ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » 2012ರಲ್ಲಿ ಅಧ್ಯಕ್ಷಗಾದಿಗೆ ಸ್ಪರ್ಧಿಸುವ ಸಾಧ್ಯತೆ: ಪಾಲಿನ್ ಇಚ್ಛೆ (US | Sarah Palin | Alaska Governor | Barack Obama | Fox News)
Bookmark and Share Feedback Print
 
2012ರಲ್ಲಿ ಮತ್ತೆ ನಡೆಯಲಿರುವ ಅಮೆರಿಕ ಅಧ್ಯಕ್ಷಗಾದಿ ಚುನಾವಣೆಯಲ್ಲಿ ಸಾಧ್ಯತೆ ಇರುವುದಾಗಿ ಅಲಾಸ್ಕಾದ ಮಾಜಿ ಗವರ್ನರ್, ರಿಪಬ್ಲಿಕ್‌ನ ಪಕ್ಷದ ಉಪಾಧ್ಯಕ್ಷ ಅಭ್ಯರ್ಥಿಯಾಗಿದ್ದ ಸಾರಾ ಪಾಲಿನ್ ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.

ಅಧ್ಯಕ್ಷ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸುವ ಇಚ್ಚೆ ಇದೆಯೇ ಎಂಬ ಫೋಕ್ಸ್ ನ್ಯೂಸ್ ಸಂದರ್ಶನದಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ದೇಶಕ್ಕೆ ಏನಾದ್ರೂ ಸಹಾಯ ಮಾಡಬೇಕು ಎಂಬುದು ನನ್ನ ಇಚ್ಛೆಯಾಗಿದೆ. ಆ ನಿಟ್ಟಿನಲ್ಲಿ ಮತ್ತೊಮ್ಮೆ ಅಧ್ಯಕ್ಷಗಾದಿಗೆ ಸ್ಪರ್ಧಿಸುವ ನನ್ನ ಕನಸಿಗೆ ತೆರೆ ಎಳೆದಿಲ್ಲ ಎಂದರು.

ಅದರಲ್ಲಿಯೂ ಯಾವುದೇ ಅಮೆರಿಕನ್ ಪ್ರಜೆಯಾಗಿರಲಿ ಅವರು ವೈಯಕ್ತಿವಾಗಲಿ ಅಥವಾ ವ್ಯವಹಾರಿಕವಾಗಿಲಿ ತಮ್ಮ ಇಚ್ಛೆಗಳನ್ನು ಯಾವತ್ತೂ ಹತ್ತಿಕ್ಕಿಕೊಳ್ಳಬಾರದು ಎಂದು ಈ ಸಂದರ್ಭದಲ್ಲಿ ಸಲಹೆ ನೀಡಿದರು.

2008ರಲ್ಲಿ ನಡೆದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕ್‌ ಪಕ್ಷದಿಂದ ಸಾರಾ ಪಾಲಿನ್ ಅವರು ಉಪಾಧ್ಯಕ್ಷಗಾದಿಗೆ ಸ್ಪರ್ಧಿಸಿದ್ದರು. ಆದರೆ ಈ ಚುನಾವಣೆಯಲ್ಲಿ ಅವರು ಪರಾಜಯಗೊಂಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ