ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಶ್ರೀಲಂಕಾ ನಮ್ಮ ಅತ್ಯುತ್ತಮ ಮಿತ್ರ ರಾಷ್ಟ್ರ: ಚೀನಾ ಬಣ್ಣನೆ (China | Sri Lanka | Hu Jintao | Mahinda Rajapaksa)
Bookmark and Share Feedback Print
 
ಕೊಲೊಂಬೊ ಮತ್ತು ಬೀಜಿಂಗ್ ಅತ್ಯುತ್ತಮ ಸ್ನೇಹ ಹೊಂದಿವೆ ಎಂದಿರುವ ಚೀನಾದ ಅಧ್ಯಕ್ಷ ಹೂ ಜಿಂಟಾವೋ, ಮುಂಬರುವ ವರ್ಷಗಳಲ್ಲಿ ಎರಡು ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳು ಗಣನೀಯ ಎತ್ತರಕ್ಕೆ ಏರಲಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಶ್ರೀಲಂಕಾದ 62ನೇ ಸ್ವಾತಂತ್ರ್ಯೋತ್ಸವ ಸಂಭ್ರಮದ ಸಂದರ್ಭದಲ್ಲಿ ಸಂದೇಶ ಕಳುಹಿಸಿರುವ ಜಿಂಟಾವೋ, ರಾಷ್ಟ್ರ ನಿರ್ಮಾಣದಲ್ಲಿ ದ್ವೀಪರಾಷ್ಟ್ರವು ಗರಿಷ್ಠ ಪ್ರಗತಿಯನ್ನು ಸಾಧಿಸಲಿ ಎಂದು ಆಶಯ ವ್ಯಕ್ತಪಡಿಸಿದ್ದಾರೆ.

ಎಲ್‌ಟಿಟಿಇ ವಿರುದ್ಧದ ಸಮರದ ಬಳಿಕ ಶ್ರೀಲಂಕಾದಲ್ಲಿನ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ 350 ಮಿಲಿಯನ್ ಅಮೆರಿಕನ್ ಡಾಲರುಗಳ ಆರ್ಥಿಕ ಸಹಾಯವನ್ನು ತಾನು ಮಾಡಲಿರುವುದಾಗಿಯೂ ಚೀನಾ ಇದೇ ಸಂದರ್ಭದಲ್ಲಿ ಹೇಳಿಕೊಂಡಿದೆ.

ಯುದ್ಧದ ಕರಾಳತೆಯ ನಂತರ ಶ್ರೀಲಂಕಾದ ಉತ್ತರ ಮತ್ತು ದಕ್ಷಿಣಗಳಲ್ಲಿ ನಡೆಯುತ್ತಿರುವ ಮತ್ತು ಮುಕ್ತಾಯಗೊಂಡಿರುವ ಸುಮಾರು 6.1 ಬಿಲಿಯನ್ ಡಾಲರ್ ಮೊತ್ತದ ಯೋಜನೆಗಳನ್ನು ಚೀನಾ ಪಡೆದುಕೊಂಡಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ.

ಚೀನಾ ಮತ್ತು ಶ್ರೀಲಂಕಾಗಳು ಅತ್ಯುತ್ತಮ ನೈಜ ನೆರೆರಾಷ್ಟ್ರಗಳು, ಅತ್ಯುತ್ತಮ ಮಿತ್ರರು ಮತ್ತು ಶ್ರೇಷ್ಠ ಪಾಲುದಾರರು ಎಂದು ಜಿಂಟಾವೋ ತಿಳಿಸಿದ್ದಾರೆ.

ಬೀಜಿಂಗ್ ನೆರವಿನಿಂದ ಹಾಂಬಂತೋಟಾ ಬಂದರು ನಿರ್ಮಾಣದಲ್ಲಿನ ಪ್ರಮುಖ ವ್ಯವಸ್ಥೆ ಸೇರಿದಂತೆ ಶ್ರೀಲಂಕಾದಲ್ಲಿನ ಮೂಲಭೂತ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಲು ತಾನು 350 ಮಿಲಿಯನ್ ಡಾಲರ್ ಮೊತ್ತವನ್ನು ನೀಡಲಿರುವುದಾಗಿ ಚೀನಾ ಹೇಳಿದೆ.

ನಿಮ್ಮ (ರಾಜಪಕ್ಷೆ) ಸಮರ್ಥ ನಾಯಕತ್ವದಡಿಯಲ್ಲಿ ಶ್ರೀಲಂಕಾವು ಸಾಮಾಜಿಕ ಸ್ಥಿರತೆಯನ್ನು ಕಾಯ್ದುಕೊಂಡಿದೆ. ಆರ್ಥಿಕ ಪ್ರಗತಿ ಮತ್ತು ಜನ ಜೀವನದ ಗುಣಮಟ್ಟವೂ ವೃದ್ಧಿಸಿದೆ ಎಂದು ಲಂಕನ್ನರನ್ನು ಅಭಿನಂದಿಸಿರುವ ಜಿಂಟಾವೋ ತನ್ನ ಸಂದೇಶದಲ್ಲಿ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ