ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸೌದಿ ದೊರೆ ಅಬ್ದುಲ್ಲಾ ಬಹು ಜನಪ್ರಿಯ ಮುಖಂಡ: ಸಮೀಕ್ಷೆ (King Abdullah | Saudi Arabia | Popular leader | Jordan)
Bookmark and Share Feedback Print
 
ಮುಸ್ಲಿಮ್ ರಾಷ್ಟ್ರಗಳಲ್ಲಿ ಸೌದಿ ಅರೇಬಿಯಾದ ದೊರೆ ಅಬ್ದುಲ್ಲಾ ಬಿನ್ ಅಬ್ದುಲ್ಲಾಜಿಜ್ ತುಂಬಾ ಜನಪ್ರಿಯ ಮುಖಂಡ ಎಂಬುದು ಸಮೀಕ್ಷೆಯೊಂದು ತಿಳಿಸಿದೆ.

ಪೆವ್ ರಿಸರ್ಚ್ ಸೆಂಟರ್ ಕೈಗೊಂಡ ಗ್ಲೋಬಲ್ ಆಟಿಟ್ಯೂಡ್ ಪ್ರೊಜೆಕ್ಟ್ ಸಮೀಕ್ಷೆಯಲ್ಲಿ, ಶೇ.92ರಷ್ಟು ಜೋರ್ಡಾನಿಯನ್ಸ್ ಮತ್ತು ಶೇ.83ರಷ್ಟು ಈಜಿಪ್ಟ್ ಜನರು, ಅಂತಾರಾಷ್ಟ್ರೀಯ ವ್ಯವಹಾರಗಳ ನೆಲೆಯಲ್ಲಿ ಕಿಂಗ್ ಅಬ್ದುಲ್ಲಾ ಅವರ ನಿಲುವು ಪೂರ್ಣ ಪ್ರಮಾಣದಲ್ಲಿ ಸರಿಯಾಗಿಯೇ ಇದೆ ಎಂಬ ವಿಶ್ವಾಸ ಇರುವುದಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಮಧ್ಯಏಷ್ಯಾ ಭಾಗದಲ್ಲಿ ಸೌದಿ ಅರೇಬಿಯಾದ ದೊರೆ ಅಬ್ದುಲ್ಲಾ ಅವರು ಬಹುತೇಕ ಅಂಕ ಗಳಿಸಿದ್ದಾರೆ. ಅದರಲ್ಲೂ ಮುಖ್ಯವಾಗಿ ಮುಸ್ಲಿಂ ಏಷ್ಯಾ ರಾಷ್ಟ್ರಗಳು ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಅದರಲ್ಲಿ ಪಾಕಿಸ್ತಾನದಲ್ಲಿ ಶೇ.64 ಹಾಗೂ ಇಂಡೋನೇಷ್ಯಾದಲ್ಲೂ ಶೇ.61ರಷ್ಟು ಅಬ್ದುಲ್ಲಾ ಪರ ಅಭಿಪ್ರಾಯ ವ್ಯಕ್ತವಾಗಿದೆ ಎಂದು ಸಮೀಕ್ಷೆ ವಿವರಿಸಿದೆ.

ಆರು ಪ್ರಮುಖ ಮುಸ್ಲಿಂ ರಾಷ್ಟ್ರಗಳಾದ ಈಜಿಪ್ಟ್, ಇಂಡೋನೇಷ್ಯಾ, ಜೋರ್ಡಾನ್, ಲೆಬನಾನ್, ಪಾಕಿಸ್ತಾನ್ ಹಾಗೂ ಟರ್ಕಿಯಲ್ಲಿ ಸರ್ವೆ ಕಾರ್ಯ ನಡೆಸಲಾಗಿತ್ತು. ಅದೇ ರೀತಿ ಪ್ಯಾಲೆಸ್ತೇನ್ ಭಾಗ ಮತ್ತು ಮುಸ್ಲಿಂ ಬಾಹುಳ್ಯ ಹೊಂದಿರುವ ನೈಜೀರಿಯಾ, ಇಸ್ರೇಲ್‌ನಲ್ಲಿಯೂ ಅಭಿಪ್ರಾಯ ಸಂಗ್ರಹಿಸಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ