ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಲಂಕಾ ನನ್ನ ಗಂಡನನ್ನು ಪ್ರಾಣಿಯಂತೆ ನಡೆಸಿಕೊಂಡಿದೆ: ಅನೋಮಾ (Anoma Fonseka | Sri Lanka | Sarath Fonseka | Colombo)
Bookmark and Share Feedback Print
 
ಶ್ರೀಲಂಕಾ ಸರ್ಕಾರ ಮಿಲಿಟರಿ ಮಾಜಿ ಮುಖ್ಯಸ್ಥ ಸರತ್ ಫೋನ್ಸೆಕಾ ಅವರನ್ನು ಅಪಹರಿಸಿರುವುದಾಗಿ ಆರೋಪಿಸಿರುವ ಫೋನ್ಸೆಕಾ ಪತ್ನಿ, ಲಂಕಾ ಸರ್ಕಾರ ತನ್ನ ಗಂಡನನ್ನು ಪ್ರಾಣಿಯಂತೆ ನಡೆಸಿಕೊಂಡಿದೆ ಎಂದು ತಿಳಿಸಿದ್ದಾರೆ.

ಸರತ್ ಫೋನ್ಸೆಕಾ ಅವರನ್ನು ಬಂಧಿಸಿರುವುದಲ್ಲ, ಇದೊಂದು ಅಪಹರಣ ಎಂದು ಗದ್ಗದಿತರಾಗಿ ತಮ್ಮ ನಿವಾಸದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಮುಂದೆ ಅಳಲು ತೋಡಿಕೊಂಡ ಅನೋಮಾ ಫೋನ್ಸೆಕಾ,ತನ್ನ ಗಂಡನನ್ನು ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ ಎಂದು ದೂರಿದರು.

ಜನವರಿ 26ರಂದು ನಡೆದ ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಫೋನ್ಸೆಕಾ ಅವರು ಸೋಲನ್ನನುಭವಿಸಿದ್ದರು. ಅಲ್ಲದೇ, ಅಧ್ಯಕ್ಷೀಯ ಚುನಾವಣೆಯ ಫಲಿತಾಂಶದ ವಿರುದ್ಧ ಕೋರ್ಟ್ ಮೆಟ್ಟಿಲೇರುವುದಾಗಿ ಫೋನ್ಸೆಕಾ ಬೆದರಿಕೆಯೊಡ್ಡಿದ್ದರು. ಏತನ್ಮಧ್ಯೆ ಲಂಕಾ ಅಧ್ಯಕ್ಷರಾಗಿ ಪುನರಾಯ್ಕೆಗೊಂಡಿರುವ ಮಹೀಂದ ರಾಜಪಕ್ಸೆ ಅವರನ್ನು ಫೋನ್ಸೆಕಾ ಹತ್ಯೆಗೈಯುವ ಸಂಚು ರೂಪಿಸಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ ನಡೆದ ನಾಟಕೀಯ ಬೆಳವಣಿಗೆಯೊಂದರಲ್ಲಿ ಅವರನ್ನು ಮಿಲಿಟರಿ ಅಧಿಕಾರಿಗಳು ಬಂಧಿಸಿದ್ದರು.

ರಾತ್ರಿ ಏಕಾಏಕಿ ಮನೆಗೆ ದಾಳಿ ನಡೆಸಿದ ಮಿಲಿಟರಿ ಅಧಿಕಾರಿಗಳು ಫೋನ್ಸೆಕಾ ಅವರನ್ನು ಹೊರಗೆಳೆದು, ಪ್ರಾಣಿಯಂತೆ ನಡೆಸಿಕೊಂಡಿದ್ದಾರೆ. ಆದರೆ ಅವರನ್ನು ಎಲ್ಲಿ ಅಡಗಿಸಿ ಇಡಲಾಗಿದೆ ಎಂಬುದು ಸಹ ತಿಳಿದಿಲ್ಲ. ಅವರ ಸ್ಥಿತಿ ಏನಾಗಿದೆಯೋ ಎಂಬುದು ಕೂಡ ಗೊತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

'ನಮಗೆ ಗೊತ್ತು, ಶ್ರೀಲಂಕಾ ಸರ್ಕಾರ ನನ್ನ ಗಂಡನನ್ನು ಬಂಧಿಸುತ್ತದೆ ಎಂದು, ಆದರೆ ಇಂತಹ ಆರೋಪ ಹೊರಿಸಿ ಬಂಧಿಸುತ್ತಾರೆಂದು ತಿಳಿದಿರಲಿಲ್ಲ ಎಂದು ಅನೋಮಾ ಅಸಹಾಯಕತೆ ವ್ಯಕ್ತಪಡಿಸಿದರು.
ಸಂಬಂಧಿತ ಮಾಹಿತಿ ಹುಡುಕಿ