ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಲಂಕಾಧ್ಯಕ್ಷ ರಾಜಪಕ್ಷೆ ಹತ್ಯೆ ಸಂಚು ಆರೋಪ; ಫೊನ್ಸೇಕಾ ಬಂಧನ (Gen Sarath Fonseka | Sri Lanka | presidential candidate | Mahindra Rajapaksa)
Bookmark and Share Feedback Print
 
Sarath Fonseka
PR
ಶ್ರೀಲಂಕಾ ಪರಾಜಿತ ಅಧ್ಯಕ್ಷೀಯ ಅಭ್ಯರ್ಥಿ ಮಿಲಿಟರಿ ಮಾಜಿ ಮುಖ್ಯಸ್ಥ ಜನರಲ್ ಸರತ್ ಫೊನ್ಸೇಕಾ ಅವರನ್ನು ಸೋಮವಾರ ರಾತ್ರಿ ದ್ವೀಪರಾಷ್ಟ್ರದ ಮಿಲಿಟರಿ ಪೊಲೀಸರು ಅಮಾನುಷವಾಗಿ ಬಂಧಿಸಿದ್ದಾರೆ.

ಲಂಕಾಧ್ಯಕ್ಷ ಮಹೀಂದ್ರಾ ರಾಜಪಕ್ಷೆ ಮತ್ತು ಅವರ ಕುಟುಂಬವನ್ನು ಹತ್ಯೆಗೈಯಲು ಸಂಚು ರೂಪಿಸಿದ್ದಾರೆ ಎಂಬ ಆರೋಪವನ್ನು ಫೊನ್ಸೇಕಾ ಮೇಲೆ ಹೊರಿಸಲಾಗಿದ್ದು, ಅವರನ್ನು ಕೋರ್ಟ್ ಮಾರ್ಷಲ್‌ಗೆ ಒಳಪಡಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.

ಫೊನ್ಸೇಕಾ ಅವರು ಮಿಲಿಟರಿ ಅಪರಾಧಗಳನ್ನು ಮಾಡಿರುವುದರಿಂದ ಅವರನ್ನು ಸೇನಾ ಕಾಯ್ದೆಯಡಿಯಲ್ಲಿ ಕೋರ್ಟ್ ಮಾರ್ಷಲ್‌‌ನಲ್ಲಿ ವಿಚಾರಣೆ ನಡೆಸಲಾಗುತ್ತದೆ ಎಂದು ರಾಷ್ಟ್ರೀಯ ಭದ್ರತಾ ಪಡೆಯ ಮಾಧ್ಯಮ ವಿಭಾಗದ ಮಹಾ ನಿರ್ದೇಶಕ ಲಕ್ಷ್ಮಣ್ ಹುಲುಗುಲ್ಲಾ ತಿಳಿಸಿದ್ದಾರೆ.

ಆದರೆ ಫೊನ್ಸೇಕಾರನ್ನು ಬಂಧಿಸಿದ ರೀತಿಗೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರನ್ನು ನಮ್ಮೆದುರೇ ಅಗೌರವಯುತವಾಗಿ ದರದರನೆ ಎಳೆದುಕೊಂಡು ಹೋಗಲಾಯಿತು ಎಂದು ಶ್ರೀಲಂಕಾ ಮುಸ್ಲಿಂ ಕಾಂಗ್ರೆಸ್ ನಾಯಕ ರವೂಫ್ ಹಕೀಮ್ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ಶ್ರೀಲಂಕಾ ಮಿಲಿಟರಿ ಮಾಜಿ ಮುಖ್ಯಸ್ಥರ ಸುರಕ್ಷತೆ ಬಗ್ಗೆ ತಮ್ಮ ಇಡೀ ಕುಟುಂಬವೇ ತೀವ್ರ ಭೀತಿಗೊಳಗಾಗಿದೆ ಎಂದು ಫೊನ್ಸೇಕಾ ಅವರ ಸಿಡ್ನಿಯಲ್ಲಿರುವ ಅಳಿಯ ಮ್ಯಾಕ್ಸ್ ಮಲ್ವೆನ್ನಾ ಆತಂಕ ತೋಡಿಕೊಂಡಿದ್ದಾರೆ.

ರಾಜಪಕ್ಷೆಯವರಿಗೆ ನಿಷ್ಠರಾಗಿರುವ ಈಗಿನ ಮೇಜರ್ ಜನರಲ್ ಸೇರಿದಂತೆ 100ಕ್ಕೂ ಹೆಚ್ಚು ವಿಶೇಷ ಪಡೆಗಳು ತನ್ನ ಮಾವನ ಕಚೇರಿಯನ್ನು ಭಾನುವಾರ ರಾತ್ರಿ ಸುತ್ತುವರಿದು, ಅಲ್ಲಿದ್ದ ನಾಲ್ಕು ಅಂಗರಕ್ಷಕರ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದವು. ನಂತರ ಹೊರಗೆ ಕಾಯುತ್ತಿದ್ದ ವಾಹನಕ್ಕೆ ಅವರನ್ನು ದರದರನೆ ಎಳೆದುಕೊಂಡು ಹೋಗಲಾಯಿತು ಎಂದು ಕಳೆದ ವಾರವಷ್ಟೇ ಆಸ್ಟ್ರೇಲಿಯಾಕ್ಕೆ ವಾಪಸಾಗಿರುವ ಮ್ಯಾಕ್ಸ್ ವಿವರಣೆ ನೀಡಿದ್ದಾರೆ.

ಇತ್ತೀಚೆಗಷ್ಟೇ ನಡೆದಿದ್ದ ಲಂಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನುಭವಿಸಿದ್ದ ಫೊನ್ಸೇಕಾರವರು ರಾಜಪಕ್ಷೆಯವರನ್ನು ಹತ್ಯೆಗೈಯಲು ಸಂಚು ರೂಪಿಸಿದ್ದಾರೆ ಎಂದು ಹೇಳಲಾಗಿದ್ದು, ಈ ಸಂಬಂಧ ಇದುವರೆಗೆ ಮಿಲಿಟರಿ ಮಾಜಿ ಮುಖ್ಯಸ್ಥ ಸೇರಿದಂತೆ 13 ಮಿಲಿಟರಿ ನಿವೃತ್ತ ಅಧಿಕಾರಿಗಳನ್ನು ಬಂಧಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ