ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕೊನೆಗೂ ಪಾಕ್ ಒತ್ತಡಕ್ಕೆ ಭಾರತ ಮಣಿದಿದೆ: ಖುರೇಷಿ (Pakistan | India | SM Qureshi | Multan | Islamabad)
Bookmark and Share Feedback Print
 
ಕಾಶ್ಮೀರ ಸೇರಿದಂತೆ ಹಲವಾರು ವಿವಾದಗಳ ಕುರಿತು ದ್ವಿಪಕ್ಷೀಯ ಮಾತುಕತೆ ಪುನರಾಂಭಿಸುವಂತೆ ಪಾಕಿಸ್ತಾನದ ಒತ್ತಡಕ್ಕೆ ಭಾರತ ಕೊನೆಗೂ ಮಣಿದಿದ್ದು, ಮಾತುಕತೆಗೆ ಮುಂದಾಗಿದೆ ಎಂದು ಪಾಕ್ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಭಾನುವಾರ ಮುಲ್ತಾನ್‌ನಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ಮುಂಬೈ ದಾಳಿಯ ನಂತರ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡ ನಂತರವೇ ದ್ವಿಪಕ್ಷೀಯ ಮಾತುಕತೆ ನಡೆಸುವುದಾಗಿ ಭಾರತ ಎಚ್ಚರಿಸುತ್ತಲೇ ಬಂದಿತ್ತು. ಆದರೆ ಸೂಕ್ತ ಸಾಕ್ಷ್ಯಾಧಾರ ಲಭಿಸದ ನಂತರವೇ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪಾಕ್ ಭರವಸೆ ನೀಡಿತ್ತು. ಅಲ್ಲದೇ, ಪಾಕ್ ಜೊತೆ ಮಾತುಕತೆಗೆ ಮುಂದಾಗುವಂತೆ ಸಾಕಷ್ಟು ಬಾರಿ ಒತ್ತಡ ಹೇರಲಾಗಿತ್ತು ಎಂದರು.

ಈ ಕಾರಣದಿಂದಾಗಿಯೇ ಭಾರತ ಸಾಕಷ್ಟು ಕಸರತ್ತುಗಳನ್ನು ನಡೆಸಿತ್ತು, ಆದರೆ ಪಾಕಿಸ್ತಾನ ಅದ್ಯಾವುದಕ್ಕೂ ಬಗ್ಗಿಲ್ಲ, ಇದೀಗ ಭಾರತವೇ ದ್ವಿಪಕ್ಷೀಯ ಮಾತುಕತೆಗೆ ಮುಂದಾಗಿದೆ ಎಂದು ಪಾಕ್ ವ್ಯಂಗ್ಯವಾಡಿದೆ.

ಪಾಕಿಸ್ತಾನ ಎತ್ತಿರುವ ಸಮಸ್ಯೆಗಳು ಗಂಭೀರವಾದದ್ದಾಗಿದೆ. ಅದರಲ್ಲಿ ಕಾಶ್ಮೀರ, ನೀರು ಹಂಚಿಕೆ ಅಥವಾ ಭಯೋತ್ಪಾದನೆಯಂತಹ ವಿವಾದಗಳು ಸೇರಿತ್ತು. ಆದರೆ ಭಾರತ ಯಾಕೆ ಪಾಕಿಸ್ತಾನವನ್ನು ದೂರ ಇಡುವ ಪ್ರಯತ್ನ ಮಾಡಬೇಕಾಗಿದೆ ಎಂದು ಖುರೇಷಿ ಪ್ರಶ್ನಿಸಿದರು.

ಪಾಕಿಸ್ತಾನ ಯಾವುದೇ ಒತ್ತಡಕ್ಕೆ ಮಣಿಯುವ ಪ್ರಶ್ನೆಯೇ ಇಲ್ಲ. ಯಾಕೆಂದರೆ ನಮಗೆ ನಮ್ಮ ದೇಶದ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವುದು ಪ್ರಮುಖವಾಗಿದೆ. ಆ ನಿಟ್ಟಿನಲ್ಲಿ ಪಾಕಿಸ್ತಾನ ಯಾವುದೇ ಕಾರಣಕ್ಕೂ ಭಾರತದ ಅಜೆಂಡಾಗಳಿಗೆ ಮಂಡಿಯೂರುವುದಿಲ್ಲ ಎಂದು ಖುರೇಷಿ ತಿರುಗೇಟು ನೀಡಿದರು.

ಇತ್ತೀಚೆಗಷ್ಟೇ ದ್ವಿಪಕ್ಷೀಯ ಮಾತುಕತೆ ನಡೆಸುವಂತೆ ಭಾರತ ಪಾಕಿಸ್ತಾನಕ್ಕೆ ಅಧಿಕೃತವಾಗಿ ಆಹ್ವಾನ ನೀಡಿತ್ತು. ಮುಂಬೈ ದಾಳಿಕೋರರ ವಿರುದ್ಧ ಕಠಿಣ ಕ್ರಮ ಕೈಗೊಂಡರ ನಂತರವೇ ಪಾಕಿಸ್ತಾನದ ಜೊತೆ ಮಾತುಕತೆ ಎಂದು ಈ ಮೊದಲು ಸಾಕಷ್ಟು ಬಾರಿ ಹೇಳಿತ್ತು. ಆದರೆ ಇದೀಗ ಭಾರತ ಏಕಾಏಕಿ ಪಾಕ್ ಜೊತೆ ಮಾತುಕತೆಗೆ ಮುಂದಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ