ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಜರ್ಮನಿ ಕ್ಯಾಥೊಲಿಕ್ ಪಾದ್ರಿಗಳಿಂದ 94 ಲೈಂಗಿಕ ಕಿರುಕುಳ (Catholic sex abusers | Germany | Der Spiegel | sexual abuse)
Bookmark and Share Feedback Print
 
ಜರ್ಮನಿಯ ಕ್ಯಾಥೊಲಿಕ್ ಪಾದ್ರಿಗಳು ಮತ್ತು ಇತರರು ಲೈಂಗಿಕ ಕಿರುಕುಳ ನೀಡಿರುವ ಪ್ರಕರಣಗಳು ಈ ಹಿಂದೆ ಊಹಿಸಿದ್ದಕ್ಕಿಂತ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ ಎಂದು ಜರ್ಮನಿಯ ಸುದ್ದಿ ಮ್ಯಾಗಜಿನ್ 'ಡೆರ್ ಸ್ಪೈಜೆಲ್' ತನ್ನ ವರದಿಯಲ್ಲಿ ಹೇಳಿದೆ.

ಜರ್ಮನಿಯ 27 ಕ್ಯಾಥೊಲಿಕ್ ಚರ್ಚ್ ವ್ಯಾಪ್ತಿಯಲ್ಲಿ 'ಡೆರ್ ಸ್ಪೈಜೆಲ್' ನಡೆಸಿರುವ ಸಮೀಕ್ಷೆಯ ಪ್ರಕಾರ 1995ರಿಂದ 94ಕ್ಕೂ ಹೆಚ್ಚು ಶಂಕಿತ ಪಾದ್ರಿಗಳು ಮತ್ತು ಇತರ ಚರ್ಚ್ ಸಿಬ್ಬಂದಿಗಳು ಲೈಂಗಿಕ ಕಿರುಕುಳ ನೀಡಿದ್ದಾರೆ. ಇವರಲ್ಲಿ 30 ಮಂದಿಯನ್ನು ಮಾತ್ರ ನ್ಯಾಯಾಲಯದ ಕಟಕಟೆಗೆ ತರಲಾಗಿತ್ತು.

ಜರ್ಮನಿಯ ಕ್ಯಾಥೊಲಿಕ್ ಚರ್ಚ್‌ಗಳ 10 ಸಿಬ್ಬಂದಿಗಳು ಪ್ರಸಕ್ತ ಲೈಂಗಿಕ ಕಿರುಕುಳ ಆರೋಪವನ್ನು ಎದುರಿಸುತ್ತಿದ್ದಾರೆ ಎಂದು ಪತ್ರಿಕೆ ತನ್ನ ವರದಿಯಲ್ಲಿ ಹೇಳಿದೆ.

ಕಳೆದ ಕೆಲವು ವಾರಗಳಿಂದ ಜರ್ಮನಿಯಲ್ಲಿ ಸತತ ಲೈಂಗಿಕ ಕಿರುಕುಳ ಪ್ರಕರಣಗಳು ಬಯಲಿಗೆ ಬರುತ್ತಿದ್ದು, ಹೆಚ್ಚಿನವು ಕ್ಯಾಥೊಲಿಕ್ ಪಾದ್ರಿಗಳದ್ದು ಎಂದು ಮಾಧ್ಯಮ ವರದಿಗಳು ಹೇಳಿವೆ.

ಬರ್ಲಿನ್‌ನ ಪ್ರತಿಷ್ಠಿತ ಕ್ಯಾನಿಸಿಯಸ್ ಕೊಲ್ಲೇಗ್ ಯುನಿವರ್ಸಿಟಿಯಲ್ಲಿನ 20ಕ್ಕೂ ಹೆಚ್ಚು ಹಳೆ ವಿದ್ಯಾರ್ಥಿಗಳು ತಮಗೆ ಇಲ್ಲಿನ ಮಾಜಿ ಧರ್ಮಗುರುಗಳು ಲೈಂಗಿಕ ಕಿರುಕುಳ ನೀಡಿದ್ದರು ಎಂದು ದೂರಿಕೊಂಡಿದ್ದರು.

ಜರ್ಮನಿಯ ಹಲವು ನಗರಗಳ ಇತರ ವಿದ್ಯಾರ್ಥಿಗಳು ಕೂಡ ತಮಗೆ ಪಾದ್ರಿಗಳು ಲೈಂಗಿಕ ಕಿರುಕುಳ ನೀಡಿರುವುದನ್ನು ಬಹಿರಂಗಪಡಿಸಿದ್ದರು.

1970 ಮತ್ತು 1980ರ ಅವಧಿಯಲ್ಲಿ ಬರ್ಲಿನ್‌ನ ಕ್ಯಾನಿಸಿಯಸ್ ಕಾಲೇಜಿನ ಮೂವರು ಸಿಬ್ಬಂದಿಗಳು ಲೈಂಗಿಕ ಕಿರುಕುಳ ನೀಡಿದ್ದರು ಎಂದು 25ಕ್ಕೂ ಹೆಚ್ಚು ಮಂದಿ ಆರೋಪಿಸಿದ್ದಾರೆ ಎಂದು ಈ ಹಿಂದೆ ಪತ್ರಿಕಾ ವರದಿಯೊಂದು ಹೇಳಿತ್ತು.
ಸಂಬಂಧಿತ ಮಾಹಿತಿ ಹುಡುಕಿ