ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ರಷ್ಯಾ ಪ್ರಧಾನಿ ವ್ಲಾದಿಮಿರ್ ಪುಟಿನ್ ಪ್ರೇಯಸಿ, ಮಗು ನಾಪತ್ತೆ (Vladimir Putin | Alina Kabaeva | Russia | Prime Minister)
Bookmark and Share Feedback Print
 
ರಷ್ಯಾ ಪ್ರಧಾನಿ ವ್ಲಾದಿಮಿರ್ ಪುಟಿನ್ ಅವರ ಪ್ರೇಯಸಿ ಎಂದು ಹೇಳಲಾಗಿರುವ ಅಲಿನ್ ಕಬೇವಾ ಮತ್ತು ಅವರಿಗೆ ಕಳೆದ ವರ್ಷ ಜನಿಸಿದ್ದ ಮಗು ಇದ್ದಕ್ಕಿದ್ದಂತೆ ಕಾಣೆಯಾಗಿದ್ದಾರೆ ಎಂದು ವರದಿಗಳು ಹೇಳಿವೆ.

ಜಿಮ್ನಾಸ್ಟಿಕ್ ಮಾಜಿ ಚಾಂಪಿಯನ್ ಕಬೇವಾ 2006ರಿಂದ ಪುಟಿನ್ ಅವರ ರಹಸ್ಯ ಪ್ರೇಯಸಿಯಾಗಿದ್ದರು ಎಂದು ಮೂಲಗಳು ತಿಳಿಸಿವೆ. 57ರ ಹರೆಯದ ಪುಟಿನ್ ಅವರಿಗಿಂತ 30ಕ್ಕೂ ಹೆಚ್ಚು ವರ್ಷಗಳ ಅಂತರ ಹೊಂದಿರುವ ಕಬೇವಾ ಬಗ್ಗೆ ಇದುವರೆಗೂ ಯಾವುದೇ ಸುಳಿವು ದೊರೆತಿಲ್ಲ.

ಕಳೆದ ವರ್ಷ ಹುಟ್ಟಿದ್ದ ಪುಟಿನ್‌ರದ್ದು ಎಂದು ಆರೋಪಿಸಲಾಗಿರುವ ಅಕ್ರಮ ಸಂಬಂಧದ ಮಗುವಿಗೆ ಡಿಮಿಟ್ರಿ ಎಂದು ನಾಮಕರಣ ಮಾಡಲಾಗಿತ್ತು.

ಐದು ಅಡಿ ನಾಲ್ಕು ಇಂಚು ಎತ್ತರವಿರುವ ಆಕರ್ಷಕ ಮೈಕಟ್ಟಿನ 26ರ ಹರೆಯದ ಪುಟಿನ್ ಪ್ರೇಯಸಿ ಕಬೇವಾ ಎಲ್ಲೂ ಕಾಣುತ್ತಿಲ್ಲ. ಆಕೆಯ ಎಲ್ಲಾ ಸಂಪರ್ಕ ಸಂಖ್ಯೆಗಳು ಕಡಿತಗೊಂಡಿವೆ. ಆಕೆಯ ಮಾಜಿ ಕೋಚ್, ಹೆತ್ತವರು ಮತ್ತು ರಷ್ಯನ್ ಸಂಸತ್ತಿನಲ್ಲಿದ್ದ ಇತರ ಇಬ್ಬರು ಜಿಮ್ನಾಸ್ಟಿಕ್ ಪಟುಗಳ ಜತೆ ಮಾತ್ರ ಆಕೆ ಸಂಪರ್ಕದಲ್ಲಿದ್ದಾರೆ ಎಂದು ಕಬೇವಾ ಗೆಳತಿಯೆಂದು ಹೇಳಿಕೊಂಡಿರುವವರೊಬ್ಬರ ಹೇಳಿಕೆಯನ್ನು 'ನ್ಯೂಯಾರ್ಕ್ ಪೋಸ್ಟ್' ವರದಿ ಮಾಡಿದೆ.

ಅವರ ಅಂಗಿರಹಿತ ಅಥವಾ ಸೈಬೀರಿಯಾದಲ್ಲಿ ಹುಲಿ ಬೇಟೆಯಾಡುವ ಚಿತ್ರಗಳನ್ನು ಪ್ರಕಟಿಸುವ ಮಾಧ್ಯಮಗಳನ್ನು ಯಾವತ್ತೂ ದ್ವೇಷಿಸುತ್ತಾ ಬಂದಿರುವ ಪುಟಿನ್ ವಿರುದ್ಧ ಮಾಧ್ಯಮಗಳು ಸೃಷ್ಟಿಸಿದ ಕಥೆ ಎಂದೂ ಹೇಳಲಾಗಿದೆ.

ಪುಟಿನ್ ಕೆಲವು ವರ್ಷಗಳಿಂದ ಕಬೇವಾ ಜತೆ ಸಂಬಂಧ ಹೊಂದಿದ್ದರು. ಇದೇ ಕಾರಣಕ್ಕಾಗಿ ಅವರು ತನ್ನ ಎರಡು ಹೆಣ್ಣು ಮಕ್ಕಳ ತಾಯಿ ಹಾಗೂ ತನ್ನ ಪತ್ನಿ ಲುದ್ಮಿಲಾರಿಂದ ವಿಚ್ಛೇದನ ಪಡೆದುಕೊಂಡಿದ್ದರು ಎಂದು ಹೇಳಲಾಗಿತ್ತು.

ಸೋವಿಯತ್ ಒಕ್ಕೂಟದಲ್ಲಿರುವ ಉಜ್ಬೇಕಿಸ್ತಾನ್ ರಾಜಧಾನಿ ತಾಷ್ಕೆಂಟ್‌ನಲ್ಲಿ ಜನಿಸಿದ ಮುಸ್ಲಿಮ್ ತಂದೆಗೆ ಹುಟ್ಟಿದ ಕಬೇವಾರನ್ನು ಮದುವೆಯಾಗಿರುವುದು ಬಹಿರಂಗವಾದಲ್ಲಿ ತನ್ನ ರಾಜಕೀಯ ಜೀವನಕ್ಕೆ ತೊಂದರೆಯಾಗಬಹುದು ಎಂದುಕೊಂಡ ಪುಟಿನ್, ಈ ಸಂಬಂಧವನ್ನು ಗುಪ್ತವಾಗಿಟ್ಟುಕೊಂಡು ಬಂದಿದ್ದಾರೆ ಎಂದೂ ರಾಜಕೀಯ ಪಂಡಿತರು ಹೇಳುತ್ತಾರೆ.
ಸಂಬಂಧಿತ ಮಾಹಿತಿ ಹುಡುಕಿ