ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಲಘು ದಾಳಿಗಳತ್ತ ಅಲ್‌ಖೈದಾ ಚಿತ್ತ: ಅಮೆರಿಕಾ ತಜ್ಞರು (Al Qaeda | small-scale attacks | US counter-terrorism experts | Barack Obama)
Bookmark and Share Feedback Print
 
ಅಲ್‌ಖೈದಾ ದೊಡ್ಡ ಪ್ರಮಾಣದ ದಾಳಿಗಳ ಬದಲು ಲಘು ಪ್ರಮಾಣದ ವಿಧ್ವಂಸಕ ಕೃತ್ಯಗಳಿಗೆ ಮಗ್ಗುಲು ಬದಲಾಯಿಸಿಕೊಂಡಿದೆ ಎಂದು ಅಮೆರಿಕಾದ ಭಯೋತ್ಪಾದನಾ ವಿರೋಧಿ ತಜ್ಞರು ವಿಶ್ಲೇಷಣೆ ನಡೆಸಿದ್ದು, ಬರಾಕ್ ಒಬಾಮಾ ಅಧ್ಯಕ್ಷರಾಗಿ ವರ್ಷದ ನಂತರ ಆಶಾವಾದ ಮತ್ತು ಕಳವಳಗಳೆರಡೂ ಹೆಚ್ಚಾಗಿವೆ ಎಂದು ವರದಿಗಳು ಹೇಳಿವೆ.

ಅಲ್‌ಖೈದಾ ಭಯೋತ್ಪಾದನಾ ಜಾಲದ ನಾಯಕತ್ವ, ಹಣಕಾಸು ಮೂಲಗಳು ಮತ್ತು ತರಬೇತಿ ಕೇಂದ್ರಗಳ ಮೇಲೆ ಅಮೆರಿಕಾ ಸತತ ದಾಳಿಗಳನ್ನು ನಡೆಸಿದ ಪರಿಣಾಮ ಬೃಹತ್ ಪ್ರಮಾಣದ ದುಷ್ಕೃತ್ಯಗಳನ್ನು ನಡೆಸುವ ಸಾಮರ್ಥ್ಯದಲ್ಲಿ ಅದು ಹಿನ್ನಡೆ ಕಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆಂದು 'ವಾಷಿಂಗ್ಟನ್ ಪೋಸ್ಟ್' ತನ್ನ ವರದಿಯಲ್ಲಿ ವಿವರಿಸಿದೆ.

ನವೆಂಬರ್‌ನಲ್ಲಿ ಟೆಕ್ಸಾಸ್‌ನಲ್ಲಿನ ಫೋರ್ಟ್ ಹುಡ್‌ನಲ್ಲಿ ಭಯಾನಕ ಗುಂಡಿನ ದಾಳಿ ನಡೆಸಿದ್ದು ಮತ್ತು ಕ್ರಿಸ್ಮಸ್ ದಿನದಂದು ವಿಮಾನದಲ್ಲಿ ಬಾಂಬ್ ಸ್ಫೋಟಿಸುವ ವಿಫಲ ಯತ್ನ ನಡೆಸಿದ್ದು-- ಇವೆರಡೂ ಅಲ್‌ಖೈದಾ ತನ್ನ ಬೃಹತ್ ದಾಳಿಗಳಿಂದ ಹಿಂದಕ್ಕೆ ಸರಿಯುತ್ತಿರುವುದನ್ನು ತೋರಿಸುತ್ತದೆ.

ಆದರೆ ವಾಷಿಂಗ್ಟನ್ ಮತ್ತು ದೇಶದಾದ್ಯಂತ ಭೀತಿಯ ಪ್ರಮಾಣ ಹೆಚ್ಚಾಗಿದೆ ಎಂದು ಪತ್ರಿಕೆ ತಿಳಿಸಿದೆ.

ಕೆಲವು ಭಯೋತ್ಪಾದನಾ ತಜ್ಞರ ಪ್ರಕಾರ ಕೆಟ್ಟ ಕಾಲ ಇನ್ನಷ್ಟೇ ಬರಬೇಕಿದ್ದು, ಗಾಯಗೊಂಡಿರುವ ಜಿಹಾದಿ ಸಂಘಟನೆಗಳು ವಿಜಯಕ್ಕಾಗಿ ಅವಿರತ ಹುಡುಕಾಟ ನಡೆಸುತ್ತಿವೆ.

ಅಲ್‌ಖೈದಾ ನಾಯಕತ್ವವು ಯಾವ ರೀತಿಯಲ್ಲಾದರೂ ಕಾರ್ಯಸಾಧನೆ ಮಾಡಬೇಕು ಎಂದು ಪಣ ತೊಟ್ಟಿರುವುದರಿಂದ ಕುಣಿಕೆ ಬಿಗಿಯಾಗುತ್ತಿದೆ ಎಂದು ಸೆನೆಟ್ ಬೇಹುಗಾರಿಕಾ ಸಮಿತಿಯ ಮಾಜಿ ಸಿಬ್ಬಂದಿ ನಿರ್ದೇಶಕ ಆಂಡಿ ಜಾನ್ಸನ್ ಅಭಿಪ್ರಾಯಪಟ್ಟಿದ್ದಾರೆ.

ಡಿಸೆಂಬರ್ 25ರಂದು ನಡೆದ ವಿಧ್ವಂಸಕ ವಿಫಲ ಯತ್ನವು ನಮಗೆ ಎಚ್ಚರಿಕೆಯ ಕರೆಗಂಟೆಯಾಗಿದ್ದರಿಂದ ನಮ್ಮ ಭದ್ರತಾ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಿಕೊಳ್ಳಲು ಸಹಾಯವಾಗಿದೆ ಎಂದು ಮತ್ತೊಬ್ಬ ತಜ್ಞರು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ