ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » 14ರಲ್ಲೇ ಸೆಕ್ಸ್ ಮಾಡಿದ್ದೆ ಎಂದಾತನಿಗೆ ಸಾವಿರ ಛಡಿಯೇಟು..! (Saudi sex braggart | 1,000 lashes | Mazen Abdul-Jawad | sexual encounters)
Bookmark and Share Feedback Print
 
ತಾನು 14ರ ಹರೆಯದಲ್ಲೇ ಪಕ್ಕದ ಮನೆಯಾಕೆಯೊಂದಿಗೆ ಸೆಕ್ಸ್ ಮಾಡಿದ್ದೆ ಎಂದೆಲ್ಲಾ ಟೀವಿ ಮುಂದೆ ತನ್ನ ಕಾಮಪುರಾಣ ಹೇಳಿಕೊಂಡಿದ್ದ ಸೌದಿ ಅರೇಬಿಯಾ ಯುವಕನೊಬ್ಬನಿಗೆ ನ್ಯಾಯಾಲಯವು ಐದು ವರ್ಷಗಳ ಜೈಲು ಹಾಗೂ ಸಾವಿರ ಛಡಿಯೇಟು ಶಿಕ್ಷೆಯನ್ನು ಖಾತ್ರಿಪಡಿಸಿದೆ.

'ಸೌದಿ ಅರೇಬಿಯಾ' ವಿಮಾನಯಾನ ಸಂಸ್ಥೆಯ ಉದ್ಯೋಗಿ, ನಾಲ್ಕು ಮಕ್ಕಳ ತಂದೆ ಹಾಗೂ ವಿಚ್ಛೇದಿತನಾಗಿರುವ 33ರ ಹರೆಯದ ಮೇಜನ್ ಅಬ್ದುಲ್ ಜಾವೇದ್ ಎಂಬಾತ ಕಳೆದ ವರ್ಷ 'ಎಲ್‌ಬಿಸಿ' ಟೀವಿಯಲ್ಲಿ (ಲೆಬಾನೀಸ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್) ತನ್ನ ವಿವಾಹಪೂರ್ವ ಲೈಂಗಿಕ ಜೀವನದ ಬಗ್ಗೆ ಮುಕ್ತವಾಗಿ 'ಬೋಲ್ಡ್ ರೆಡ್' ಎಂಬ ಕಾರ್ಯಕ್ರಮದಲ್ಲಿ ಬಡಾಯಿ ಕೊಚ್ಚಿಕೊಂಡಿದ್ದ.
ಜಾವೇದ್
PR


ಕೆಳಗಿನ ನ್ಯಾಯಾಲಯ ನೀಡಿದ್ದ ತೀರ್ಪನ್ನು ಎತ್ತಿ ಹಿಡಿದಿರುವ ನ್ಯಾಯಾಲಯವು ಜಾವೇದ್‌‌ಗೆ ಸಾವಿರ ಛಡಿಯೇಟಿನ ಜತೆಗೆ ಐದು ವರ್ಷಗಳ ಪ್ರಯಾಣ ನಿಷೇಧವನ್ನೂ ಹೇರಿದೆ. ಆತನ ಜತೆ ಟೀವಿಯಲ್ಲಿ ಕಾಣಿಸಿಕೊಂಡಿದ್ದ ಮೂವರು ಗೆಳೆಯರಿಗೆ ಎರಡು ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ತಲಾ 300 ಚಾಟಿಯೇಟುಗಳನ್ನು ಪ್ರಕಟಿಸಲಾಗಿದೆ. ಆದರೆ ಮತ್ತೆ ಮೇಲಿನ ಕೋರ್ಟಿನಲ್ಲಿ ತೀರ್ಪನ್ನು ಪ್ರಶ್ನಿಸುವ ಅವಕಾಶ ಜಾವೇದ್‌ಗೆ ನೀಡಲಾಗಿದೆ.

ಈ ಕಾರ್ಯಕ್ರಮವನ್ನು ಬಿತ್ತರಿಸಿದ್ದ ಎಲ್‌ಬಿಸಿ ಟೀವಿ ವಾಹಿನಿಯ ಎರಡು ಕಚೇರಿಗಳನ್ನು ಸೌದಿ ಅರೇಬಿಯಾ ಸರಕಾರ ಈಗಾಗಲೇ ಮುಚ್ಚಿದೆ. ಇದರ ಪ್ರಸಾರಕ್ಕೂ ನಿರ್ಬಂಧ ಹೇರಲಾಗಿದೆ.

ಜಾವೇದ್ ಏನು ಹೇಳಿದ್ದ...
ತನ್ನ ಮೇಲ್ಛಾವಣಿ ಮಡಚಬಹುದಾದ ಕೆಂಪು ಓಪನ್ ಕಾರಿನಲ್ಲಿ ಅಥವಾ ಸೂಪರ್ ಮಾರ್ಕೆಟ್‌ಗಳಲ್ಲಿ ಹುಡುಗಿಯರನ್ನು ಹೇಗೆ ಬುಟ್ಟಿಗೆ ಹಾಕಿಕೊಳ್ಳುತ್ತಿದ್ದ ಮತ್ತು ಸುತ್ತಾಡಿಸುತ್ತಿದ್ದ ಎಂಬುದನ್ನು ಆತ ಕಾರ್ಯಕ್ರಮದಲ್ಲಿ ವಿವರಣೆ ನೀಡಿದ್ದ.

ಅಲ್ಲದೆ ಮೊಬೈಲ್ ಫೋನ್ ತಂತ್ರಜ್ಞಾನದ ಬ್ಲೂಟೂತ್ ಬಳಸಿ ಹುಡುಗಿಯರನ್ನು ಸೆಳೆಯುವುದನ್ನೂ ವಿವರಿಸಿದ್ದ ಆತ, ತನ್ನ ರೂಮಿನಲ್ಲಿ ತಾನು ಬಳಸುವ ಕಾಮ ಪ್ರಚೋದಕ ಆಕರಗಳು, ಲುಬ್ರಿಕೆಂಟ್ಸ್‌ಗಳನ್ನು ಕೂಡ ಪ್ರದರ್ಶಿಸಿದ್ದ.

ತಾನು ಬಾಲಕನಾಗಿದ್ದಾಗಲೇ ಪಕ್ಕದ ಮನೆಯ ಮಹಿಳೆಯ ಜತೆ ದೈಹಿಕ ಸಂಪರ್ಕ ಮಾಡಿದ್ದೆ. ಆಗ ನನಗೆ ಕೇವಲ 14 ವರ್ಷವಾಗಿತ್ತು ಎಂದೂ ತಿಳಿಸಿದ್ದ.

ನಾನು ಡ್ರೈವಿಂಗ್ ಮಾಡುವಾಗ ಮೊಬೈಲ್ ಬ್ಲೂಟೂತ್ ಆನ್ ಮಾಡುತ್ತಿದ್ದೆ. ಅದರಲ್ಲಿ ನನ್ನ ಕಾರು ಮತ್ತು ಮೊಬೈಲ್ ನಂಬರ್ ಯಾರಿಗೆ ಬೇಕಾದರೂ ಸಿಗುತ್ತಿತ್ತು. ಈ ಸಂದರ್ಭದಲ್ಲಿ ನನಗೆ ಸಾಕಷ್ಟು ಹುಡುಗಿಯರಿಂದ ಆಹ್ವಾನಗಳು ಬರುತ್ತಿದ್ದವು. ಕೆಲವು ಬಾರಿ ನಾನು ಅವರಿಗೆ ತಿರುಗಿ ಕರೆ ಮಾಡುತ್ತಿದ್ದೆ ಮತ್ತು ಆಕೆ ನನ್ನೊಂದಿಗೆ ಹೊರಗೆ ಬರುತ್ತಿದ್ದಳು ಎಂದು 'ಬೋಲ್ಡ್ ರೆಡ್'ನಲ್ಲಿ ಹೇಳಿದ್ದ.

ಈ ಕಾರ್ಯಕ್ರಮವನ್ನು ವೀಕ್ಷಿಸಿದ ಸಾವಿರಾರು ಮಂದಿ ಆಕ್ರೋಶಗೊಂಡು ದೂರುಗಳನ್ನು ನೀಡಿದ ನಂತರ ಜಾವೇದ್, ಆತನ ಜತೆ ಕಾಣಿಸಿಕೊಂಡ ಇತರ ಮೂವರು ಗೆಳೆಯರು, ಟೀವಿ ಚಾನೆಲ್ ನಿರೂಪಕರು ಮತ್ತು ಛಾಯಾಗ್ರಾಹಕನನ್ನು ಬಂಧಿಸಿ ಜೈಲಿಗಟ್ಟಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ