ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಹೈಟಿ: ಒಂದು ತಿಂಗಳಾದ್ರೂ ಅವಶೇಷದಡಿ ಬದುಕುಳಿದ ಯುವಕ! (Haiti miracle | London | Evan Muncie | quake)
Bookmark and Share Feedback Print
 
ಕೆರೆಬಿಯನ್ ರಾಷ್ಟ್ರದ ಹೈಟಿಯಲ್ಲಿ ಭೀಕರ ಭೂಕಂಪ ಸಂಭವಿಸಿ ಒಂದು ತಿಂಗಳು ಕಳೆದ ನಂತರ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದ 28ರ ಹರೆಯದ ವ್ಯಕ್ತಿಯೊಬ್ಬ ಪವಾಡ ಸದೃಶವಾಗಿ ಬದುಕುಳಿದ ಘಟನೆ ಪೋರ್ಟ್ ಅವ್ ಪ್ರಿನ್ಸ್‌ನಲ್ಲಿ ನಡೆದಿದೆ.

ಹೈಟಿ ಭೀಕರ ದುರಂತದಲ್ಲಿ ಎರಡೂವರೆ ಲಕ್ಷಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು. ನಂತರ ಸರ್ಕಾರ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ ಎರಡು ವಾರಗಳ ನಂತರ ಇವಾನ್ ಮುನ್ಸಿಸೈ ಒಂದು ತಿಂಗಳ ನಂತರ ಅಚ್ಚರಿಕರ ರೀತಿಯಲ್ಲಿ ಬದುಕುಳಿದಿದ್ದಾನೆ.

ಭೂಕಂಪನದಿಂದಾಗಿ ಮಾರ್ಕೆಟ್ ಸ್ಥಳದ ಅವಶೇಷಗಳಡಿಯಲ್ಲಿ ಹೂತು ಹೋಗಿದ್ದ ಇವಾನ್ ಜೀವಂತವಾಗಿ ಪತ್ತೆಯಾಗಿರುವುದಾಗಿ ನ್ಯೂಜಿಲ್ಯಾಂಡ್ ಹೆರಾಲ್ಡ್ ವರದಿ ತಿಳಿಸಿದೆ.

ಅವಶೇಷಗಳಡಿಯಲ್ಲಿ ಪತ್ತೆಯಾಗಿರುವ ಇವಾನ್ ತೀವ್ರ ಅಸ್ವಸ್ಥನಾಗಿರುವುದಾಗಿ ವೈದ್ಯರು ತಿಳಿಸಿದ್ದು, ಆತನಿಗೆ ಯಾವುದೇ ಗಂಭೀರ ಸ್ವರೂಪದ ಗಾಯವಾಗಿಲ್ಲ ಎಂದು ಹೇಳಿದ್ದಾರೆ.

ಇವಾನ್ ಆಹಾರದ ಕೊರತೆಯಿಂದಾಗಿ ಕೃಶವಾಗಿರುವುದಾಗಿ ಮಿಯಾಮಿ ಫೀಲ್ಡ್ ಆಸ್ಪತ್ರೆಯ ಡಾ.ಮೈಕ್ ಕೊನ್ನೆಲೈ ವಿವರಿಸಿದ್ದಾರೆ. ಆತ ಚೇತರಿಸಿಕೊಳ್ಳಲು ಇನ್ನೂ ಕೆಲವು ದಿನಗಳ ಅಗತ್ಯವಿದೆ ಎಂದರು. ಇವಾನ್‌ನ ಎರಡು ಪಾದಗಳಿಗೆ ಗಾಯವಾಗಿದ್ದು, ಅದಕ್ಕೆ ಚಿಕಿತ್ಸೆ ಮಾಡಲಾಗಿದೆ ಎಂದು ಹೇಳಿದರು.

ತಿಂಗಳು ಕಾಲ ಅವಶೇಷಗಳಡಿಯಲ್ಲಿದ್ದ ಇವಾನ್‌ನನ್ನು ಹೊರ ತೆಗೆದ ಸ್ವಲ್ಪ ಸಮಯದ ನಂತರವೂ ಆತ ತಾನಿನ್ನೂ ಅವಶೇಷಗಳಡಿಯಲ್ಲಿಯೇ ಇದ್ದಿರುವುದಾಗಿ ನಂಬಿದ್ದ ಎಂದು ವೈದ್ಯರು, ಆತ ಬದುಕಿರುವುದು ನಿಜಕ್ಕೂ ಒಂದು ಪವಾಡವೇ ಆಗಿದೆ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ