ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸೆಕ್ಸ್ ಸಂದರ್ಭದಲ್ಲಿ ಸದ್ದು ಮಾಡಬೇಡಿ: ಹುಡುಗಿಯರಿಗೆ ಎಚ್ಚರಿಕೆ (Cambridge University | sex | noise | Newnham female college)
Bookmark and Share Feedback Print
 
ಕಾಲೇಜು ಕ್ಯಾಂಪಸ್ಸಿನಲ್ಲಿ ಕಾಮಕೇಳಿಯ ಮುಲುಗಾಟ ಕಿರಿಕಿರಿ ಉಂಟು ಮಾಡುತ್ತಿದೆ ಎಂದು ದೂರುಗಳು ಬಂದ ಹಿನ್ನೆಲೆಯಲ್ಲಿ ಕೇಂಬ್ರಿಜ್ ಹುಡುಗಿಯರ ವಿಶ್ವವಿದ್ಯಾಲಯ, ತಮ್ಮ ಚಟುವಟಿಕೆಗಳಿಂದ ಯಾರಿಗೂ ತೊಂದರೆ ಮಾಡದಂತೆ ಸೂಚನೆ ನೀಡಿದೆ.

ಒಂದೇ ತಿಂಗಳಲ್ಲಿ 30ಕ್ಕೂ ಹೆಚ್ಚು ಮಂದಿ ಅಸಮಾಧಾನ ಸೂಚಿಸಿ ದೂರು ನೀಡಿದ್ದ ಹಿನ್ನೆಲೆಯಲ್ಲಿ ನ್ಯೂನ್ಹಾಮ್ ಹುಡುಗಿಯರ ಕಾಲೇಜಿನ ಸುಮಾರು 400ಕ್ಕೂ ಹೆಚ್ಚು ಪದವಿಪೂರ್ವ ವಿದ್ಯಾರ್ಥಿನಿಯರಿಗೆ ವಿಶ್ವವಿದ್ಯಾಲಯ ಎಚ್ಚರಿಕೆ ರವಾನಿಸಿದೆ.

ನ್ಯೂನ್ಹಾಮ್ ಕಾಲೇಜಿನ ಪುರಾತನ ಗೋಡೆಗಳು ತೀರಾ ಕಡಿಮೆ ದಪ್ಪವಿರುವುದರಿಂದ ಕಾರಿಡಾರಿನಲ್ಲಿ ಮುಲುಗಾಟದ ಶಬ್ದ ಹೆಚ್ಚಾಗುತ್ತಿದೆ. ದಯವಿಟ್ಟು ತಮ್ಮ ಚಟುವಟಿಕೆಗಳನ್ನು ಅದರಲ್ಲೂ ದಿನದ ಆರಂಭಿಕ ಮತ್ತು ಕೊನೆಯ ಹೊತ್ತಿನಲ್ಲಿ ಹೆಚ್ಚು ಜಾಗರೂಕವಾಗಿ ಮುಗಿಸಬೇಕೆಂದು ನೀವು ಅವರಿಗೆ ನೆನಪು ಹುಟ್ಟಿಸಬೇಕೆಂದು ಮನವಿ ಮಾಡುತ್ತಿದ್ದೇನೆ ಎಂದು ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷೆ 19ರ ಹರೆಯದ ಲೀಜಿ ಕೋಲ್ ಯುನಿವರ್ಸಿಟಿಗೆ ಬರೆದಿರುವ ತನ್ನ ಇ-ಮೇಲ್‌ನಲ್ಲಿ ತಿಳಿಸಿದ್ದಾರೆ.

ಆದರೆ ವಿದ್ಯಾರ್ಥಿಗಳು ತಮ್ಮನ್ನು ಅಪಮಾನಕ್ಕೊಳಪಡಿಸಲಾಗಿದೆ ಎಂದು ಆಕ್ರೋಶಗೊಂಡಿದ್ದಾರೆ.

'ಇದನ್ನು' ನಮ್ಮ ಸಹಪಾಠಿಗಳು ಕಿವಿಗೊಟ್ಟು ಕೇಳುತ್ತಾರೆ ಎಂದು ಜನ ಯೋಚಿಸುವುದೇ ಮುಜುಗರ ತರಿಸುತ್ತದೆ. ನನಗೆ ನಿಜಕ್ಕೂ ನಾಚಿಕೆಯಾಗುತ್ತಿದೆ. ಸುರಕ್ಷಿತವಾಗಿ ಚಟುವಟಿಕೆ ನಿರತರಾಗಿದ್ದಾಗ ಗೋಡೆಗಳು ತೆಳ್ಳಗಿವೆ ಎಂದು ಮರೆಯುವುದು ತುಂಬಾ ಸುಲಭ ಎಂದು 20ರ ಹರೆಯದ ತೀರಾ ಮುಜುಗರಪಟ್ಟುಕೊಂಡಿರುವ ಯುವತಿಯೊಬ್ಬಳು ಪ್ರತಿಕ್ರಿಯಿಸಿದ್ದಾಳೆ.

ಮತ್ತೊಬ್ಬ ಹುಡುಗಿ ವಿಷಯ ಹೌದೆಂದು ಒಪ್ಪಿಕೊಂಡಿದ್ದಾಳೆ. 'ಇಮೇಲ್ ಓದುತ್ತಿರುವಾಗ ನನಗೆ ತೀರಾ ಅಂಜಿಕೆಯಾಯಿತು. ಏಕೆಂದರೆ ಅದು ನನ್ನನ್ನೇ ಉಲ್ಲೇಖಿಸಿ ಹೇಳಿದಂತೆ ನನಗನ್ನಿಸಿತ್ತು' ಎಂದಿದ್ದಾಳೆ.

ಈ ಕಾಲೇಜಿನಲ್ಲಿ ಪುರುಷರು ಎರಡು ರಾತ್ರಿ ಕಳೆಯಲು ಅವಕಾಶ ನೀಡಲಾಗಿದೆ. ಆದರೆ ಅತಿಥಿಗಳಿಗಾಗಿನ ಕೊಠಡಿಗಾಗಿ ಇಲ್ಲಿ ಮಾಹಿತಿ ನೀಡಬೇಕಾಗುತ್ತದೆ.

ಇಲ್ಲಿಗೆ ಆಗಾಗ ಭೇಟಿ ನೀಡುವ ವಿದ್ಯಾರ್ಥಿಯೊಬ್ಬನ ಪ್ರಕಾರ, 'ಪಾನಮತ್ತರಾಗಿದ್ದಾಗ ಇದು ತುಂಬಾ ಕೆಟ್ಟ ಅನುಭವ ನೀಡುತ್ತದೆ. ಇಲ್ಲಿನ ಗೋಡೆಗಳು ಒಂದು ಹಂತದಲ್ಲಿ ಮುರಿದು ಹೋಗುತ್ತವೆ ಎಂದೆನಿಸುತ್ತದೆ' ಎಂದಿದ್ದಾನೆ.
ಸಂಬಂಧಿತ ಮಾಹಿತಿ ಹುಡುಕಿ