ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಹತ್ಯೆ ಸಂಚು: ಫೋನ್ಸೆಕಾ ವಿರುದ್ಧ ಕೋರ್ಟ್‌ ಮಾರ್ಷಲ್ (Rajapaksa | Lanka | court martial | Sarath Fonseka | Colombo)
Bookmark and Share Feedback Print
 
ಲಂಕಾ ಸರ್ಕಾರವನ್ನು ಉರುಳಿಸುವ ಹಾಗೂ ಅಧ್ಯಕ್ಷ ಮಹೀಂದ ರಾಜಪಕ್ಸೆ ಅವರ ಹತ್ಯೆಗೆ ಸಂಚು ರೂಪಿಸಿರುವ ಆರೋಪದ ಹಿನ್ನೆಲೆಯಲ್ಲಿ ಲಂಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಪರಾಜಿತಗೊಂಡ ಅಭ್ಯರ್ಥಿ ಜನರಲ್ ಸರತ್ ಫೋನ್ಸೆಕಾ ಅವರು ಇದೀಗ ಕೋರ್ಟ್ ಮಾರ್ಷಲ್‌ಗೆ ಒಳಗಾಗಲಿದ್ದಾರೆ ಎಂದು ವರದಿಯೊಂದು ತಿಳಿಸಿದೆ.

ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಘೋಷಣೆಯಾದ ನಂತರ ಮಿಲಿಟರಿಯ ಮಾಜಿ ವರಿಷ್ಠ ಸರತ್ ಫೋನ್ಸೆಕಾ ಅವರು ಚುನಾವಣೆಯಲ್ಲಿ ಪುನಾರಾಯ್ಕೆಗೊಂಡ ರಾಜಪಕ್ಸೆ ಅವರ ಹತ್ಯೆಗೈಯುವ ಸಂಚು ನಡೆಸಿರುವುದಾಗಿ ಶ್ರೀಲಂಕಾ ಸರ್ಕಾರ ಗಂಭೀರವಾಗಿ ಆರೋಪಿಸಿತ್ತು. ಆ ನಿಟ್ಟಿನಲ್ಲಿ ಫೋನ್ಸೆಕಾ ಅವರನ್ನು ಕೋರ್ಟ್ ಕಟಕಟೆಗೆ ಹತ್ತಿಸಲು ಲಂಕಾ ಸರ್ಕಾರ ಕಾನೂನು ಮೊರೆ ಹೋಗಿತ್ತು.

ಇದೀಗ ಪೋನ್ಸೆಕಾ ಅವರು ಹಲವಾರು ಆಪಾದನೆಗಳಿಗಾಗಿ ಕೋರ್ಟ್ ಮಾರ್ಷಲ್ ಎದುರಿಸಬೇಕಾಗಿದೆ ಎಂದು ಕಾನೂನು ತಜ್ಞರು ತಿಳಿಸಿರುವುದಾಗಿ ದಿ ಸಂಡೆ ಟೈಮ್ಸ್ ವರದಿ ವಿವರಿಸಿದೆ.

ಸರ್ಕಾರ ಉರುಳಿಸುವ ಮತ್ತು ರಾಜಪಕ್ಸೆ ಹತ್ಯೆ ಸಂಚು ಕುರಿತಂತೆ ಫೋನ್ಸೆಕಾ ಆರೋಪ ಎದುರಿಸುತ್ತಿದ್ದಾರೆ. ಅಲ್ಲದೇ, ಫೋನ್ಸೆಕಾ ಅವರ ಅಳಿಯ ರಕ್ಷಣಾ ಸಂಬಂಧದ ಒಪ್ಪಂದದ ಹಗರಣದಲ್ಲಿಯೂ ಭಾಗಿಯಾಗಿರುವ ಕುರಿತು ವಿಚಾರಣೆ ಎದುರಿಸಬೇಕಾಗಿದೆ ಎಂದು ಸಿಐಡಿ ಅಟಾರ್ನಿ ಜನರಲ್ ಮೋಹನ್ ಪೆರಿಸ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ