ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಶ್ರೀಲಂಕಾ: ಪ್ರಭಾಕರನ್ ಅಡಗುತಾಣ ಧ್ವಂಸ, ಶಸ್ತ್ರಾಸ್ತ್ರ ವಶ (Prabhakaran | Sri Lanka | LTTE | Colombo)
Bookmark and Share Feedback Print
 
ಶ್ರೀಲಂಕಾ ಸೇನಾ ಕಾರ್ಯಾಚರಣೆಯಲ್ಲಿ ಕಳೆದ ವರ್ಷ ಹತನಾದ ಎಲ್‌ಟಿಟಿಇ ವರಿಷ್ಠ ವೇಲುಪಿಳ್ಳೈ ಪ್ರಭಾಕರನ್ ಉಪಯೋಗಿಸುತ್ತಿದ್ದ ಅಡಗುತಾಣವನ್ನು ಭದ್ರತಾ ಪಡೆ ಶುಕ್ರವಾರ ಧ್ವಂಸಗೊಳಿಸಿದ್ದು, ಅಪಾರ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಮತ್ತು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಭಾಕರನ್ ಅಡಗುತಾಣ ಧ್ವಂಸಗೊಳಿಸುವ ಕಾರ್ಯಾಚರಣೆ ಸಂದರ್ಭದಲ್ಲಿ 17ಸೂಯಿಸೈಡ್ ಜಾಕೆಟ್ಸ್, 300ಕೆಜಿ ಸಿ-4ಸ್ಫೋಟಕ ಮತ್ತು 7ಸಾವಿರ ಹ್ಯಾಂಡ್ ಗ್ರೆನೇಡ್‌ಗಳನ್ನು ವಶಪಡಿಸಿಕೊಂಡಿರುವುದಾಗಿ ಹೇಳಿದ್ದಾರೆ.

ಇದೀಗ ಬಂಧನದಲ್ಲಿರುವ ವೇಲುಪಿಳ್ಳೈ ಪ್ರಭಾಕರನ್‌ನ ಆರು ಮಂದಿ ನಿಕಟವರ್ತಿಗಳಲ್ಲಿ ಒಬ್ಬನಾಗಿರುವ ವ್ಯಕ್ತಿ ಈ ಮಾಹಿತಿಯನ್ನು ನೀಡಿದ್ದು, ಅದರ ಆಧಾರದ ಮೇಲೆ ಕಾರ್ಯಾಚರಣೆ ನಡೆಸಲಾಗಿದೆ ಎಂದು ಐಲ್ಯಾಂಡ್ ನ್ಯೂಸ್ ವರದಿ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ