ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ರಾಜಕೀಯ ಬಂಡುಕೋರರಿಗೆ ಕ್ಯೂಬಾ ಕಿರುಕುಳ: ಮಾನವ ಹಕ್ಕು (Camaguey | Cuba | Human rights | Havana,)
Bookmark and Share Feedback Print
 
ಕ್ಯೂಬಾದ ಪೂರ್ವ ಪ್ರದೇಶದ ಕಾಮಾಗ್ವೆಯಲ್ಲಿ ಕೆಲವು ರಾಜಕೀಯ ಬಂಡುಕೋರರನ್ನು ಕ್ಯೂಬಾ ಪೊಲೀಸರು ಬಂಧಿಸಿ ಕಿರುಕುಳ ನೀಡುತ್ತಿರುವುದಾಗಿ ಕ್ಯೂಬಾ ಮಾನವ ಹಕ್ಕು ಸಂಘಟನೆ ಶುಕ್ರವಾರ ಆರೋಪಿಸಿದೆ.

ಕ್ಯೂಬಾದ ರಾಜಧಾನಿ ಹವಾನಾದಿಂದ 530ಕಿಲೋ ಮೀಟರ್ ದೂರದಲ್ಲಿರುವ ಕಾಮಾಗ್ವೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸುಮಾರು 23ಮಂದಿ ರಾಜಕೀಯ ಬಂಡುಕೋರರನ್ನು ಅಮಾನವೀಯವಾಗಿ ಥಳಿಸಿ, ಬಂಧಿಸಿರುವುದಾಗಿ ಮಾನವ ಹಕ್ಕು ಸಂಘಟನೆ ಪ್ರಕಟಣೆಯಲ್ಲಿ ದೂರಿದೆ.

ಓರ್ಲ್ಯಾಂಡೋ ಜಾಪಾತಾದ ಜೈಲಿನಲ್ಲಿರುವ ರಾಜಕೀಯ ಬಂಡುಕೋರರಿಗೆ ಕ್ರೂರ ಶಿಕ್ಷೆಯನ್ನು ನೀಡುತ್ತಿರುವುದನ್ನು ಖಂಡಿಸಿ ಇವರೆಲ್ಲ ಪ್ರತಿಭಟನೆ ನಡೆಸುತ್ತಿದ ಸಂದರ್ಭದಲ್ಲಿ ಬಂಧಿಸಿದ್ದಾರೆ. ಜೈಲಿನಲ್ಲಿ ಬಂಧಿಗಳಾಗಿರುವವರೆಗೆ ಕ್ಯೂಬಾ ಪೊಲೀಸರು ಕ್ರೂರ ರೀತಿಯಲ್ಲಿ ಶಿಕ್ಷೆ ವಿಧಿಸುತ್ತಿರುವುದ ಸರಿಯಲ್ಲ ಎಂದು ಮಾನವ ಹಕ್ಕು ಸಂಘಟನೆ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ