ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಮೆರಿಕಾ ದಾಳಿಗೆ ಹಕೀಮುಲ್ಲಾ ಮೆಹ್ಸೂದ್ ಸತ್ತಿದ್ದಾನೆ: ತಾಲಿಬಾನ್ (Pakistani Taliban | Hakimullah Mehsud | US drone strike | Tehrik-e-Taliban Pakistan)
Bookmark and Share Feedback Print
 
ಅಮೆರಿಕಾ ಡ್ರೋನ್ ದಾಳಿಯಿಂದ ಗಾಯಗೊಂಡಿದ್ದ 'ತೆಹ್ರಿಕ್ ಇ ತಾಲಿಬಾನ್ ಪಾಕಿಸ್ತಾನ್' ಕಮಾಂಡರ್ ಹಕೀಮುಲ್ಲಾ ಮೆಹ್ಸೂದ್ ಸಾವನ್ನಪ್ಪಿದ್ದಾನೆ ಎಂದು ಭಯೋತ್ಪಾದಕ ಸಂಘಟನೆ ಖಚಿತಪಡಿಸಿದೆ.

ಇದರೊಂದಿಗೆ ಆತನ ಬಗ್ಗೆ ಕಳೆದ ಹಲವು ದಿನಗಳಿಂದ ಮೂಡಿದ್ದ ಸಂಶಯಗಳು ಕೊನೆಗೊಂಡಿವೆ. ಜನವರಿ 14ರಂದು ಉತ್ತರ ವಜಿರಿಸ್ತಾನದ ಶಕ್ತೋಯ್ ಪ್ರದೇಶದಲ್ಲಿ ಅಮೆರಿಕಾ ನಡೆಸಿದ್ದ ಡ್ರೋನ್ ದಾಳಿಗೆ ಗಂಭೀರವಾಗಿ ಗಾಯಗೊಂಡಿದ್ದ 28ರ ಹರೆಯದ ಮೆಹ್ಸೂದ್ ಸಾವನ್ನಪ್ಪಿದ್ದಾನೆ ಎಂದು ಔರಾಕೈ ಬುಡಕಟ್ಟು ಪ್ರದೇಶದ ತಾಲಿಬಾನ್ ಮೂಲ ಸ್ಥಳೀಯ ವಾರ್ತಾವಾಹಿನಿಗಳಿಗೆ ಖಚಿತಪಡಿಸಿದೆ.
PR


ಕರಾಚಿಗೆ ಚಿಕಿತ್ಸೆಗೆಂದು ಕರೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಪಂಜಾಬ್ ಪ್ರಾಂತ್ಯದ ಮುಲ್ತಾನ್ ನಗರದ ಪಕ್ಕದಲ್ಲಿ ಮೆಹ್ಸೂದ್ ಸಾವನ್ನಪ್ಪಿದ್ದಾನೆ. ಆತನ ದೇಹವನ್ನು ಬುಡಕಟ್ಟು ಪ್ರದೇಶಕ್ಕೆ ಕೊಂಡೊಯ್ಯಲಾಗಿತ್ತು ಎಂದು ಮೂಲಗಳು ಹೇಳಿವೆ.

ಅದೇ ಹೊತ್ತಿಗೆ ಮೆಹ್ಸೂದ್ ಎರಡು ವಾರಗಳ ಹಿಂದೆಯೇ ಸಾವನ್ನಪ್ಪಿದ್ದ ಮತ್ತು ಮಾವನ ಗ್ರಾಮ ಔರಾಕೈ ಪ್ರದೇಶದಲ್ಲಿ ದಫನ ಮಾಡಲಾಗಿದೆ ಎಂದೂ ಕೆಲವು ಮಾಧ್ಯಮ ವರದಿಗಳು ತಿಳಿಸಿವೆ.

ತಾಲಿಬಾನ್‌ನ ಪಾಕಿಸ್ತಾನಿ ಸಂಘಟನೆ 'ತೆಹ್ರಿಕ್ ಇ ತಾಲಿಬಾನ್ ಪಾಕಿಸ್ತಾನ್' ವಕ್ತಾರ ಅಜಂ ತಾರಿಕ್ ಮೆಹ್ಸೂದ್ ಸಾವಿನ ಬಗ್ಗೆ ಇನ್ನಷ್ಟೇ ಅಧಿಕೃತ ಹೇಳಿಕೆಯನ್ನು ನೀಡಬೇಕಾಗಿದೆ. ಮೆಹ್ಸೂದ್ ಬದುಕಿದ್ದಾನೆ ಮತ್ತು ರಹಸ್ಯ ತಾಣವೊಂದರಲ್ಲಿ ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಾರಿಕ್ ಕಳೆದ ಕೆಲವು ದಿನಗಳಿಂದ ಹೇಳುತ್ತಾ ಬಂದಿದ್ದಾನೆ.

ಅದೇ ಹೊತ್ತಿಗೆ ಪಾಕಿಸ್ತಾನ್ ತಾಲಿಬಾನ್ ಸಂಘಟನೆಯ ಮುಂದಿನ ಕಮಾಂಡರ್ ನೂರ್ ಜಮಾಲ್ ಆಲಿಯಾಸ್ ಮೌಲಾನಾ ತೂಫಾನ್‌ನನ್ನು ಆಯ್ಕೆಗೊಳಿಸಲಾಗಿದೆ ಎಂದೂ ತಾಲಿಬಾನ್ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ