ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಇಸ್ಲಾಮಿಕ್ ತೀವ್ರವಾದಿಗಳು ಸೌಮ್ಯರಾಗಲು ವೈನ್ ಕುಡೀಬೇಕು (Islamic extremist | drink wine | to be tolerant | Muslims)
Bookmark and Share Feedback Print
 
ಇಸ್ಲಾಮಿಕ್ ಉಗ್ರವಾದಿಗಳು ಒಂದಿನಿತು ಸೌಮ್ಯ ಮನೋಭಾವವನ್ನು ಮೈಗೂಡಿಸಿಕೊಳ್ಳಲು ವೈನ್ ಕುಡಿಯಬೇಕು ಎಂದು ಖ್ಯಾತ ದಾರ್ಶನಿಕರೊಬ್ಬರು ಸಲಹೆ ಮಾಡಿದ್ದಾರೆ.

ಇಸ್ಲಾಮ್‌ಗೆ ಕೆಟ್ಟ ಹೆಸರು ತರುವ ಮನೋಧರ್ಮವನ್ನು ಮೈಗೂಡಿಸಿಕೊಂಡು ಭ್ರಮೆ ಪೀಡಿತರಾಗಿರುವ ಮೂಲಭೂತವಾದಿಗಳು ಮದ್ಯ ಸೇವಿಸಿದಲ್ಲಿ ಅವರು ತಕ್ಕ ಮಟ್ಟಿಗೆ ಯೋಗ್ಯ ಹಾಗೂ ಉತ್ತಮವಾದ ಮಾನಸಿಕ ಹಂತವನ್ನು ಪಡೆಯಬಹುದು ಎಂದು ಆಕ್ಸ್‌ಫರ್ಡ್ ಮತ್ತು ವಾಷಿಂಗ್ಟನ್‌ಗಳ ಮನೋವೈಜ್ಞಾನಿಕ ವಿದ್ಯಾ ಸಂಸ್ಥೆಯ ಅಧ್ಯಯನ ಪ್ರೊಫೆಸರ್ ಆಗಿರುವ ಡಾ. ಸ್ಕ್ರೂಟನ್ ಹೇಳಿದ್ದಾರೆ.

ಸಾಂದರ್ಭಿಕವಾಗಿ ಮದ್ಯ ಸೇವಿಸುವ ಅಭ್ಯಾಸವನ್ನು ಇಟ್ಟುಕೊಳ್ಳುವುದರಿಂದ ಸ್ನೇಹಪರತೆ ಮತ್ತು ಇತರರೊಂದಿಗೆ ಬೆರೆಯುವ ಅವಕಾಶಗಳು ಹೆಚ್ಚುತ್ತವೆ. ಇವು ಜೀವನದ ಪ್ರಮುಖ ಪಾಠಗಳನ್ನು ತಿಳಿಸಿಕೊಡುವಲ್ಲಿ ಸಹಾಯ ಮಾಡುತ್ತವೆ ಎಂದು ಸ್ಕ್ರೂಟನ್ ಅಭಿಪ್ರಾಯಪಟ್ಟಿದ್ದಾರೆ.

ಮುಸ್ಲಿಮರು ಕುಡಿಯುವುದನ್ನು ಪುನಃ ಕಲಿಯಬೇಕು ಮತ್ತು ಇದಕ್ಕಾಗಿ ಧಾರ್ಮಿಕ ಶ್ರದ್ಧೆಯಿಂದ ತಮ್ಮನ್ನು ತಾವು ಒಪ್ಪಿಸಿಕೊಳ್ಳಬೇಕು ಎಂದು ಪ್ರೊಫೆಸರ್ 'ಡಿಕ್ಯಾಂಟರ್' ಎಂಬ ಅಂತಾರಾಷ್ಟ್ರೀಯ ವೈನ್ ಮ್ಯಾಗಜಿನ್‌ನಲ್ಲಿ ಬರೆದಿರುವ ಲೇಖನವನ್ನು ಉಲ್ಲೇಖಿಸಿ 'ಡೈಲೀ ಎಕ್ಸ್‌ಪ್ರೆಸ್' ವರದಿ ಮಾಡಿದೆ.

ನಗುವುದು ಮತ್ತು ಸೌಮ್ಯವಾದಿಗಳಾಗಿರುವುದಕ್ಕೆ ಅಂಗೀಕಾರ ನೀಡಿರುವ ಇಸ್ಲಾಂ ಚರಣಗಳ ಕುರಿತ ತೀವ್ರ ಟೀಕೆಗಳಿದ್ದರೂ, 'ಬುದ್ಧಿವಂತ ಜನರ ಅತ್ಯುತ್ತಮ ಸ್ನೇಹಿತ' ಎಂದೇ ಮದ್ಯವನ್ನು ಬಣ್ಣಿಸಿದ್ದ ಇಬನ್ ಸಿನಾರಂತಹ 11ನೇ ಶತಮಾನದ ಮುಸ್ಲಿಂ ಧರ್ಮಗುರುಗಳ ಬಗ್ಗೆ ಸ್ಕ್ರೂಟನ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಸೌದಿ ಅರೇಬಿಯಾದಿಂದ ಹೊರ ಬಿದ್ದ ತೀವ್ರವಾದಿಗಳು ವಿಶ್ವದಾದ್ಯಂತದ ಮುಸ್ಲಿಮರ ತಲೆಕೆಡಿಸುತ್ತಿದ್ದಾರೆ ಮತ್ತು ತಮ್ಮ ಕಠೋರತೆಯ ಮನೋಧರ್ಮವನ್ನು ಅವರ ಮೇಲೆ ಹೇರುತ್ತಿದ್ದಾರೆ ಎಂದೂ ಅವರು ಬೆಟ್ಟು ಮಾಡಿ ತೋರಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ