ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಶೀಘ್ರದಲ್ಲೇ ಇಸ್ರೇಲ್ ಪ್ರಧಾನಿಗೆ ದುಬೈಯಿಂದ ಬಂಧನ ವಾರೆಂಟ್ (Dubai | Israeli PM | Benjamin Netanyahu | Mossad)
Bookmark and Share Feedback Print
 
ಕಳೆದ ತಿಂಗಳು ನಡೆದ ಹಮಾಸ್ ಹಿರಿಯ ಅಧಿಕಾರಿಯೊಬ್ಬರ ಹತ್ಯೆಯ ಹಿಂದೆ 'ಮೊಸಾದ್' ಇರುವುದು ತನಿಖೆಯ ಸಂದರ್ಭದಲ್ಲಿ ಖಚಿತವಾದಲ್ಲಿ ಇಸ್ರೇಲ್ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹೂ ಅವರ ವಿರುದ್ಧ ಬಂಧನ ವಾರೆಂಟ್ ಜಾರಿಗೊಳಿಸಲಾಗುತ್ತದೆ ಎಂದು ದುಬೈ ತಿಳಿಸಿದೆ.

ಹಮಾಸ್ ಮಿಲಿಟರಿ ವಿಭಾಗದ ಹಿರಿಯ ಅಧಿಕಾರಿ ಮಹಮೌದ್ ಅಲ್ ಮಬೌ ಎಂಬವರನ್ನು ಹತ್ಯೆಗೈದಿರುವುದಕ್ಕೆ ಇಸ್ರೇಲ್‌ಗೆ ಸಂಬಂಧ ಕಲ್ಪಿಸಿರುವ ದುಬೈ, ತನಿಖೆಗಳು ಇದನ್ನು ಖಚಿತಪಡಿಸಿದಲ್ಲಿ ಇಸ್ರೇಲ್ ನಾಯಕನನ್ನು ಸಮಯ ಸಿಕ್ಕಾಗ ವಶಕ್ಕೆ ತೆಗೆದುಕೊಳ್ಳುವುದಾಗಿ ದುಬೈ ತಿಳಿಸಿದೆ ಎಂದು 'ದಿ ಟೆಲಿಗ್ರಾಫ್' ವರದಿ ಮಾಡಿದೆ.

ದುಬೈ ಪೊಲೀಸ್ ಮುಖ್ಯಸ್ಥ ದಾಹಿ ಕಲ್ಪಾನ್ ತಮೀಮ್ ಪ್ರಕಾರ ಹಮಾಸ್ ಅಧಿಕಾರಿಯನ್ನು ಕೊಲ್ಲಲು ಬಯಸಿದ ವಿಧಾನಗಳು ಇಸ್ರೇಲ್ ತನಿಖಾ ಸಂಸ್ಥೆ 'ಮೊಸಾದ್'ಗೆ ಸಂಬಂಧಪಟ್ಟದ್ದು.

ಮೊಸಾದ್ ಇದರಲ್ಲಿ ಭಾಗಿಯಾಗಿರುವುದು ಸ್ಪಷ್ಟವಾದರೆ ಇಸ್ರೇಲ್ ಪ್ರಧಾನಿಯೇ ಇದರ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಹಮಾಸ್ ನಾಯಕರನ್ನು ದುಬೈಯಲ್ಲಿ ಕೊಂದು ಹಾಕುವ ನಿರ್ಧಾರಕ್ಕೆ ಸಹಿ ಹಾಕಿದವರಲ್ಲಿ ಒಬ್ಬರಾಗಿರುವ ಇಸ್ರೇಲ್ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹೂ ಅವರು ನ್ಯಾಯಾಲಯಕ್ಕೆ ಬೇಕಾಗಿರುವ ಮೊದಲ ವ್ಯಕ್ತಿಯಾಗುತ್ತಾರೆ ಎಂದು ಜನರಲ್ ತಮೀಮ್ ದುಬೈಯ ಇಂಗ್ಲೀಷ್ ದಿನಪತ್ರಿಕೆ 'ದಿ ನ್ಯಾಷನಲ್'ಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಮೆಬೌ ಅವರನ್ನು ಜನವರಿ 20ರಂದು ದುಬೈ ಹೊಟೇಲಿನ ಅವರ ಕೋಣೆಯಲ್ಲಿ ಕೊಲ್ಲಲಾಗಿತ್ತು. ವಿಧಿವಿಜ್ಞಾನ ಪ್ರಯೋಗಾಲಯದ ಆರಂಭಿಕ ವರದಿಗಳ ಪ್ರಕಾರ ಅವರು ಸಾವನ್ನಪ್ಪುವ ಮೊದಲು ವಿದ್ಯುತ್ ಶಾಕ್‌ಗೆ ಒಳಗಾಗಿದ್ದರು.
ಸಂಬಂಧಿತ ಮಾಹಿತಿ ಹುಡುಕಿ