ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಶ್ರೀಮಂತರಾದ್ರೂ ಬಡವರಂತಿರಿ: ಭಾರತೀಯರಿಗೆ ಆಸೀಸ್ ಸಲಹೆ (avoid attacks | Victorian police | Indians | Australia)
Bookmark and Share Feedback Print
 
ಆಸ್ಟ್ರೇಲಿಯಾದಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ಸತತ ದಾಳಿಗಳನ್ನು ತಡೆಯುವ ಬದಲು, ಭಾರತೀಯರು ದಾಳಿಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುವಷ್ಟು ಶ್ರೀಮಂತಿಕೆಯನ್ನು ಮರೆಮಾಚಿ ಬಡವರಂತೆ ವರ್ತಿಸಿ ಎಂಬ ಹಾಸ್ಯಾಸ್ಪದ ಹೇಳಿಕೆ ವಿಕ್ಟೋರಿಯಾ ಪೊಲೀಸ್ ಮುಖ್ಯಸ್ಥರಿಂದ ಬಂದಿದೆ.

ತಮ್ಮ ದುಬಾರಿ ಹಾಗೂ ಐಷಾರಾಮಿ ವಸ್ತುಗಳನ್ನು ಬಹಿರಂಗವಾಗಿ ಪ್ರದರ್ಶಿಸದಿದ್ದರೆ ದಾಳಿಗಳಿಂದ ಭಾರತೀಯ ವಿದ್ಯಾರ್ಥಿಗಳು ತಪ್ಪಿಸಿಕೊಳ್ಳಬಹುದಾಗಿದೆ ಎಂದು ವಿಕ್ಟೋರಿಯಾ ಪೊಲೀಸ್ ಮುಖ್ಯಸ್ಥ ಸಿಮೊನ್ ಓವರ್ಲೆಂಡ್ 'ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಸುರಕ್ಷತಾ ವೇದಿಕೆ'ಯ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ನಿಮ್ಮಲ್ಲಿರುವ ಐಪಾಡ್‌ಗಳನ್ನು ಪ್ರದರ್ಶಿಸಬೇಡಿ, ನಿಮ್ಮಲ್ಲಿನ ದುಬಾರಿ ವಾಚ್‌ ತೋರಿಸಬೇಡಿ, ನಿಮ್ಮಲ್ಲಿನ ಮೌಲ್ಯಯುತ ಆಭರಣಗಳನ್ನು ಮೆರೆಸಬೇಡಿ. ಶ್ರೀಮಂತರಾಗಿದ್ದರೂ ಬಡವರಂತೆ ತೋರಿಸಿಕೊಳ್ಳಲು ಯತ್ನಿಸಿ ಎಂದು ಸಿಮೊನ್ ಸಲಹೆ ನೀಡಿದ್ದಾರೆಂದು 'ದಿ ಏಜ್' ಪತ್ರಿಕೆ ವರದಿ ಮಾಡಿದೆ.

ಆದರೆ ಸಿಮೊನ್ ಸಲಹೆಯನ್ನು ಭಾರತೀಯ ವಿದ್ಯಾರ್ಥಿಗಳ ಸಂಘಟನೆಗಳ ಒಕ್ಕೂಟ ತಳ್ಳಿ ಹಾಕಿದೆ. ಪೊಲೀಸ್ ಮುಖ್ಯಸ್ಥರ ಸಲಹೆಯು ಹಾಸ್ಯಾಸ್ಪದವಾಗಿದೆ. ನಮಗೆ ಸೂಕ್ತ ರಕ್ಷಣೆ ನೀಡುವುದರ ಬಗ್ಗೆ ಮಾತನಾಡುವುದನ್ನು ಬಿಟ್ಟು ಏನೇನೋ ಹೇಳಿಕೆ ನೀಡುತ್ತಿದ್ದಾರೆ ಎಂದು ಒಕ್ಕೂಟದ ವಕ್ತಾರ ಗೌತಮ್ ಗುಪ್ತಾ ಟೀಕಿಸಿದ್ದಾರೆ.

ವಿದ್ಯಾರ್ಥಿಗಳು ತಮ್ಮ ಸ್ವಯಂ ರಕ್ಷಣೆಗಾಗಿ ಕೆಲವು ಮುನ್ನೆಚ್ಚೆರಿಕಾ ಕ್ರಮಗಳನ್ನು ಕೂಡ ತೆಗೆದುಕೊಳ್ಳಬೇಕೆಂದು ವಿಕ್ಟೋರಿಯಾ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ನೀವು ಸುರಕ್ಷಿತ ಪ್ರದೇಶದಲ್ಲಿ ವಾಸಿಸಿದಲ್ಲಿ, ಸುರಕ್ಷಿತವಾಗಿ ಬದುಕಬಹುದಾಗಿದೆ. ನಿಮಗೆ ತಡರಾತ್ರಿ ಸಾರ್ವಜನಿಕ ಸಾರಿಗೆಯನ್ನು ಬಳಸುವ ಅಪಾಯಕಾರಿ ಆಯ್ಕೆಗಳಿದ್ದರೆ, ಅದನ್ನು ನಿರ್ಲಕ್ಷಿಸಿ ಎಂದು ಅವರು ಸಲಹೆ ನೀಡಿದರು.

ಪೊಲೀಸ್ ಮುಖ್ಯಸ್ಥರ ಹೇಳಿಕೆಯನ್ನು ವಿಕ್ಟೋರಿಯಾ ನಾಯಕ ಜಾನ್ ಬ್ರೂಂಬಿ ಸಮರ್ಥಿಸಿಕೊಂಡಿದ್ದು, ವಿದೇಶಿ ವಿದ್ಯಾರ್ಥಿಗಳ ವಿರುದ್ಧದ ಅಪರಾಧ ಪ್ರಕರಣಗಳನ್ನು ನಿಯಂತ್ರಣಕ್ಕೆ ತರಲು ಈ ಸಲಹೆ ಉಪಯುಕ್ತವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ