಫೇಸ್‌ಬುಕ್ ವೆಬ್‌ಸೈಟ್ ತಾಣ ಬಳಸುವುದು ಇಸ್ಲಾಂ ಧರ್ಮಕ್ಕೆ ವಿರೋಧವಾದದ್ದು ಎಂದು ಈಜಿಪ್ಟ್‌ನ ಮೌಲ್ವಿಯೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಇಂತಹ ವೆಬ್‌ಸೈಟ್ ಬಳಸುವವರ ವಿರುದ್ಧ ಶುಕ್ರವಾರ ಫತ್ವಾ ಹೊರಡಿಸಿದ್ದಾರೆ. ಅಲ್ಲದೇ ಇದನ್ನು ಉಪಯೋಗಿಸುವ ಮುಸ್ಲಿಮರನ್ನು ಪಾಪಿಗಳು ಎಂದು ಅರ್ಥೈಸಲಾಗುವುದು ಎಂದು ತಿಳಿಸಿದ್ದಾರೆ.

ಫೇಸ್‌ಬುಕ್ ವೆಬ್‌ಸೈಟ್ ತಾಣ ಬಳಸುವುದರಿಂದಾಗಿ ವೈವಾಹಿಕ ಸಂಬಂಧ ಮುರಿದು ಬೀಳುತ್ತಿರುವುದು ಅಂಕಿ-ಅಂಶಗಳಿಂದ ಸಾಬೀತಾಗಿವೆ. ಅಲ್ಲದೇ ಅನೈತಿಕ ಸಂಬಂಧಗಳು ಇದರಿಂದಾಗಿ ಹೆಚ್ಚುತ್ತಾಗುತ್ತದೆ ಎಂದು ಸುನ್ನಿ ವಿಚಾರವಾದಿ ಸಮಿತಿ ಮುಖ್ಯಸ್ಥ ಶೇಖ್ ಅಬ್ದೆಲ್ ಹಮೀದ್ ಅಲ್ ಅತ್ರಾಸ್ ವಿವರಿಸಿದ್ದಾರೆ.

ಫೇಸ್ ಬುಕ್ ವೆಬ್‌ಸೈಟ್ ತಾಣ ಕೌಟುಂಬಿಕ ನೆಮ್ಮದಿಯನ್ನೇ ಹಾಳುಗೆಡುವುತ್ತಿದೆ. ಅದೇ ರೀತಿ ಅಕ್ರಮ ಸಂಬಂಧಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಮೂಲಕ ಇಸ್ಲಾಂನ ಷರಿಯತ್ ಕಾನೂನಿಗೆ ಅಪಚಾರ ಎಸಗುತ್ತಿರುವುದಾಗಿ ಅತ್ರಾಸ್ ಗಂಭೀರವಾಗಿ ಆಪಾದಿಸಿದ್ದಾರೆಂದು ಪಾನ್ ಅರಬ್ ದೈನಿಕ ಅಲ್ ಶಾರ್ಕ್ ಅಲ್ ಅವಾಸ್ತ್ ವರದಿ ಉಲ್ಲೇಖಿಸಿದೆ.

ಶೇಖ್ ಅಬ್ದೆಲ್ ಹಮೀದ್ ಅಲ್ ಅತ್ರಾಸ್ ಈ ಹಿಂದೆ ಕೈರೋ ಅಲ್ ಅಜಾಹರ್ ಯೂನಿರ್ವಸಿಟಿ ಫತ್ವಾ ಸಮಿತಿಯ ವರಿಷ್ಠರಾಗಿದ್ದರು. ಮುಸ್ಲಿಂ ಯುವಕರು ವೆಬ್‌ಸೈಟ್ ತಾಣದಲ್ಲಿ ಒಬ್ಬರಿಂದೊಬ್ಬರಿಗೆ ಆನ್‌ಲೈನ್‌ನಲ್ಲಿ ಚಾಟ್ ಮಾಡುವ ಮೂಲಕ ಸಮಯ ಹಾಳು ಮಾಡಿಕೊಳ್ಳುತ್ತಿರುವುದಲ್ಲದೇ, ಷರಿಯಾ ಕಾನೂನಿಗೆ ಭಂಗ ತರುತ್ತಿರುವುದಾಗಿ ದೂರಿದರು.

ಈಜಿಪ್ಟ್‌ನಲ್ಲಿ ನೂತನ ಸಮೀಕ್ಷೆಯ ಪ್ರಕಾರ ಐದು ವಿವಾಹ ವಿಚ್ಛೇದನಗಳಲ್ಲಿ ಒಂದು ಪ್ರಕರಣವಾದರೂ ಫೇಸ್‌ಬುಕ್ ಅಥವಾ ಇನ್ನಿತರ ಸಾಮಾಜಿಕ ನೆಟ್‌ವರ್ಕ್ ತಾಣದ ಪ್ರಭಾವದಿಂದ ಎಂದು ಆಪಾದಿಸಿದರು. ಸೆಟಲೈಟ್ ಟಿವಿ, ವೆಬ್‌ಸೈಟ್ ತಾಣಗಳು ಎರಡು ಅಲಗಿನ ಕತ್ತಿಯ ಅಲಗು ಇದ್ದಂತೆ ಎಂದು ಅಲ್ ಅತ್ರಾಸ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ